ದಲಿತ ಯುವತಿಯ ಮೇಲೆ ಮುಸ್ಲಿಂ ಯುವಕನ ಅತ್ಯಾಚಾರ, ಬಲವಂತದ ಮತಾಂತರಕ್ಕೆ ಒತ್ತಾಯ ಆರೋಪ
ದೆಹಲಿ/ಚಂಡೀಗಡ: ದೇಶದಲ್ಲಿ ಲವ್ ಜಿಹಾದ್ ಹಾಗೂ ಬಲವಂತದ ಮತಾಂತರ ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ ದೆಹಲಿ-ಹರಿಯಾಣ ಗಡಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ದಲಿತ ಯುವತಿಯನ್ನು ಎರಡೂವರೆ ತಿಂಗಳ ಹಿಂದೆ ದಲಿತ ಯುವತಿಯನ್ನು ಅಪಹರಣ ಮಾಡಿದ್ದು, ಈಗ ಯುವತಿಯನ್ನು ರಕ್ಷಿಸಲಾಗಿದೆ.
ಜುನೈದ್ ನಯಾಜ್ ಅನ್ಸಾರಿ ಎಂಬಾತ ಮೈನ್ಪುರಿ ಜಿಲ್ಲೆಯ ಕೊತ್ವಾಲಿ ಎಂಬ ಪ್ರದೇಶದ 22 ವರ್ಷದ ದಲಿತ ಯುವತಿಯನ್ನು ಅಪಹರಿಸಿದ್ದಲ್ಲದೆ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಲ್ಲಿ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನನ್ನ ಮಗಳನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದಲ್ಲದೆ, ಬಲವಂತವಾಗಿ ಮದುವೆ ಹಾಗೂ ಇಸ್ಲಾಮಿಗೆ ಮತಾಂತರಗೊಳಿಸಲು ಜುನೈದ್ ಅನ್ಸಾರಿ ಯತ್ನಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯಿದೆ, ಅಪಹರಣ ಹಾಗೂ ಅತ್ಯಾಚಾರ ಕಾಯಿದೆಯನ್ವಯ ಜುನೈದ್ ಅನ್ಸಾರಿ ವಿರುದ್ಧ ದೂರು ದಾಖಲಿಸಿದ್ದು, ನ್ಯಾಯಾಲಯ ಆತನನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೊತ್ವಾಲಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಧೀರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ ನಲ್ಲೇ ಯುವತಿಯನ್ನು ಅಪಹರಣ ಮಾಡಿದ್ದು, ಯುವತಿಯ ಗೆಳತಿ ಪಿಂಕಿ ರಾಥೋಡ್ ಎಂಬಾಕೆಯೇ ಅಪಹರಣಕ್ಕೆ ಸಹಕರಿಸಿದ್ದಳು ಎಂದು ಯುವತಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.. ಕೊನೆಗೆ ಪಿಂಕಿ ರಾಥೋಡ್ ಜುನೈದ್ ಅನ್ಸಾರಿಯ ಮೊಬೈಲ್ ನಂಬರ್ ನೀಡಿದ್ದಳು ಎಂದು ತಿಳಿದುಬಂದಿದೆ.
ಒಬ್ಬ ದಲಿತ ಯುವತಿಗೆ ಇಷ್ಟೆಲ್ಲ ಅನ್ಯಾಯವಾಗಿರುವ ಕುರಿತು ಮೇಲ್ನೋಟಕ್ಕೆ ಸಾಬೀತಾದರೂ ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ಅವರಂತಹವರು ಸೊಲ್ಲೆತ್ತದಿರುವುದು ದೇಶದ ದುರಂತವೇ ಸರಿ. ಮತ್ತೆ ಇವರೆಲ್ಲ ತಾವು ಜೀವಪರರು ಎಂದು ಪೋಸು ಕೊಡುತ್ತಾರೆ.
Leave A Reply