ವಿದ್ಯಾರ್ಥಿಗಳಿಗೆ ವಂಚಿಸಿ ಗೋಮಾಂಸ ತಿನ್ನಿಸಿದ ಪ್ರಾಚಾರ್ಯರ ಹಿಂದೆ ಕಮ್ಯುನಿಸ್ಟರ ಕೈವಾಡ?
ತಿರುವನಂತಪುರ: ಹಿಂದೂ ಧರ್ಮದ ವಿರುದ್ಧ ಸದಾ ಹಲ್ಲು ಮಸೆಯುವ ಕಮ್ಯುನಿಸ್ಟರು ಆಡಳಿತ ನಡೆಸುವ ಕೇರಳದಲ್ಲಿ ಹಿಂದೂಗಳ ವಿರುದ್ಧ ನಿತ್ಯ ಷಡ್ಯಂತ್ರಗಳು, ಕುತಂತ್ರಗಳು ನಡೆಯುವುದು ಸಾಮಾನ್ಯ. ಆದರೆ ಇದೀಗ ಆ ಚಾಳಿ ಕೇರಳಕ್ಕೆ ಶಿಕ್ಷಣಕ್ಕೆಂದು ಬಂದಿರುವ ವಿದ್ಯಾರ್ಥಿಗಳಿಗೂ ವ್ಯಾಪಿಸಿದ್ದು, ಹಿಂದೂಗಳ ಮನಸ್ಸಿಗೆ ಘಾಸಿಯಾಗುವಂತ, ನಿಷಿದ್ಧ ಆಹಾರವನ್ನು ತಿನ್ನಿಸಲು ಪ್ರಾಚಾರ್ಯರೇ ಒತ್ತಾಯ ಮಾಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಪ್ರಾರ್ಚಾರ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇರಳದ ಅಲ್ಲೆಪಿಯ ಕುಟ್ಟನಾಡಿನ ಕೊಚ್ಚಿನ್ ವಿಶ್ವವಿದ್ಯಾಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದಿರುವ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಗೋ ಮಾಂಸದ ತುಂಡುಗಳನ್ನು ನೀಡಿ, ಇದು ಸಸ್ಯಹಾರ ಇದೇ ತಿನ್ನಿ ಎಂದು ಒತ್ತಾಯಿಸುತ್ತಿದ್ದಾನೆ. ಇದರಿಂದ ಬೇಸತ್ತಿರುವ ವಿದ್ಯಾರ್ಥಿಗಳು ಪ್ರಾಚಾರ್ಯರು ಉದ್ದೇಶಪೂರ್ವಕವಾಗಿ ನಮ್ಮ ಧರ್ಮದ ಭಾವನೆಗಳಿಗೆ ಘಾಸಿಯುಂಟು ಮಾಡುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಸರಸ್ವತಿ ಪೂಜೆ ಮಾಡಿದ್ದೇ ವಿದ್ಯಾರ್ಥಿಗಳ ತಪ್ಪು
ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಡಾ.ಸುನೀಲ್ ಕುಮಾರ ಹಿಂಸೆ ನೀಡಲು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸರಸ್ವತಿ ಪೂಜೆ ಮಾಡಿದ್ದೇ ಕಾರಣ ಎನ್ನಲಾಗಿದೆ. ಸರಸ್ವತಿ ಪೂಜೆ ಮಾಡಿದ್ದರಿಂದ ರೋಸಿ ಹೋಗಿರುವ ಪ್ರಾಚಾರ್ಯ ಸುನೀಲ್ ಕುಮಾರ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವಂತೆ ವರ್ತಿಸುತ್ತಿದ್ದಾನೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
Leave A Reply