ಪ್ರಕಾಶ್ ರೈ ಅವರೇ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ವಿಳಾಸ ಬೇಕಿದ್ದರೆ ಈ ಸುದ್ದಿ ಓದಿ ಸ್ವಾಮಿ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎನ್ನುತ್ತಲೇ ಅದು ಮೇಲ್ವರ್ಗದವರ ಪರ ಇರುವ ಸರ್ಕಾರ, ಬಿಜೆಪಿಯೇತರ ರಾಜ್ಯಗಳಿಗೆ ಅನುದಾನ ನೀಡದ ಸರ್ಕಾರ ಎಂದೆಲ್ಲ ಪ್ರಾದೇಶಿಕ ಹಾಗೂ ಕಾಂಗ್ರೆಸ್ ಪಕ್ಷ ಟೀಕಿಸುತ್ತವೆ. ಆದರೆ ಮೋದಿ ಅವರು ಮಾತ್ರ ತಮ್ಮ ಬಗ್ಗೆ ಯಾರೇ ಪೂರ್ವಾಗ್ರಹ ಪೀಡಿತರಾದರೂ, ಅದನ್ನು ಸುಳ್ಳು ಮಾಡುವಲ್ಲಿ ನಿಸ್ಸೀಮರು.
ಈಗ ಇದೇ ದಿಸೆಯಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದ್ದು, ಆ ಸರ್ಕಾರ, ಈ ಸರ್ಕಾರ ಎನ್ನದೆ ಎಲ್ಲ ರಾಜ್ಯಗಳ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಬರೋಬ್ಬರಿ 65 ಸಾವಿರ ಕೋಟಿ ರುಪಾಯಿ ಬಿಡುಗಡೆಗೊಳಿಸಿದೆ.
ಈ ಕುರಿತು ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಲೋಕಸಭೆಗೆ ಲಿಖಿತವಾಗಿ ಉತ್ತರ ನೀಡಿದ್ದು, ಜನವರಿ ಅಂತ್ಯದ ವೇಳೆಗೆ “2017-18ರ ಪರಿಶಿಷ್ಟ ಜಾತಿಗಾಗಿ ಜಾರಿಗೊಳಿಸಿದ ಕೇಂದ್ರ ವಿಶೇಷ ಸಹಾಯಧನದ ಉಪಯೋಜನೆಯಡಿ 65,003 ಕೋಟಿ ರು. ಬಿಡುಗಡೆಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಕಲ್ಯಾಣ ಸಚಿವಾಲಯದಿಂದ ಹಣ ಬಿಡುಗಡೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ 80 ಸಾವಿರ ಕೋಟಿ ರು. ನೀಡುವುದಾಗಿ ತಿಳಿಸಿದೆ. ಅದರಲ್ಲಿ ಈಗ ಬಿಡುಗಡೆಯಾಗಿರುವ ಹಣ ಶೇ.80ಕ್ಕಿಂತ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಹಣವನ್ನು ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ಸಮರ್ಪಕವಾಗಿ ಬಳಸಬೇಕು. ದುರುಪಯೋಗವಾಗುತ್ತಿರುವ ಕುರಿತು ದೂರುಗಳಿದ್ದು, ಈ ಬಾರಿ ನೀಡಿದ ಹಣದಲ್ಲಿ ದುರುಪಯೋಗವಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ತತ್ವದಡಿ ಎಲ್ಲ ರಾಜ್ಯಗಳ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿದೆ. ಆ ಮೂಲಕ ತಾನು ಆಡಿದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಾತನ್ನು ಉಳಿಸಿಕೊಂಡಿದೆ. ಒಂದು ಸರ್ಕಾರದ ಪ್ರಮುಖ ಗುಣಲಕ್ಷಣ ಎಂದರೆ ಇದೇ ಅಲ್ಲವೇ?
Leave A Reply