ಮೋದಿ ಮೋಡಿಗೆ ಮನಸೋತ ದುಬೈ ರಾಜಕುಮಾರ, ಜೈ ಶ್ರೀರಾಮ್ ಎಂದು ಭಾಷಣ ಆರಂಭ
ಅಬುದಾಬಿ: ಪ್ರಧಾನಿ ನರೇಂದ್ರ ಮೋದಿ ವಿಶ್ವವನ್ನೇ ಮೋಡಿಗೊಳಿಸಿದ್ದಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಮೋದಿ ಅವರು ದುಬೈಗೆ ತೆರಳಿದ ಬೆನ್ನಲ್ಲೇ ದುಬೈ ರಾಜಕುಮಾರ ಜೈ ಶ್ರೀ ರಾಮ್ ಎಂದು ಭಾಷಣ ಆರಂಭಿಸಿದ್ದಾರೆ.
ಹೌದು, ಅಬುದಾಬಿ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನೆಹ್ಯಾನ್ ಅವರು ಜೈ ಶ್ರೀರಾಮ್ ಎನ್ನುವ ಮೂಲಕ ಭಾಷಣ ಆರಂಭಿಸಿದ್ದು, ಈ ಕುರಿತ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊರಾರಿ ಬಾಪು ಅವರ ನೇತೃತ್ವದ ರಾಮಕಥಾ ಕಾರ್ಯಕ್ರಮದಲ್ಲಿ ದುಬೈ ರಾಜಕುಮಾರ ಜೈ ಶ್ರೀರಾಮ್ ಎಂದು ಭಾಷಣ ಆರಂಭಿಸಿದ್ದು, ಭಾರತದ ಸಂಸ್ಕೃತಿ ಹಾಗೂ ಮೋದಿ ಅವರ ಮೋಡಿ ಬಗ್ಗೆ ಹೆಮ್ಮೆ ಮೂಡುವಂತಾಗಿದೆ.
ಜೋರ್ಡಾನ್ ಹಾಗೂ ಪಾಲಿಸ್ತೀನ್ ರಾಷ್ಟ್ರಗಳ ಭೇಟಿ ಬಳಿಕ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಅಬುದಾಬಿಗೆ ತೆರಳಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಅಷ್ಟೇ ಅಲ್ಲ, ದುಬೈನಲ್ಲಿ ಇದೇ ಮೊದಲ ಬಾರಿಗೆ ಹಿಂದು ದೇವಾಲಯವೊಂದು ನಿರ್ಮಾಣವಾಗುತ್ತಿದ್ದು, ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಕಳೆದ ಬಾರಿ ಪ್ರಧಾನಿ ಮೋದಿ ದುಬೈಗೆ ಭೇಟಿ ನೀಡಿದ ಸ್ಮರಣಾರ್ಥವಾಗಿ ಸುಮಾರು 14 ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು, 2020ರವೇಳೆಗೆ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ.
Leave A Reply