ಮಹಿಳಾ ಪೀಡಕ ಸರ್ಕಾರ ಕಿತ್ತೊಗಿಯಿರಿ: ರಾಜ್ಯ ಸರ್ಕಾರದ ವಿರುದ್ಧ ಇರಾನಿ ಕಿಡಿ
![](https://tulunadunews.com/wp-content/uploads/2018/04/smriti-irani-afp-650_650x400_51468232574.jpg)
ಧಾರವಾಡ: “ರಾಜ್ಯದಲ್ಲಿ ಜಾತಿ, ಧರ್ಮಗಳ ಮಧ್ಯೆ , ಜನರಲ್ಲಿ ವಿಷ ಬೀಜ ಬಿತ್ತಿ ಒಡೆದು ಆಳಲು ಹಂಬಲಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಕಹಳೆ ಮೊಳಗಿಸಿದಂತೆ, ಹೋರಾಟದ ಕಿಚ್ಚಿನ ಕಹಳೆ ಮೊಳಗಿಸಬೇಕು’ ಇದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಖಡಕ್ ನುಡಿಗಳು.
ನಗರದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಮಹಿಳೆಯರ ಸಂವಾದದಲ್ಲಿ ಮಾತನಾಡಿದ ಅವರು, ದುಷ್ಟ ಸರ್ಕಾರವನ್ನು ನಿರ್ನಾಮ ಮಾಡುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಜನರ ಎದುರು ಉತ್ತಮ ಆಯ್ಕೆಯ ಅವಕಾಶ ದೊರೆತ್ತಿದೆ. ಆದ್ದರಿಂದ ಕೆಟ್ಟದನ್ನು ನಿರ್ನಾಮ ಮಾಡಿ ಒಳ್ಳೆಯದನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮಹಿಳಾ ಐಎಸ್, ಐಪಿಎಸ್ ಅಧಿಕಾರಿಗಳಿಗೆ ಕಿರುಕುಳ ನೀಡುವ ಸರ್ಕಾರಕ್ಕೆ ರಾಜ್ಯದ ಮಹಿಳೆಯರು ತಕ್ಕ ಉತ್ತರ ನೀಡಬೇಕಿದೆ. ಮಹಿಳಾ ದೌರ್ಜನ್ಯ ತಡೆಗಟ್ಟದ ಸರ್ಕಾರದ ವಿರುದ್ಧ ಹೋರಾಡಬೇಕಿದೆ. ಇಲ್ಲದಿದ್ದರೇ ರಾಜ್ಯದಲ್ಲಿ ತಲೆ ಎತ್ತಿ ತಿರುಗಾಡದಂತ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದೆ. ತಲಾಖ್ ಪದ್ಧತಿ ನಿಷೇಧಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯ ತಡೆಯಲಾಗಿದೆ ಎಂದು ಹೇಳಿದರು.
Leave A Reply