ಕಳೆದ ಎರಡು ವರ್ಷದಲ್ಲಿ ಕೇಂದ್ರ ಸರ್ಕಾರ ಎಷ್ಟು ಲಕ್ಷ ಸರ್ಕಾರಿ ನೌಕರಿ ಸೃಷ್ಟಿಸಿದೆ ಗೊತ್ತಾ?
ದೆಹಲಿ: ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾವುದೇ ಉದ್ಯೋಗ ಸೃಷ್ಟಿಸಿಲ್ಲ, ಜನರಿಗೆ ಉದ್ಯೋಗ ನೀಡಿಲ್ಲ ಎಂದು ಬೊಬ್ಬೆ ಹಾಕುತ್ತಿರುವವರಿಗೆ ಸ್ಪಷ್ಟ ಉತ್ತರ ಸಿಕ್ಕಿದ್ದು, ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ 2.53 ಲಕ್ಷ ಸರ್ಕಾರಿ ನೌಕರಿ ಸೃಷ್ಟಿಸಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ 2018ರ ಮಾರ್ಚ್ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ 35.05 ಲಕ್ಷ ತಲುಪಲಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ವೇಳೆ ಪ್ರಸ್ತಾಪಿಸಲಾಗಿದೆ. 2016ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ 32.52 ಲಕ್ಷದಷ್ಟಿದ್ದು, ಎರಡೇ ವರ್ಷದಲ್ಲಿ 2.53 ಲಕ್ಷ ಜನರಿಗೆ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸಿದ್ದು, ಶೀಘ್ರದಲ್ಲೇ ನೇಮಕಾತಿ ಚಾಲನೆ ನೀಡಲಿದೆ ಎಂದು ತಿಳಿದುಬಂದಿದೆ.
ಈ ಉದ್ಯೋಗ ಸೃಷ್ಟಿಸುವ ಸಂಖ್ಯೆಯಲ್ಲಿ ಪೊಲೀಸರ ಸಂಖ್ಯೆಯೇ ಜಾಸ್ತಿ ಇದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲಿ ಕೃಷಿ ಹಾಗೂ ರೈತರಿಗೆ ಹೆಚ್ಚು ಒತ್ತು ನೀಡಿದ್ದು, ಕೃಷಿ, ಸಹಕಾರ, ರೈತರ ಕಲ್ಯಾಣ ಇಲಾಖೆಯಲ್ಲಿ 1,944, ಹಾಲಿನ ಡೇರಿ, ಪಶುಸಂಗೋಪನೆ ಹಾಗೂ ಮೀನು ಸಾಕಣೆ ಇಲಾಖೆಯಲ್ಲಿ 1,519 ಹೊಸ ನೌಕರಿ ಸೇರಿಸಲಿದೆ.
ಪರಮಾಣು ಶಕ್ತಿ ಕ್ಷೇತ್ರದಲ್ಲಿ 6,279, ನಾಗರಿಕ ವಿಮಾನಯಾನಕ್ಕೆ 1,145, ಸಾಂಸ್ಕೃತಿಕ ಸಚಿವಾಲಯದಲ್ಲಿ 3,024 ಹಾಗೂ ಒಂದು ಲಕ್ಷ ಸಮೀಪ ನೌಕರಿಗಳನ್ನು ಪೊಲೀಸ್ ವಿಭಾಗಕ್ಕೆ ಸೇರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಖಾಸಗಿ ಉದ್ಯೋಗ ಸೃಷ್ಟಿಯ ಜತೆಗೆ ಸರ್ಕಾರಿ ನೌಕರಿಯನ್ನೂ ಸೃಷ್ಟಿಸಿ ಯುವಜನರಿಗೆ ಉದ್ಯೋಗ ಕಲ್ಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
Leave A Reply