ಕೇಂದ್ರ ಸರ್ಕಾರವನ್ನು ತೆಗಳುವ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದ ಜಿಡಿಪಿ ಹೇಗೆ ಕುಸಿಯುತ್ತಿದೆ ಗೊತ್ತಾ?
ಬೆಂಗಳೂರು: ಕೇಂದ್ರ ಸರ್ಕಾರ ನೋಟು ನಿಷೇಧಗೊಳಿಸಿದಾಗ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದಾಗ ಇವು ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆದರೆ ಇದೆಲ್ಲವನ್ನೂ ಮೀರಿ ದೇಶದ ಜಿಡಿಪಿ ಏರಿಕೆಯಾಗುತ್ತಿದ್ದು, ಭಾರತ ವಿಶ್ವದ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮುತ್ತದೆ ಎಂದು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ವರದಿ ನೀಡಿವೆ.
ಆದರೆ ಕೇಂದ್ರದ ವಿರುದ್ಧ ಇಷ್ಟೆಲ್ಲ ಆರೋಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ ಹಾಗೂ ಮಾಡಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.
2016-17ನೇ ಸಾಲಿನ ವಿತ್ತೀಯ ಸರ್ವೇ ಪ್ರಕಾರ ಕರ್ನಾಟಕದ ಜಿಎಸ್ ಡಿಪಿ (ಒಟ್ಟು ಕರ್ನಾಟಕದ ಉತ್ಪನ್ನ) ಶೇ.7.3ರಿಂದ 6.9ಕ್ಕೆ ಕುಸಿದಿದೆ. ಕರ್ನಾಟಕದ ಬೆನ್ನೆಲುಬು ಎಂದೇ ಕರೆಯುವ ಸೇವಾ ಕ್ಷೇತ್ರಗಳ ಬೆಳವಣಿಗೆ ದರ 2016-17ರಲ್ಲಿ ಶೇ.10.4ರಿಂದ 8.5ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, 2017-18ನೇ ಸಾಲಿನಲ್ಲಿ ರಾಜ್ಯ ಸರ್ಕಾರ 33,359 ಕೋಟಿ ರೂ. (ಜಿಎಸ್ ಡಿಪಿಯ ಶೇ.2.61ರಷ್ಟು ಹಣ) ವಿತ್ತೀಯ ಕೊರತೆ ಎದುರಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಒಟ್ಟಿನಲ್ಲಿ ವಿಪರೀತ ಸಾಲ, ಮುಂದಾಲೋಚನೆ ಇಲ್ಲದ ಯೋಜನೆ ಸೇರಿ ಸರ್ಕಾರದ ಹಲವು ನಿರ್ಧಾರಗಳಿಂದ ರಾಜ್ಯದ ವಿತ್ತೀಯ ಪರಿಸ್ಥಿತಿ ಹದಗೆಡುತ್ತಿದ್ದು, ರಾಜ್ಯ ಸರ್ಕಾರ ಮಾತ್ರ ಚುನಾವಣೆಗೆ ಸಜ್ಜಾಗುತ್ತಿದೆ. ಅದೂ ಕೇಂದ್ರದ ಜಿಎಸ್ಟಿ ವಿರುದ್ಧವೇ ಮಾತನಾಡುತ್ತ!
Leave A Reply