• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮತ-ಧರ್ಮಗಳ ವಿಭಜಿಸಿದವರಿಗೆ ಮತದಿಂದಲೇ ಉತ್ತರ!!

ಚಕ್ರವರ್ತಿ ಸೂಲಿಬೆಲೆ Posted On March 27, 2018


  • Share On Facebook
  • Tweet It

‘ಗುರಿಯಷ್ಟೇ ಸಾಗುವ ಹಾದಿಯೂ ಮುಖ್ಯ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಸಿದ್ದರಾಮಯ್ಯನವರು ಕೈಯ್ಯಲ್ಲಿ ವಿವೇಕಾನಂದರ ಪುಸ್ತಕ ಹಿಡಿದು ಅದೇನು ಓದಿದರೋ ದೇವರೇ ಬಲ್ಲ. ಆಚರಣೆಯಲ್ಲಂತೂ ಯಾವುದೂ ಕಾಣುತ್ತಿಲ್ಲ. ಗೆಲುವಿಗಾಗಿ ಯಾವ ಸಿದ್ಧಾಂತವನ್ನಾದರೂ ತಲೆ ಕೆಳಗು ಮಾಡಬಲ್ಲ ಸಾಮಥ್ರ್ಯವಿದೆ ಅವರಿಗೆ. ಆದರೆ ಇತಿಹಾಸ ಬೆನ್ನಿಗೆ ಚೂರಿ ಹಾಕಿದ ಅನೇಕ ಖಿಲ್ಜಿಗಳನ್ನು ರಾಕ್ಷಸರೆಂದೇ ನೆನಪಿಟ್ಟುಕೊಳ್ಳೋದು. ದಾರಾಷಿಕೋರಂಥವರನ್ನು ತಂಪು ಹೊತ್ತಿನಲ್ಲಿಯೇ ಸ್ಮರಿಸಿಕೊಳ್ಳೋದು.

ಹೌದು. ಲಿಂಗಾಯತ ಮತೀಯರನ್ನು ಎತ್ತಿ ಕಟ್ಟಿ ಹಿಂದೂ ವಿರೋಧಿಗಳಾಗಿ ಅವರನ್ನು ರೂಪಿಸಿ ಪ್ರತ್ಯೇಕ ಧರ್ಮದ ಲಾಜಿಕಲ್ ಎಂಡ್ನವರೆಗೆ ಒಯ್ಯಬೇಕೆಂಬ ತೋರಿಕೆಯ ಹಠ ಅವರದ್ದು. ಒಟ್ಟಾರೆ ಪ್ರಯತ್ನದ ಹಿಂದಿನ ಉದ್ದೇಶ ಮತ ವಿಭಜನೆ ಮಾಡಿ ಮತ್ತೆ ಅಧಿಕಾರಕ್ಕೆ ಬರುವುದಷ್ಟೇ. ಈ ಪ್ರಯತ್ನದಲ್ಲಿ ಅನೂಚಾನವಾಗಿ ನಂಬಿಕೊಂಡು ಬಂದ ನಂಬಿಕೆಗಳ ಮೇಲೆ ಆಘಾತವಾಗಲಿರುವುದು, ಜನರ ಶ್ರದ್ಧೆಯ ಮೇಲೆ ಕೊಡಲಿ ಪೆಟ್ಟು ಬೀಳಲಿರುವುದನ್ನು ಅವರು ಲೆಕ್ಕಿಸಲೇ ಇಲ್ಲವಲ್ಲ. ಇದನ್ನೇ ಗುರಿಯೆಡೆಗೆ ಸಾಗುವಾಗ ಮಾರ್ಗವನ್ನೂ ಗಮನಿಸಬೇಕು ಎಂದಿದ್ದು ವಿವೇಕಾನಂದರು. ಇಲ್ಲವಾದರೆ ಗುರಿಯ ಬಳಿ ಬಂದು ಎಡವಿ ಬಿದ್ದು ಮುಖ-ಮೂತಿಗೆ ಗಾಯ ಮಾಡಿಕೊಂಡು ನರಳಾಡುವಾಗ ಕಣ್ಣೀರಿಡಲು ಜನರ್ಯಾರೂ ಇರಲಾರರು ಅಷ್ಟೇ!

ಲಿಂಗಾಯತ ಧರ್ಮದ ಕಲ್ಪನೆ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದ ಕ್ರಿಶ್ಚಿಯನ್ ಆಳ್ವಿಕೆಯ ಕಾಲದಿಂದಲೂ ಇದೆ. ಕ್ರಿಶ್ಚಿಯನ್ ಮಿಶನರಿಗಳು ಲಿಂಗಾಯತರನ್ನೊಳಗೊಂಡಂತೆ ಜಾಟರು, ಪಟೇಲರು, ಮರಾಠರನ್ನೆಲ್ಲ ಮೆಗಾ ಪೀಪಲ್ ಎಂದು ಗುರುತಿಸಿದ್ದಾರೆ. ರಾಜಕೀಯವಾಗಿ ಬಲು ಪ್ರಭಾವಿಯಾಗಿದ್ದು, ಸಾಕಷ್ಟು ಸಂಖ್ಯೆಯನ್ನೂ ಹೊಂದಿರುವ ಕ್ರಿಶ್ಚಿಯನ್ನರ ಗಾಳಕ್ಕೆ ಬಲಿಯಾಗದ ಜನರಿಗೆ ಅವರು ಕೊಟ್ಟ ಹೆಸರು ಅದು. ಕನರ್ಾಟಕದಲ್ಲಿ ಅವರನ್ನು ಬಲುವಾಗಿ ಕಾಡಿದ್ದು ಲಿಂಗಾಯತರೇ. ಅವರನ್ನು ದೊಡ್ಡ ಸಂಖ್ಯೆಯಲ್ಲಿ ಮತಾಂತರಿಸಲು ಅವರು ಪ್ರಯತ್ನ ಶುರು ಮಾಡಿದ್ದು 1940ರಲ್ಲಿ. ಅದಕ್ಕೆ ಅಡಿಗಲ್ಲು ಹಾಕಿದ್ದು ಲಿಂಗಾತರು ಹೆಮ್ಮೆಯಿಂದ ನಮ್ಮವರೇ ಎಂದು ಹೇಳಿಕೊಳ್ಳುವ ಚೆನ್ನಪ್ಪ ಉತ್ತಂಗಿ. ಆತನ ತಾತನ ಕಾಲದಲ್ಲಿ ಕ್ರಿಶ್ಚಿಯನ್ ಮತವನ್ನು ಸ್ವೀಕರಿಸಿಬಿಟ್ಟಿದ್ದರು. ಹೀಗಾಗಿ ಮನೆಯಲ್ಲಿ ಆಚರಣೆಗಳು ಚಚರ್ಿಗೆ ಪೂರಕವಾಗಿದ್ದರೂ ಹೊರಗೆ ನೋಡಲು ಲಿಂಗಾಯತರಾಗಿ ಉಳಿದಿದ್ದರು ಚೆನ್ನಪ್ಪ.

5

ಬೇಸೆಲ್ ಸೆಮಿನರಿಯೊಳಗೆ ಅಧ್ಯಯನ ನಡೆಸಿದ ಮೇಲೆ ಅದಕ್ಕೆ ಪೂಣರ್ಾವಧಿ ಸೇವಕರಾಗಿ ಸೇರಿಕೊಂಡ ಚೆನ್ನಪ್ಪ ರೆವರೆಂಡ್ ಚೆನ್ನಪ್ಪ ಡೇನಿಯಲ್ ಉತ್ತಂಗಿಯಾದರು. ಈಗವರು ಅಂತರಂಗದಲ್ಲಿ ಕ್ರಿಸ್ತನನ್ನು ಆರಾಧಿಸುವ ಹೊರಗೆ ಮಾತ್ರ ಅಪ್ಪಟ ಲಿಂಗಾಯತರಂತೆ ಕಾಣುವ ಬಹುರೂಪಿಗಳಾದರು. ಲಿಂಗಾಯತ ಮತವನ್ನು ಚೆನ್ನಾಗಿ ಅಧ್ಯಯನ ಮಾಡಿಕೊಂಡರು. ಅದನ್ನು ಕ್ರಿಸ್ತನತ್ತ ಹೊರಳಿಸುವ ಉಪಾಯಗಳನ್ನು ಹುಡುಕಲಾರಂಭಿಸಿದರು. ಕ್ರಿಶ್ಚಿಯನ್ನರ ಹಳೆಯ ಚಾಳಿ ಇದು. ಆಯಾ ಭಾಗದ ಜನರನ್ನು ಅವರವರು ಒಪ್ಪುವ ವಿಚಾರಧಾರೆಗಳನ್ನು ಕ್ರಿಸ್ತನಿಗೆ ಬಲು ಹತ್ತಿರದವೆಂದು ಸಾಬೀತುಪಡಿಸಿದರೆ ಅಥವಾ ಈ ವಿಚಾರಧಾರೆಗಳೆಲ್ಲ ಕ್ರಿಸ್ತನ ಚಿಂತನೆಗಳ ಮೂಸೆಯಿಂದಲೇ ಬಂದವೆಂದು ಹೇಳಿಬಿಟ್ಟರೆ ಮತಾಂತರ ಸಲೀಸೆಂಬುದು ಅವರ ಆಲೋಚನೆ. ತಮಿಳುನಾಡಿನಲ್ಲಿ ತಿರುವಳ್ಳುವರ್ರನ್ನೇ ಸೇಂಟ್ ಥಾಮಸ್ರ ವಿಚಾರಧಾರೆಯಿಂದ ಪ್ರಭಾವಿತ ಎಂದು ಕಥೆ ಕಟ್ಟಿ ತಿರುಕ್ಕುರಲ್ ಬೈಬಲ್ನ ಅನುವಾದವೆಂದೂ ಪುಕಾರು ಹಬ್ಬಿಸಿಬಿಟ್ಟಿದ್ದರು. ಎಲ್ಲೆಲ್ಲಿ ಚಚರ್ಿಯಾನಿಟಿಗೆ ಹೊಂದಿಕೆಯಾಗದ ಅಂಶಗಳು ಕಂಡು ಬರುವವೋ ಅದನ್ನೆಲ್ಲ ಹಿಂದುಗಳ ಪ್ರಭಾವದಿಂದ ಸೇರಿ ಹೋದ ಅಪದ್ಧಗಳೆಂದು ಹೇಳಲೂ ಹಿಂಜರಿಯಲಿಲ್ಲ ಅಯೋಗ್ಯ ಮಿಶನರಿಗಳು. ತಮಿಳುನಾಡಿನಲ್ಲಿ ಮಾಡಿದ ಈ ಪ್ರಯೋಗದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದ ಮಿಶನರಿಗಳು ಅದನ್ನೇ ಮತ್ತೊಂದು ರೀತಿಯಲ್ಲಿ ಲಿಂಗಾಯತರ ಮೇಲೆ ಪ್ರಯೋಗಿಸಲು ಚೆನ್ನಪ್ಪನನ್ನು ಬಳಸಿದರು. ಅದಕ್ಕೆ ಪೂರಕವಾಗಿ ಚೆನ್ನಪ್ಪ ಸರ್ವಜ್ಞನ ವಚನಗಳ ಸಂಗ್ರಹಕ್ಕೆ ಊರೂರಿಗೆ ಅಲೆದು, ಅದನ್ನು ಕ್ರೋಢೀಕರಿಸಿ ಲಿಂಗಾಯತರ ಮನಗೆದ್ದುಬಿಟ್ಟಿದ್ದರು. ಈಗ ಅನೇಕ ಮಠಗಳು ಅವರನ್ನು ಆಹ್ವಾನಿಸಿ ಪ್ರವಚನ ಕೊಡಿಸಲಾರಂಭಿಸಿದವು. ಅವರು ವಚನಗಳನ್ನು ಉದ್ಧರಿಸಿ ಮಾತನಾಡುವಾಗ ಮನಸೋತು ಕರಗಿಬಿಡುತ್ತಿದ್ದರು. ಸಮಯ ನೋಡಿ ಚನ್ನಪ್ಪ ಕ್ರಿಸ್ತನ ಚಿಂತನೆಗಳನ್ನು ಸಮೀಕರಿಸಿ ಲಿಂಗಾಯತ ಮತದ ಮೇಲೆ ಆತನ ಪ್ರಭಾವವನ್ನು ಬಣ್ಣಿಸಿಬಿಡುತ್ತಿದ್ದರು. ಅದೇ ಮಠದಲ್ಲಿ ಮುಂದಿನ ದಿನಗಳಲ್ಲಿ ಮಠಾಧೀಶರಾಗಬೇಕಿದ್ದ ಕಿರಿತ ಸಾಧುಗಳಲ್ಲಿ ಈ ವಿಚಾರ ಬಲವಾಗಿ ಬೇರೂರುತ್ತಿತ್ತು. ತಮ್ಮನ್ನು ತಾವು ಹಿಂದೂ ಧರ್ಮದಿಂದ ದೂರವೆಂದು ಅವರೆಲ್ಲ ಭಾವಿಸುವಂತಾಗಿದ್ದುದರ ವಿಷಬೀಜ ಮೊದಲಿಗೆ ಬಿದ್ದದ್ದು ಅಲ್ಲಿಯೇ!

ಡೇನಿಯಲ್ ಚೆನ್ನಪ್ಪ ಕೀರ್ತನೆಗಳ ರೂಪದಲ್ಲಿ ಕ್ರಿಸ್ತನ ಬದುಕನ್ನು ಕ್ರೋಢೀಕರಿಸಿ ಹಳ್ಳಿಯಿಂದ ಹಳ್ಳಿಗೆ ಸಾಗಿ ಅದನ್ನು ವಚನಗಳ ಕೋಟಿಂಗ್ನೊಂದಿಗೆ ವಿವರಿಸಿದರೆ ಮುಗಿಯಿತು! ಜನ ಪೂರ್ತಿ ಬೋಲ್ಡ್! ಅದು ಹಾಗೆಯೇ. ಶಂಕರರ ಹೆಸರನ್ನು ಹೇಳಿ ನಾಲ್ಕು ಒಳ್ಳೆಯ ಮಾತನ್ನಾಡಿದರೆ ಅದ್ವೈತಿಗಳು ಶತ್ರುವನ್ನೂ ತಬ್ಬಿಕೊಂಡುಬಿಡುತ್ತಾರೆ. ಕೇಸರಿ ಶಾಲು ಹಾಕಿಕೊಂಡು ಓವೈಸಿ ರಾಮನ ಗುಣಗಾನ ಮಾಡಿಬಿಟ್ಟರೆ ಬೀಜೇಪಿಯವರು ಅವನನ್ನೂ ಪಾಟರ್ಿಗೆ ಸೇರಿಸಿಕೊಂಡುಬಿಡುತ್ತಾರೆ. ಅಂಬೇಡ್ಕರರ ಹೆಸರು ಹೇಳಿಬಿಟ್ಟರೆ ಎಂತಹ ತಪ್ಪಿಗೂ ಶಿಕ್ಷೆಯಿಲ್ಲ. ಹಾಗೆಯೇ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿಬಿಟ್ಟರೆ ಎಂಥವವನೂ ‘ಇವ ನಮ್ಮವ’ ನಾಗಿಬಿಡುತ್ತಾನೆ. ಡೇನಿಯಲ್ ಚೆನ್ನಪ್ಪ ಉತ್ತಂಗಿ ಹೀಗೆ ಲಿಂಗಾಯತರ ಭದ್ರ ಕೋಟೆಯೊಳಗೆ ದಾರಿ ಮಾಡಿಕೊಂಡು ಒಳನುಸುಳಿದ್ದಲ್ಲದೇ, ಅವರೊಳಗೆ ಪ್ರತ್ಯೇಕ ಧರ್ಮದ ಬೀಜ ಬಿತ್ತಿ ಜನ ಸಾಮಾನ್ಯರನ್ನೂ ಅದಕ್ಕೆ ಪೂರಕವಾಗಿ ಸಿದ್ಧಪಡಿಸಲಾರಂಭಿಸಿದರು. ದೀಪಾವಳಿಯ ದಿನ ಲಿಂಗಾಯತರ ನಡುವೆ ಮಾತನಾಡುತ್ತ ಅವರು ‘ಏಸು ಜಗತ್ತಿನ ಬೆಳಕು’ ಎಂದರು. ಅದಕ್ಕೆ ಒಂದಷ್ಟು ಜನ ಪ್ರತಿಭಟಿಸಿ ಬಸವಣ್ಣವರಿಗಿಂತ ಏಸು ದೊಡ್ಡವನಾ ಎಂದು ಕೇಳಿದ್ದಕ್ಕೆ ‘ಬಸವಣ್ಣ ಏಷ್ಯಾದ ಬೆಳಕು’ ಎಂದುಬಿಟ್ಟಿದ್ದರು. ಭಾಷಣದ ಮೊದಲರ್ಧ ಲಿಂಗಾಯತ ಪಂಥದ ಕುರಿತಂತೆ ಮಾತನಾಡುವುದನ್ನು ನೋಡಿದರೆ ಚೆನ್ನಪ್ಪ ಮರಳಿ ಮಾತೃಧರ್ಮಕ್ಕೆ ಬಂದು ಬಿಡುವರೇನೋ ಎಂದು ಗಾಬರಿಯಾಗಿಬಿಡುತ್ತಿದ್ದರು ಎಲ್ಲ. ಆದರೆ ಉತ್ತರಾರ್ಧ ಏಸುವಿನ ಗುಣಗಾನಕ್ಕೆ ನಿಂತರೆ ಲಿಂಗಾರಾಧಕರು ಪತರಗುಡುತ್ತಿದ್ದರು. ಅದನ್ನು ಸ್ವತಃ ಡೇನಿಯಲ್ ಉತ್ತಂಗಿಯವರ ಮಗಳೇ ದಾಖಲಿಸಿದ್ದಾಳೆ. ಇದನ್ನು ಗಮನಿಸಿಯೇ ಮಿಶನರಿಗಳು ಲಿಂಗಾಯತರ ನಡುವೆ ರಾಜಮಾರ್ಗ ಸೃಷ್ಟಿಸುತ್ತಿರುವ ಉತ್ತಂಗಿಯವರಿಗೆ ಅಪಾರ ಗೌರವ ಕೊಡುತ್ತಿದ್ದುದು.

3ಅವರ ನಂತರ ಈ ಒಟ್ಟಾರೆ ತೀವ್ರತೆ ಕಡಿಮೆಯಾಗಿಬಿಟ್ಟಿತ್ತು. ಅನ್ಯರೆಲ್ಲರಿಗಿಂತ ತಮ್ಮ ಮತವೇ ಶ್ರೇಷ್ಠ ಎಂಬ ಲಿಂಗಾಯತರ ನಿಷ್ಠುರತೆಯೇ ಅವರನ್ನು ಬಲಾಢ್ಯವಾಗಿಸಿಬಿಟ್ಟಿತ್ತು. ಹಿಂದೂ ಧರ್ಮದ ಜಾತಿ ಪದ್ಧತಿ ಮತಾಂತರಕ್ಕೆ ಎಷ್ಟು ಪೂರಕವೆಂದು ಮಿಶನರಿಗಳು ಭಾವಿಸಿದ್ದರೋ ಅದೇ ಜಾತಿ ಪದ್ಧತಿ ಅವರಿಗೆ ಬಲುದೊಡ್ಡ ತೊಡಕೂ ಆಗಿತ್ತು. ಕೆಲವರನ್ನು ಕೆಳವರ್ಗದವರೆಂದು ಭ್ರಮೆ ಸೃಷ್ಟಿಸಿ ಅವರನ್ನು ಮತಾಂತರಿಸುವಲ್ಲಿ ಅವರು ಸಫಲರಾಗಿದ್ದರು. ಆದರೆ ಅವರೇ ಸೃಷ್ಟಿಸಿದ ಈ ಮೇಲು-ಕೀಲುಗಳ ಕಥೆಯಿಂದ ಮೇಲೆನಿಸಿಕೊಂಡವರು ಜೋರಾಗಿಯೇ ಹಿಂದೂ ಧರ್ಮದೊಂದಿಗೆ ಆತುಕೊಂಡುಬಿಟ್ಟರು. ಹೀಗಾಗಿಯೇ ಡೇನಿಯಲ್ ಉತ್ತಂಗಿಯವರು ಉಳುಮೆ ಮಾಡಿದ ನೆಲದಲ್ಲಿ ಬಹುವಾದ ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಲಿಲ್ಲ ಚರ್ಚು . ಸ್ವಾತಂತ್ರ್ಯಾನಂತರ ಚರ್ಚಿನ ಗಮನ ಈಶಾನ್ಯ ರಾಜ್ಯಗಳಿಂದ ತಮಿಳುನಾಡಿನತ್ತ, ಆಂಧ್ರಪ್ರದೇಶದತ್ತ ತಿರುಗಿತು. ನಾಲ್ಕಾರು ದಶಕಗಳಲ್ಲಿ ತಮಿಳು ನಾಡನ್ನು ಸಂಪೂರ್ಣ ಹಾಳು ಮಾಡಿ, ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ರೆಡ್ಡಿ ಮುಖ್ಯಮಂತ್ರಿಯಾದಾಗ ಹಿಂದೂ ದೇವಾಲಯಗಳನ್ನು ಆಪೋಶನ ತೆಗೆದುಕೊಂಡರು. ದೊಡ್ಡ ಪ್ರಮಾಣದಲ್ಲಿ ಸಕರ್ಾರೀ ಪ್ರೇರಿತ ಮತಾಂತರಕ್ಕೆ ಬುನಾದಿ ಹಾಕಿದರು. ಈ ವೇಳೆಯಲ್ಲಿ ತಿರುಪತಿಯನ್ನು ಉಳಿಸಲೆಂದು ಆಂದೋಲನಗಳೆಲ್ಲ ನಡೆದಿದ್ದು. ಹಿಂದೂ ಧರ್ಮದ ಮೇಲಿನ ಈ ಆಕ್ರಮಣ ತಣ್ಣಗಾಗಿದ್ದು ಯಾವಾಗ ಗೊತ್ತೇನು? ಮುಖ್ಯಮಂತ್ರಿಗಳ ವಿಮಾನ ಗುಡ್ಡವೊಂದಕ್ಕೆ ಢಿಕ್ಕಿ ಹೊಡೆದು ಅವರು ದಾರುಣವಾಗಿ ತೀರಿಕೊಂಡ ಮೇಲೇಯೇ. ಕೆಡುಕೆನಿಸಬಹುದು ಆದರೆ ಆ ಹೊತ್ತಲ್ಲಿ ಜನ ಇದನ್ನು ತಿಮ್ಮಪ್ಪನ ಶಾಪವೆಂದೇ ಆಡಿಕೊಂಡಿದ್ದರು. ರೆಡ್ಡಿ ಹಾಕಿಕೊಟ್ಟಿದ್ದ ಸರ್ಕಾರಿ ರಾಜಮಾರ್ಗದಲ್ಲಿ ವ್ಯವಸ್ಥಿತವಾಗಿ ಸಂಚರಿಸಿದ ಚರ್ಚು ತನ್ನ ಕೆಲಸವನ್ನು ಸಮರ್ಥವಾಗಿ ಮುಂದುವರೆಸಿತು. ಆ ವೇಳೆಗೇ ಇಲ್ಲಿ ಒಳಗೊಳಗೆ ಕಚ್ಚಾಡಿಕೊಂಡು ಅಧಿಕಾರವನ್ನು ಕೈಚೆಲ್ಲಿದ ಭಾಜಪಾ ಸಿದ್ದರಾಮಯ್ಯನವರಿಗೆ ಅಧಿಕಾರವನ್ನು ಹರಿವಾಣದಲ್ಲಿಟ್ಟು ಉಡುಗೊರೆಯಾಗಿ ಕೊಟ್ಟಿತು.

ಕಾಂಗ್ರೆಸ್ಸು ಅಧಿಕಾರಕ್ಕೆ ಬರುವುದರೊಂದಿಗೆ ಕಮ್ಯುನಿಸ್ಟು, ಇವ್ಯಾಂಜೆಲಿಸ್ಟ್ ಮತ್ತು ಐಎಸ್ಐಗಳ ಗುಂಪು ಒಟ್ಟಾಯ್ತು. ಸಿದ್ದರಾಮಯ್ಯನವರೊಂದಿಗೆ ಎಡಚರ ಗುಂಪಿತ್ತು, ಗೃಹ ಸಚಿವ ಜಾರ್ಜ್ ಜೊತೆಗೆ ಇವ್ಯಾಂಜಲಿಸ್ಟ್ಗಳು ಮತ್ತು ಕಾಂಗ್ರೆಸ್ಸಿನ ಸಹಜ ಪಿಎಫ್ಐ ನಂತಹ ಐಎಸ್ಐದ ಭಾರತೀಯ ಮುಖವಾಡಗಳೊಂದಿಗಿನ ಸಂಪರ್ಕ ಇವೆಲ್ಲವೂ ನೆಲ ಮಟ್ಟದಲ್ಲಿ ಕೆಲಸ ಮಾಡಲು ಶುರು ಮಾಡಿತು. ನಮ್ಮವರು ಹಿಂದೂ ಹುಲಿಗಳೆನಿಸಿಕೊಂಡು ಅಬ್ಬರದ ಭಾಷಣ ಮಾಡಿದರೇ ಹೊರತು ವ್ಯವಸ್ಥಿತವಾಗಿ ಕೆಲಸ ಮಾಡಲೇ ಇಲ್ಲ. ಅವರು ಹಾಗಲ್ಲ. ಬೆಂಗಳೂರಿನಲ್ಲಿ ಪವರ್ ಟು ಚೇಂಜ್ ಕಾರ್ಯಕ್ರಮ ಮಾಡಿ ಮುಕ್ತ ಮತಾಂತರಕ್ಕೆ ವೇದಿಕೆ ನಿರ್ಮಿಸಿದರು. ಮುಸಲ್ಮಾನರ ಮೇಲಿದ್ದ ಕೇಸುಗಳನ್ನು ಮರಳಿ ಪಡೆದು ಅವರು ಸಹಜವಾಗಿ ಓಡಾಡಿಕೊಂಡಿರುವಂತೆ ಮಾಡಿದರು. ಹಿಂದುಗಳ ಪರವಾಗಿ ಕಂಡವರನ್ನು ನಡು ರಸ್ತೆಯಲ್ಲೇ ಹೆಣವಾಗುವಂತೆ ಮಾಡಿದರು. ದಲಿತರನ್ನು ಬ್ರಾಹ್ಮಣರ ವಿರುದ್ಧ ಎತ್ತಿ ಕಟ್ಟಿದರು. ರಾಹುಲ್ ಗಾಂಧಿ ತಾನೇ ಬ್ರಾಹ್ಮಣ ಎಂದು ಗುಜರಾತಿನಲ್ಲಿ ಹೇಳಿಕೆ ಕೊಟ್ಟಮೇಲೆ ಮಾತಿಲ್ಲದಂತಾಯ್ತು! ಇಲ್ಲಿಗೇ ನಿಲ್ಲದಂತೆ ಅವರು ಮಿಶನರಿಗಳ ಆರೆಂಟು ದಶಕಗಳ ಯೋಜನೆಯಂತೆ ಲಿಂಗಾಯತರನ್ನು ಹಿಂದೂ ಧರ್ಮದಿಂದ ಹೊರಗೆ ತರುವ ಯೋಜನೆಗೆ ರೂಪುರೇಷೆ ತಯಾರು ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 2015ರಲ್ಲಿಯೇ ಜನಗಣತಿ ಮಾಡಿಸಿ ಅದರ ಫಲಿತಾಂಶವನ್ನು ಗುಪ್ತವಾಗಿ ಇರಿಸಿಕೊಂಡರು. ಒಂದಷ್ಟು ಕಾವಿಧಾರಿ ರಾಜಕಾರಣಿಗಳನ್ನು ಮುಂದಿರಿಸಿಕೊಂಡು ಅವರ ಮೂಲಕ ತಮ್ಮ ಆಸಕ್ತಿಯನ್ನು ಈಡೇರಿಸಿಕೊಳ್ಳಲಾರಂಭಿಸಿದರು. ಕೆಲವರಂತೂ ಉತ್ತಂಗಿ ಚೆನ್ನಪ್ಪ, ಕಲ್ಬುಗರ್ಿಯವರುಗಳ ಆತ್ಮವೇ ಮರುಹುಟ್ಟಿದೆಯೇನೋ ಎಂಬಂತೆ ಹಿಂದೂ ಧರ್ಮದ ಆಚರಣೆಗಳನ್ನು, ಪೂಜಾ ಪದ್ಧತಿಗಳನ್ನು ವಿರೋಧಿಸಲಾರಂಭಿಸಿದರು. ಹಿಂದೂ ಧರ್ಮ ಶೋಷಣೆಯ ಸಂಕೇತವೆಂದರು. ಇವರು ಧರಿಸಿರುವ ಕಾವಿಯೇ ಹಿಂದೂ ಧರ್ಮದ ಭಿಕ್ಷೆ, ಮಠಾಧೀಶ ಸ್ಥಾನವೂ ಈ ಪರಂಪರೆಯದ್ದೇ ಎಂಬುದನ್ನು ಮರೆತೇ ಬಿಟ್ಟರು. ಮೇಲ್ವರ್ಗದವರು ಕೆಳವರ್ಗದವರನ್ನು ಶೋಷಿಸಿವುದು ಹಿಂದೂಧರ್ಮ ಎಂದ ಕಾವಿಧಾರಿಗಳು, ಭಕ್ತರಿಂದ ಕಾಲಿಗೆ ಬೀಳಿಸಿಕೊಳ್ಳುವುದೂ ಶೋಷಣೆಯೇ ಎಂಬುದನ್ನು ಗೌಣವಾಗಿಸಿಬಿಟ್ಟರಲ್ಲ ಹೇಗೆ? ಪರಂಪರೆಯನ್ನು ಬದಲಾಯಿಸಿ ಭಕ್ತರ ಕಾಲಿಗೆ ಇವರುಗಳೇ ಏಕೆ ನಮಸ್ಕಾರ ಮಾಡಬಾರದು! ಹಾಗಂತ ಸ್ವಾಮಿಗಳೆನಿಸಿಕೊಂಡವರೊಬ್ಬರನ್ನು ನಾನು ಕೇಳಿದಾಗ ಪರಾರಿಯಾಗಿಬಿಟ್ಟಿದ್ದರು ಆಸಾಮಿ! ರಾಜ್ಯ ಕೊಲೆ-ಸುಲಿಗೆಗಳಲ್ಲಿ ಬಳಲಿ ಬೆಂಡಾದಾಗ ಮಾತನಾಡದ ಸಿದ್ದರಾಮಯ್ಯ, ರೈತರ ಆತ್ಮಹತ್ಯೆಗಳು ಮಿತಿಮೀರಿ ನಡೆದಾಗ ಬಾಯ್ಬಿಡದ ಮುಖ್ಯಮಂತ್ರಿಗಳು ಲಿಂಗಾಯತ ಧರ್ಮದ ವಿಚಾರಕ್ಕೆ ಮಾತ್ರ ಸಂಪುಟದ ಮಂತ್ರಿಗಳನ್ನೇ ಪೂರ್ತಿ ಜವಾಬ್ದಾರಿ ಕೊಟ್ಟು ಕಳಿಸಿಕೊಟ್ಟರು. ಇದರ ಹಿಂದೆ ಇದ್ದಿದ್ದು ಬರಿಯ ರಾಜಕಾರಣವೋ ಅಥವಾ ಮಿಶನರಿಗಳ ಹಣದ ಹೊಳೆಯೋ ಇನ್ನಷ್ಟೇ ಹೊರಬರಬೇಕಿದೆ.

ಹಾಗಂತ ಇಲ್ಲಿ ಮಾತ್ರವಲ್ಲ, ಮೋದಿ ಪ್ರಧಾನಿಯಾದಾಗಿನಿಂದಲೂ ಈ ಬಗೆಯ ದಾಳಗಳನ್ನು ಕಾಂಗ್ರೆಸ್ಸು ಎಸೆಯುತ್ತಲೇ ಬಂದಿದೆ. ಗುಜರಾತಿನಲ್ಲಿ ಪಟೇಲ್ ಆಂದೋಲನದ ರೂವಾರಿ ಹಾದರ್ಿಕ್ಗೆ ಹಣ ಕೊಟ್ಟು ಸಲಹಿದವ ಸ್ವತಃ ರಾಹುಲ್ ಗಾಂಧಿ. ಅಲ್ಲಿನ ಕ್ರಿಶ್ಚಿಯನ್ ಚರ್ಚುಗಳು ಕಾಂಗ್ರೆಸ್ಸಿನ ಪರವಾಗಿ ನಿಲ್ಲಬೇಕೆಂದು ಘೋಷಣಾ ಪತ್ರವನ್ನು ಹೊರಡಿಸಿದ್ದು ಮರೆಯುವುದು ಹೇಗೆ? ಹರ್ಯಾಣಾದಲ್ಲಿ ಜಾಟರನ್ನು ಬೀದಿಗೆ ಎಳೆದು ತಂದಿತಲ್ಲ; ಮಹಾರಾಷ್ಟ್ರದಲ್ಲಿ ಮರಾಠರೂ ದಲಿತರಿಗೂ ಕದನಕ್ಕೆ ಹಚ್ಚಿದ ಜಿಗ್ನೇಶ್ ಕಾಮಗ್ರೆಸ್ಸಿನ ಬೆಂಬಲಿಗ! ಈ ಹಿಂದೆ ಉಡುಪಿ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ರೋಷಾವೇಷದಲ್ಲಿ ಕೂಗಾಡಿ ಇಲ್ಲೊಂದು ಬ್ರಾಹ್ಮಣ-ದಲಿತ ಕದನ ಹುಟ್ಟುಹಾಕಬೇಕೆಂದು ಪ್ರಯತ್ನಿಸಿ ನಾವೆಲ್ಲ ಅಡ್ಡಗಟ್ಟಿ ನಿಂತಮೇಲೆ ಬಾಲ ಮುದುರಿಕೊಂಡು ನಾಪತ್ತೆಯಾದರಲ್ಲ ಅದೂ ದೊಡ್ಡ ಯೋಜನೆಯೇ ಆಗಿತ್ತು. ಎಲ್ಲರೂ ಬುದ್ಧಿವಂತರಾದರು. ಲಿಂಗಾಯತರು ಬಲಿಯಾಗಿಬಿಟ್ಟರಷ್ಟೇ. ಲಿಂಗಾಯತ ಧರ್ಮದ ಕದನ ಕೋಟರ್ಿನ ಅಂಗಳಕ್ಕೆ ಹೋದರೆ ಅದಕ್ಕೆ ಸೋಲು ಖಚಿತ. ಈ ಹಿಂದೆಯೇ ಸುಪ್ರೀಂ ಕೋರ್ಟು ಈ ರೀತಿಯ ನಿರ್ಣಯವೊಂದನ್ನು ಕೊಟ್ಟಾಗಿದೆ. ಎಲ್ಲ ಗೊತ್ತಿದ್ದೂ ಈ ಬಗೆಯ ಮನೆಮುರುಕ ಕೆಲಸಕ್ಕೆ ಸಿದ್ದರಾಮಯ್ಯ ಕೈಹಾಕಿರುವುದೇಕೆ ಗೊತ್ತೇನು? ಶಾಶ್ವತವಾಗಿ ಲಿಂಗಾಯತರನ್ನು ಬೃಹತ್ ಸಮಾಜದ ದ್ವೇಷಿಗಳನ್ನಾಗಿ ಮಾಡಿ ಮಿಶನರಿಗಳಿಗೆ ಅವರನ್ನು ಸುಲಭದ ಆಹಾರವಾಗಿಸಲು ಅಷ್ಟೇ.
ಒಬ್ಬ ಮೋದಿಯನನು ಎದುರಿಸಲು ಎಂಥೆಂಥವರೆಲ್ಲ ಒಟ್ಟಾಗುತ್ತಿದ್ದಾರೆ ನೋಡಿ. ಮಿಶನರಿಗಳಿಗೂ ಗೊತ್ತಿದೆ, ಇನ್ನೊಂದು ಅವಧಿಗೆ ಮೋದಿ ಮುಂದುವರಿದರೆ ಹಿಂದುಗಳು ಕ್ರಿಶ್ಚಿಯನ್ನರಾಗಿ ಮತಾಂತರವಾಗುವುದಿರಲಿ ಅವರುಗಳೇ ದೊಡ್ಡ ಪ್ರಮಾಣದಲ್ಲಿ ಘರ್ ವಾಪ್ಸಿಯಾಗುತ್ತಾರೇಂತ. ಅದಕ್ಕೇ ಪತರಗುಟ್ಟಿರೋದು. 2019ರ ಚುನಾವಣೆಗೂ ಮುನ್ನ ಇಂತಹ ಇನ್ನೂ ಅನೇಕ ಮನೆ ಮುರುಕರು ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೇ ಈ ಬಾರಿಯೇ ಆ ಅಯೋಗ್ಯರಿಗೆಲ್ಲ ಪಾಠ ಕಲಿಸಬೇಕಿದೆ. ಚೆಂಡು ನಿಮ್ಮ ಅಂಗಳದಲ್ಲಿಯೇ ಇದೆ! ಮತವನ್ನು ಧರ್ಮ ಮಾಡಿದವರಿಗೆ ಮತದ ಮೂಲಕವೇ ಉತ್ತರಿಸಬೇಕಿದೆ.

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
ಚಕ್ರವರ್ತಿ ಸೂಲಿಬೆಲೆ March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
ಚಕ್ರವರ್ತಿ ಸೂಲಿಬೆಲೆ March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search