ಗೋವು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಎಂದು ಹೇಳಿದ ಮುಸ್ಲಿಂ ಮೌಲ್ವಿ ಯಾರು ಗೊತ್ತಾ?
ಲಖನೌ: ಕಳೆದ ವರ್ಷದ ಮೇ 25ರಂದು ಕೇಂದ್ರ ಸರ್ಕಾರ ಗೋವುಗಳ ಅಕ್ರಮ ಸಾಗಣೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದಾಗ ದೇಶದಲ್ಲಿ ಕೆಲವರು ಆಕ್ಷೇಪ ಹೊರಡಿಸಿದ್ದರು. ಆದರೆ ಈಗ ಮುಸ್ಲಿಂ ಮೌಲ್ವಿಯೊಬ್ಬರು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ.
ಹೌದು, ಉತ್ತರ ಪ್ರದೇಶದ ಜಮೈತ್ ಉಲೇಮಾ ಏ ಹಿಂದ್ ಇಸ್ಲಾಮಿಕ್ ಸಂಸ್ಥೆಯ ಮುಖ್ಯಸ್ಥ ಮೌಲಾನಾ ಅರ್ಷದ್ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದಿದ್ದಾರೆ.
ಮಾನವನ ಮತ್ತು ಗೋವುಗಳ ಪ್ರಾಣ ಉಳಿಸಲು ಏಕೈಕ ಮಾರ್ಗ ಎಂದರೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಹಾಗಾದ ಮಾತ್ರ ಗೋವು, ಮನುಷ್ಯನ ಪ್ರಾಣ ಉಳಿಯುತ್ತದೆ. ಇದರಿಂದ ದೇಶಕ್ಕೂ ಲಾಭವಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಗೋವುಗಳ ಅಕ್ರಮ ಸಾಗಣೆ, ಅಕ್ರಮ ಕಸಾಯಿಖಾನೆ ಹಾಗೂ ಗೋವುಗಳ ರಕ್ಷಣೆ ಕುರಿತು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಮದಾನಿ ಈ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಗೋಹತ್ಯೆ ನಿಷೇಧ ಅಧಿಸೂಚನೆ ಕುರಿತು ಸುಪ್ರೀಂ ಕೊರ್ಟ್ ವಿಚಾರಣೆ ಮಾಡುತ್ತಿರುವ ಬೆನ್ನಲ್ಲೇ ಮುಸ್ಲಿಂ ಮೌಲ್ವಿಯೊಬ್ಬರು ಗೋವುಗಳ ರಕ್ಷಣೆಗೆ ಅವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸಲಹೆ ನೀಡಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕು.
Leave A Reply