ಪ್ರಧಾನಿ ಮೋದಿ ಅರಬ್ ರಾಷ್ಟ್ರಗಳಿಗೆ ಹೊರಟರೆ ಸರ್ಕಾರಗಳಿಗೆ ಖುಷಿ, ಪತ್ರಿಕೆಗಳಿಗೆ ಜಾಹೀರಾತು ಹಬ್ಬ!
ಅಬುದಾಬಿ: ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಅವರು ವಿದೇಶಕ್ಕೆ ಹೊರಡಲು ಅಣಿಯಾದರೂ ಸಾಕು ವಿಶ್ವದ ಎಲ್ಲ ರಾಷ್ಟ್ರಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು, ಸ್ನೇಹಹಸ್ತ ಚಾಚಲು ಕಾತರರಾಗಿ ನಿಲ್ಲುತ್ತವೆ. ಇದಕ್ಕೆ ಮೋದಿ ಅವರಿಗೆ ಪಾಲಿಸ್ತೀನ್ ನಲ್ಲಿ ಸಿಗುತ್ತಿರುವ ಅಭೂತಪೂರ್ವ ಸ್ವಾಗತವೇ ಸಾಕ್ಷಿ.
ಅದೇ ರೀತಿಯಾಗಿ ಮೋದಿ ದುಬೈಗೆ ತೆರಳಲಿದ್ದು, ಅವರನ್ನು ಸ್ವಾಗತಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಅಷ್ಟೇ ಅಲ್ಲ ಅಬುದಾಬಿಯ ಖಲೀಜ್ ಟೈಮ್ಸ್ ಸೇರಿ ಹಲವು ಪತ್ರಿಕೆಗಳಲ್ಲಿ ಮೋದಿ ಅವರ ಸಂದರ್ಶನಗಳನ್ನು ಪ್ರಕಟಿಸಿ ಭಾರತದ ಪ್ರಧಾನಿಯವರನ್ನು ಮೆಚ್ಚಿಸಲು ಹೊರಟಿವೆ ಹಾಗೂ ಆ ಮೂಲಕ ಗೌರವ ನೀಡುತ್ತಿವೆ.
ಇದರ ಜತೆಗೆ ಸರ್ಕಾರಗಳೂ ಮುಖಪುಟ ಜಾಹೀರಾತು ನೀಡುವ ಮೂಲಕ ಮೋದಿ ಅವರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಅದರಲ್ಲೂ ಮೋದಿ ಅವರು ದೇಶದ ಪ್ರಧಾನಿಗಳ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದು, ಪ್ರಧಾನಿಯೊಬ್ಬರು ಒಂದೇ ಅವಧಿಯಲ್ಲಿ ಎರಡು ಬಾರಿ ದುಬೈಗೆ ಹೊರಟ ಮೊದಲ ಪ್ರಧಾನಿ ಎಂಬ ಹೆಗ್ಗಳಿಗೆ ಮೋದಿ ಪಾತ್ರರಾಗಿದ್ದಾರೆ.
ಇದೇ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿರುವ ದುಬೈ, ಪತ್ರಿಕೆಗಳಿಗೆ ಪುಟಗಟ್ಟಲೇ ಜಾಹೀರಾತು ನೀಡುವ ಮೂಲಕ, “ಮೋದಿ ಅವರು ತಮ್ಮ ದೇಶಕ್ಕೆ ನೀಡುವ ಭೇಟಿ ಐತಿಹಾಸಿಕ”, “ಹಳೆಯ ಗೆಳೆಯರ ಸಂಬಂಧ ವೃದ್ಧಿಯ ಸಮಾಗಮ” ಎಂದೆ ಪತ್ರಿಕೆಗಳ ಜಾಹೀರಾತಿನಲ್ಲಿ ವರ್ಣಿಸಲಾಗುತ್ತಿದೆ.
ಅದರಲ್ಲೂ ಮೋದಿ ಅವರು ಪ್ಯಾಲಸ್ತೀನ್ ಗೆ ಭೇಟಿ ನೀಡುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಲ್ಲೂ ಉತ್ತಮ ಸ್ವಾಗತವೇ ಸಿಕ್ಕಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿಶ್ವದಲ್ಲಿ ಭಾರತಕ್ಕೆ ಪ್ರಾಮುಖ್ಯ ಬರುತ್ತಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ನಮ್ಮತ್ತ ನೋಡುವಂತಾಗಿರುವುದು ಹೆಮ್ಮೆಯ ವಿಚಾರ.
Leave A Reply