ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೇ ಕೊಲೆಯಾಗಿ ಹೋದ ಆ ಯುವಕನ ಮನದಾಳದಲ್ಲಿ ಏನಿತ್ತು ಗೊತ್ತಾ?
ದೆಹಲಿ: ಕಳೆದ ಭಾನುವಾರ ಪಶ್ಚಿಮ ದೆಹಲಿಯಲ್ಲೊಂದು ಬೆಚ್ಚಿಬೀಳಿಸುವ ಪ್ರಸಂಗ ನಡೆಯಿತು. ಆತನ ಹೆಸರು ಅಂಕಿತ್ ಸೆಕ್ಸೇನಾ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಆತ ತಿಂಗಳಿಗೆ 40 ಸಾವಿರ ರೂ. ದುಡಿಯುತ್ತಿದ್ದ. ಮನೆಯಲ್ಲೂ ಆರ್ಥಿಕವಾಗಿ ಚೆನ್ನಾಗಿದ್ದರು. ಆದರೆ ನೋಡನೋಡುತ್ತಿದ್ದಂತೆಯೇ ಆತನ ಹತ್ಯೆಯಾಯಿತು.
ಅದೂ ಏಕೆ? ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ!
ಯುವತಿಯ ಪಾಲಕರೇ ಅಂಕಿತ್ ನನ್ನು ಕೊಂದಿದ್ದಾರೆ ಎಂಬ ಆರೋಪವಿದೆ. ಯುವತಿಯೇ ನನ್ನ ಚಿಕ್ಕಪ್ಪ ಕೊಂದಿದ್ದಾನೆ ಎಂದೂ, ನನ್ನ ಕುಟುಂಬಸ್ಥರಿಂದಲೇ ನನಗೆ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಪ್ರೇಮಿ ಸತ್ತರೂ, ಕುಟುಂಬವನ್ನು ಎದುರು ಹಾಕಿಕೊಂಡು ಯುವತಿ ಅಂಕಿತ್ ಪರ ಇದ್ದಾಳೆ ಎಂದರೆ ಆತನ ಪ್ರೀತಿ ಎಷ್ಟು ನಿಜವಿರಬೇಕು ಊಹಿಸಿ.
ಆತ ಇತ್ತೀಚೆಗೆ ಜಿಮ್ ಗೆ ಹೋಗುತ್ತಿದ್ದ. ನೋಡಲು ಸಹ ಚೆನ್ನಾಗಿದ್ದ. ಇದರ ಜತೆಗೇ ಪ್ರೀತಿಯಲ್ಲಿ ಬಿದ್ದ ಆತ, ಆಕೆಯನ್ನು ತುಂಬ ಪ್ರೀತಿಸುತ್ತಿದ್ದ. ಶೀಘ್ರದಲ್ಲೇ ಆಕೆಯನ್ನು ಮದುವೆಯಾಗುತ್ತೇನೆ ಎನ್ನುತ್ತಿದ್ದ ಎಂದು ಅಂಕಿತ್ ಗೆಳೆಯನೊಬ್ಬ ತಿಳಿಸಿದ್ದಾನೆ.
ಅಷ್ಟೇ ಅಲ್ಲ, ಅಂಕಿತ್ ದಿನಾಲೂ ಆಕೆಯ ಜತೆ ಮಾತನಾಡುತ್ತಿದ್ದ. ಇಬ್ಬರ ಮನೆಯವರನ್ನು ಒಪ್ಪಿಸಿ ಮದುವೆಯಾಗೋಣ ಎನ್ನುತ್ತಿದ್ದ. ಈ ಕುರಿತು ನನ್ನ ಬಳಿಯೂ ಪ್ರಸ್ತಾಪಿಸಿದ್ದ. ನಾವು ಸಹ ಆತ ಚೆನ್ನಾಗಿರಲಿ ಎಂದು ಬಯಸಿದ್ದೆವು. ಆದರೆ ಅಷ್ಟರಲ್ಲೇ ಆತ ನಮ್ಮಿಂದ ಮರೆಯಾದ ಎನ್ನುತ್ತಾನೆ ಅಂಕಿತ್ ಗೆಳೆಯ.
ಒಬ್ಬ ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮನಸಾರೆ ಪ್ರೀತಿಸಿ ಮದುವೆಯಾಗಲು ಇಚ್ಛಿಸಿದರೂ ಕೊಲೆಯಾಗುತ್ತಾನೆ. ಆದರೆ ಅದೇ ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾಗಿ ಮತಾಂತರಗೊಳಿಸುತ್ತಾನೆ. ಇಷ್ಟು ವ್ಯತ್ಯಾಸವಿದ್ದರೂ ಪ್ರೀತಿಗೆ ಜಯ ಸಿಗಲಿಲ್ಲವೆಂಬುದೇ ಬೇಸರ.
Leave A Reply