• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಾಟ್ಸ್ ಅಪ್ ಎಡ್ಮಿನ್ ಗಳೇ ನಿಮಗಿನ್ನೂ ಬಂಧನದ ಭಯ ಬೇಡಾ!

TNN Correspondent Posted On July 21, 2017
0


0
Shares
  • Share On Facebook
  • Tweet It

ನೀವು ಸಾಮಾಜಿಕ ತಾಣಗಳಲ್ಲಿ ಬರೆಯುವ ಮೊದಲು ಯೋಚಿಸಿ, ನಿಮ್ಮ ಬರಹಗಳು ನಿಮ್ಮನ್ನು ಜೈಲಿನ ಕಂಬಿಗಳ ಹಿಂದೆ ನಿಲ್ಲಿಸಬಹುದು ಎಂದು ಐಟಿ ಆಕ್ಟ್ ಸೆಕ್ಷನ್ 66-ಎ ನಲ್ಲಿ ಇದೆ ಎಂದು ಯಾರಾದರೂ ಹೇಳಿದ್ದನ್ನು ನೀವು ಕೇಳಿಸಿರಬಹುದು ಅಥವಾ ಇತ್ತೀಚೆಗೆ ಇದೇ ವಿಷಯದ ಮೇಲೆ ಪೊಲೀಸರು ಕೆಲವರನ್ನು ಬಂಧಿಸಿದ್ದನ್ನು ನೀವು ಮಾಧ್ಯಮಗಳ ಮೂಲಕ ಗಮನಿಸಿರಬಹುದು. ಆದರೆ ಭಾರತದ ಸರ್ವೋಚ್ಚ ನ್ಯಾಯಾಲಯ 2015 ರಲ್ಲಿಯೇ ಒಂದು ತೀರ್ಪು ನೀಡಿ ಈ ಸೆಕ್ಷನ್ ಉಪಯೋಗಿಸಿ ಯಾರನ್ನು ಕೂಡ ಬಂಧಿಸುವುದು ಸರಿಯಲ್ಲ ಎಂದು ಹೇಳಿದೆ.

ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಜೆ ಚೆಲ್ಮೇಸ್ವರ್ ಹಾಗೂ ಜಸ್ಟೀಸ್ ಆರ್ ಎಫ್ ನಾರಿಮನ್ ಅವರ ಪೀಠದಿಂದ ಬಂದ ತೀರ್ಪು ಬಹುಶ: ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ಹೊಸ ಹುಮ್ಮಸ್ಸನ್ನು ನೀಡಬಹುದು. ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯ ನಂತರ ತಮ್ಮ ತೀರ್ಪು ನೀಡಿದ ನ್ಯಾಯಾಧೀಶರು ಒಬ್ಬ ಪ್ರಜೆಯ ಮೂಲಭೂತ ಹಕ್ಕುಗಳಲ್ಲಿ ಮುಖ್ಯವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಯಾವ ಸರಕಾರವೂ ಮಾಡಬಾರದು ಎಂದು ಹೇಳಿದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಆಲೋಚಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಎರಡೂ ಇದೆ. ಒಬ್ಬ ವ್ಯಕ್ತಿಗೆ ಒಂದು ವಿಷಯ ತಿಳಿಯುವಲ್ಲಿ ಈ ಸೆಕ್ಷನ್ ಅಡ್ಡ ಬರುತ್ತದೆ ಎಂದರೆ ಅದು ಆತನ ಮೂಲಭೂತ ಹಕ್ಕನ್ನು ಹತ್ತಿಕ್ಕಿದಂತೆ ಎಂದು ಅಭಿಪ್ರಾಯ ಪಟ್ಟಿತು.

ಸಂವಿಧಾನದಲ್ಲಿ ಸ್ಪಷ್ಟವಾಗಿ ಒಬ್ಬ ನಾಗರಿಕನ ಹಕ್ಕಿನ ಬಗ್ಗೆ ಉಲ್ಲೇಖಗಳಿರುವಾಗ ಅದನ್ನು ಪ್ರತಿಭಂದಿಸುವುದು ಹೇಗೆ ಸಾಧ್ಯ ಎಂದು ನ್ಯಾಯಾಮೂರ್ತಿಗಳಾದ ಜೆ ಚೆಲ್ಮೇಸ್ವರ್ ಹಾಗೂ ನಾರಿಮನ್ ಪ್ರಶ್ನಿಸಿದರು. ಸಾರ್ವಜನಿಕ ಆದೇಶ ಮತ್ತು ಆ ಬಗ್ಗೆ ಚರ್ಚೆಗಳು ನಡೆದಾಗ ಪ್ರತಿಯೊಬ್ಬರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಸ್ವಾತಂತ್ರ್ಯ ಇದೆ. ನೀವು ಸೆಕ್ಷನ್ ಉಪಯೋಗಿಸಿ ಆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತಂದರೆ ಅದರಿಂದ ಜನ ಏನಾದರೂ ಹೇಳುವುದನ್ನು ನಿಲ್ಲಿಸುತ್ತಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರದ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿತು. ಇನ್ನೂ ಆ ಸೆಕ್ಷನ್ ನಲ್ಲಿ ಉಲ್ಲೇಖಿಸಿರುವ ” ಪೀಡನೆ”, ” ತೊಂದರೆ” ಮತ್ತು ” ಕೆಣಕುವ” ಶಬ್ದಗಳ ಬಗ್ಗೆ ಹೇಳಿದ ನ್ಯಾಯಾಧೀಶರು ” ಒಬ್ಬ ಮನುಷ್ಯನಿಗೆ ತೊಂದರೆ ಎಂದು ಅನಿಸಿದ್ದು ಇನ್ನೊಬ್ಬನಿಗೆ ಅಲ್ಲ ಎಂದು ಅನಿಸಬಹುದಲ್ಲ?” ಎಂದು ಪ್ರಶ್ನಿಸಿತು. ಅದಲ್ಲದೆ ಒಂದು ಸರಕಾರ ಜಾರಿಗೆ ತಂದಿದ್ದು ಅದರ ಮುಂದಿನ ಸರಕಾರಕ್ಕೂ ಅನ್ವಯವಾಗುತ್ತದೆ ಎಂದಲ್ಲ. ಸರಕಾರಗಳು ಬರುತ್ತವೆ, ಹೋಗುತ್ತವೆ, ಆದರೆ ಸೆಕ್ಷನ್ ಗಳು ಹಾಗೆ ಇರುತ್ತವೆ ಎಂದಿದೆ. ಆದರೆ ಐಟಿ ಆಕ್ಟ್ ನಲ್ಲಿ ಇರುವ ಮತ್ತೊಂದು ಸೆಕ್ಷನ್ ಅಡಿಯಲ್ಲಿ ವೆಬ್ ಸೈಟ್ ಗಳನ್ನು ನಿರ್ಭಂದಿಸುವ ಸರಕಾರದ ಹಕ್ಕಿಗೆ ನ್ಯಾಯಪೀಠ ತಡೆ ಒಡ್ಡಿಲ್ಲ.

ಹಾಗಂತ ಇನ್ನು ಮುಂದೆ ಮನಸ್ಸು ಬಂದಂತೆ ಸಾಮಾಜಿಕ ತಾಣಗಳಲ್ಲಿ ಬರೆಯಬಹುದು ಎಂದು ನ್ಯಾಯಾಲಯ ಹೇಳಿಲ್ಲ ಎನ್ನುವುದು ಕೂಡ ನಿಮ್ಮ ಗಮನಕ್ಕೆ ಇರಲಿ. ಒಟ್ಟಿನಲ್ಲಿ ಒಂದು ಸೆಕ್ಷನ್ ಉಪಯೋಗಿಸಿ ಸರಕಾರಗಳು ತಮ್ಮ ವಿರುದ್ಧ ಜನರ ಆಕ್ರೋಶ ಸಾಮಾಜಿಕ ತಾಣಗಳಲ್ಲಿ ಹೊರಬರದಂತೆ ತಡೆ ಒಡ್ಡಿದರೆ ಆಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅದು ದಕ್ಕೆ ಎಂದು ಹೇಳಿದೆ.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search