ತ್ರಿವಳಿ ತಲಾಖ್ ಗೆ ಕೊನೆ ಮೊಳೆ ಹೊಡೆಯುವವರೆಗೆ ಹೋರಾಟ ಎಂದವರಾರು ಗೊತ್ತೆ..?
ಮಲ್ಲಪುರಂ: ಮುಸ್ಲಿಂ ಮಹಿಳೆಯರನ್ನು ಮದುವೆ ಮಾಡಿಕೊಂಡು ಬೀದಿಗೆ ತಳ್ಳುತ್ತಿರುವ ಕೊಳಕು ಪದ್ಧತಿಯಾದ ತ್ರಿವಳಿ ತಲಾಖ್ ನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ವಿರೋಧ ಪಕ್ಷಗಳು ಮುಸ್ಲಿಂ ಮಹಿಳೆಯರನ್ನು ರಕ್ಷಿಸುವ ತ್ರಿವಳಿ ತಲಾಖ್ ನಿಷೇಧದ ಮಸೂದೆಗೆ ಅಡ್ಡಿಪಡಿಸುತ್ತಿವೆ. ಆದರೆ ಇದೀಗ ಮುಸ್ಲಿಂ ಮಹಿಳೆಯರು ಜಾಗೃತಿಯಾಗಿದ್ದು, ತ್ರಿವಳಿ ತಲಾಖ್ ನಿಷೇಧವಾಗುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಇದೀಗ ಅವರ ಸಾಲಿಗೆ ಸೇರಿರುವುದು ದೇಶದ ಪ್ರಥಮ ಮುಸ್ಲಿಂ ಇಮಾಮ್ ಆಗಿ ನೇಮಕವಾಗಿರುವ ಜಮೀದಾ.
ಪುರುಷರಿಗಷ್ಟೇ ಸೀಮಿತವಾಗಿದ್ದ ಇಮಾಮ್ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಜಮೀದಾ ತ್ರಿವಳಿ ತಲಾಖ್ ನಿಷೇಧ ಮಾಡುವವರೆಗೆ ಹೋರಾಟ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಖುರಾನ್ ಸುನ್ನತ್ ಸೊಸೈಟಿಯ ರಾಜ್ಯ ಕಾರ್ಯದರ್ಶಿಯಾಗಿರುವ ಜಮೀದಾ ಭಾರತದ ಇತಿಹಾಸದಲ್ಲೆ ಮೊದಲ ಬಾರಿಗೆ ಇಮಾಮ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಾರೆ. ಶುಕ್ರವಾರದ ಪ್ರಾರ್ಥನೆಯನ್ನು ಜಮಿದಾ ನೇತೃತ್ವಹಿಸಿಕೊಳ್ಳುವ ಮೂಲಕ ಮುಸ್ಲಿಂ ವ್ಯವಸ್ಥೆಯಲ್ಲಿದ್ದ ಪುರುಷ ಪ್ರಧಾನ ಪದ್ಧತಿಗೆ ಕೊನೆ ಮೊಳೆ ಹೊಡೆದಿದ್ದು, ತ್ರಿವಳಿ ತಲಾಖ್ ಪದ್ಧತಿ ನಿಷೇಧದವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಜಮೀದಾ ಅವರ ಈ ದಿಟ್ಟ ನಿಲುವುಗಳಿಂದ ಕೆಲವು ಮುಸ್ಲಿಂ ಮೂಲಭೂತವಾದಿಗಳು ಬೆದರಿಕೆ ಒಡ್ಡಿದ್ದು, ಅವರ ಮೇಲೆ ದಾಳಿ, ಹಲ್ಲೆ ನಡೆಸಲು ಕೂಡ ಯತ್ನಿಸಿದ್ದಾರೆ. ಆದರೆ ವಿರೋಧಿಗಳಿಗೆ ತಕ್ಕ ಉತ್ತರ ನೀಡಿರುವ ಜಮೀದಾ ಇಮಾಮ್ ಕೇವಲ ಪುರುಷರಷ್ಠೇ ಆಗಬೇಕು ಎಂಬ ನಿಯಮ ಷರಿಯಾದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ನಿಷೇಧಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿರುವುದಕ್ಕೆ ಜಮೀದಾ ಬೆಂಬಲ ವ್ಯಕ್ತಪಡಿಸಿದ್ದು. ತ್ರಿವಳಿ ತಲಾಖ್ ಪದ್ಧತಿಗೆ ಕಡಿವಾಣ ಬೀಳುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
Leave A Reply