ಅಬುದಾಬಿಯಲ್ಲಿ ಹಿಂದೂ ಶಕ್ತಿ ಅನಾವರಣ, ಪ್ರಥಮ ದೇವಾಲಯ ಉದ್ಘಾಟಿಸಲಿದ್ದಾರೆ ನರೇಂದ್ರ ಮೋದಿ
ದೆಹಲಿ: ವಿಶ್ವಾಧ್ಯಂತ ಹಿಂದೂ ಶಕ್ತಿಯ ಅನಾವರಣವಾಗುತ್ತಿದ್ದು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಿಂದೂ ಸ್ಥಾನ ವಿಶ್ವಗುರುವಾಗುವತ್ತ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಇನ್ನು ಹಿಂದೂ ಸಂಸ್ಕೃತಿಯನ್ನು ವಿಶ್ವದ ಹಲವು ರಾಷ್ಟ್ರಗಳು ಅಳವಡಿಸಿಕೊಳ್ಳುತ್ತಿವೆ. ಇತ್ತೀಚೆಗೆ ಖಟ್ಟರ ಮುಸ್ಲಿಂ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಯೋಗವನ್ನು ತನ್ನ ಅಳವಡಿಸಿಕೊಂಡಿತ್ತು. ಇದೀಗ ಅಬುದಾಬಿಯಲ್ಲಿ ಪ್ರಥಮ ಬಾರಿಗೆ ಹಿಂದೂ ದೇವಾಲಯವನ್ನು 2015ರಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ದೇವಾಲಯ ಉದ್ಘಾಟಿಸಲಿದ್ದಾರೆ. ಫೆ.,9,10,11 ರಂದು ಮೂರು ದಿನ ಒಮೆನ್, ಯುಎಇ ಮತ್ತು ಪ್ಯಾಲೆಸ್ತೀನ್ ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಇದೇ ವೇಳೆ ಅಬುದಾಬಿಗೆ ಭೇಟಿ ನೀಡಲಿದ್ದು, ಅಲ್ ವತಾಬ್ ನಲ್ಲಿ 20,000 ಸ್ಕ್ಯಾರ್ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಯುನೈಟೆಡ್ ಅರಬ್ ಎಮಿರೆಟ್ (ಯುಎಇ)ನಲ್ಲಿ ಪ್ರಸ್ತುತ ದುಬೈನಲ್ಲಿ ಮಾತ್ರ ಹಿಂದೂ ದೇವಸ್ಥಾನವಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಥಮ ಭೇಟಿ ವೇಳೆಯಲ್ಲೇ ಅಬುದಾಬಿಯಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಲು ಅವಕಾಶ ದೊರೆತಿದೆ.
ಹಿಂದೂಸ್ತಾನಿಗಳ ದಂಡೇ ಇದೇ ಅಲ್ಲಿ
ಯುಎಇ ನಲ್ಲಿ 2.6 ದಶಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಇಡೀ ದೇವಸ್ಥಾನ ನಿರ್ಮಾಣ ಕಾರ್ಯ ಖಾಸಗಿ ಖರ್ಚಿನಲ್ಲೇ ನಡೆಯುತ್ತಿದೆ. ಸರ್ಕಾರದ ಯಾವುದೇ ಸಹಾಯವಿಲ್ಲ ಎಂದು ಯುಎಇ ಸರ್ಕಾರ ತಿಳಿಸಿದೆ. ಅಲ್ಲದೇ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ದುಬೈನಲ್ಲಿ ವಾಸಿಸಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವಿಶ್ವ ಸರ್ಕಾರ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದು, ಮೋದಿಯೇ ಇಡೀ ಶೃಂಗಸಭೆಯ ಕೇಂದ್ರಬಿಂದುವಾಗಿದ್ದಾರೆ. ಅಲ್ಲದೇ ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಪ್ಯಾಲೆಸ್ತಿನ್ ಗೆ ಭೇಟಿ ನೀಡುತ್ತಿರುವುದು ವಿಶೇಷ.
Leave A Reply