ಪಾಕ್ ಇನ್ನಾದರೂ ಬುದ್ಧಿಕಲಿಯಲಿ: ‘ಗ್ರೇ’ ಲಿಸ್ಟ್ ಗೆ ಪಾಕಿಸ್ತಾನ ಸೇರ್ಪಡೆಗೆ ಭಾರತದ ಸ್ವಾಗತ

ದೆಹಲಿ: ಭಯೋತ್ಪಾದಕರಿಗೆ ದೇಶ ವಿದೇಶಗಳಿಂದ ಹರಿದು ಬರುತ್ತಿರುವ ಹಣಕಾಸಿನ ನೆರವನ್ನು ತಡೆಯಲು ವಿಫಲರಾಗಿರುವ ಪಾಕಿಸ್ತಾನವನ್ನು ‘ಗ್ರೇ’ ಪಟ್ಟಿಗೆ ಸೇರಿಸಿರುವ ಫೈನಾನ್ಸಿಯಲ್ ಟಾಸ್ಕ್ ಫೋರ್ಸ್ ನಿರ್ಧಾರವನ್ನು ಭಾರತ ಸ್ವಾಗತಿಸಿದ್ದು, ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿಯಲಿ ಎಂದು ಸೂಚನೆ ನೀಡಿದೆ. ಭಯೋತ್ಪಾದಕ ಮೂಲ ಸ್ಥಾನ ಎಂಬ ಬಿರುದ್ಧು ಪಡೆದಿರುವ ಪಾಕಿಸ್ತಾನಕ್ಕೆ ಈ ಮೂಲಕ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಭಾರಿ ಮುಖಂಭಗವಾಗಿದ್ದು, ಭಾರತವೂ ಇದೇ ಸಮಯವನ್ನು ಪಾಕಿಸ್ತಾನದ ವಿಧ್ವಸಂಕ ಮನಸ್ಥಿತಿಯನ್ನು ಜಾಗತಿಕ ಮಟ್ಟಕ್ಕೆ ತಿಳಿಸಲು ಯತ್ನಿಸುತ್ತಿದೆ.
ಗ್ರೇ ಪಟ್ಟಿಗೆ ಸೇರಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯಗಳ ಕಾರ್ಯದರ್ಶಿ ರವೀಶಕುಮಾರ, ಎಫ್ ಎಟಿಎಫ್ ನಿರ್ಧಾರ ಸ್ವಾಗತಾರ್ಹವಾಗಿದೆ. ಪಾಕಿಸ್ತಾನ ಉಗ್ರ ಪೋಷಣೆಯನ್ನು ಇನ್ನಾದರೂ ನಿಯಂತ್ರಿಸಬೇಕು. ಬುದ್ಧಿಕಲಿಯದಿದ್ದರೇ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ. ಈ ನಿರ್ಧಾರದಿಂದ ಪಾಕಿಸ್ತಾನ ಬುದ್ಧಿಕಲಿಯಬೇಕು. ಎಫ್ ಎಟಿಎಫ್ ಕಾರ್ಯಯೋಜನೆ ಮೂಲಕವಾದರೂ ಪಾಕಿಸ್ತಾನದಲ್ಲಿ ಉಗ್ರ ಕಾರ್ಯಚಟುವಟಿಕೆಗೆ ನಿಯಂತ್ರಣ ಬೀರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರ ಪಾಲಿಗೆ ಸ್ವರ್ಗವಾಗಿದೆ ಎಂಬ ಭಾರತದ ಆರೋಪಕ್ಕೆ ಎಫ್ ಎಟಿಎಫ್ ನ ಈ ನಿರ್ಧಾರದಿಂದ ಭಾರತದ ವಾದಕ್ಕೆ ಭಾರಿ ಬಲ ಬಂದತಾಗಿದೆ. ಈ ಮೂಲಕ ಪಾಕಿಸ್ತಾನ ಪೋಷಿತ ಭಯೋತ್ಪಾದಕರು 2008ರ ಮುಂಬೈ ದಾಳಿ ಸೇರಿ ದೇಶದಲ್ಲಿ ನಡೆಸಿರುವ ದಾಳಿಗಳಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬುದಕ್ಕೆ ಮತ್ತೊಂದು ಪ್ರಬಲ ಸಾಕ್ಷ್ಯ ದೊರೆತಂತಾಗಿದೆ.
ಪಾಕಿಸ್ತಾನ ಭಯೋತ್ಪಾದಕರಿಗೆ ರಾಜಕೀಯ ಆಶ್ರಯ ನೀಡುತ್ತಿದೆ. ಇದರಿಂದ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಮಾನ ನಿರಂತರವಾಗಿ ಹರಾಜಾಗುತ್ತಿದೆ. ಅಲ್ಲದೇ ವಿದೇಶಗಳಿಂದ ದೇಣಿಗೆ ಸಂಗ್ರಹಿಸುವಲ್ಲಿ ಭಯೋತ್ಪಾದಕರು ನಿರತರಾಗಿದ್ದರೂ, ಪಾಕಿಸ್ತಾನ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ವಿಶ್ವಸಂಸ್ಥೆ ಸೇರಿ ವಿಶ್ವದ ನಾನಾ ರಾಷ್ಟ್ರಗಳು ಪಾಕಿಸ್ತಾನಕ್ಕೆ ಎಚ್ಚರಿಸಿದರೂ ಬುದ್ಧಿ ಕಲಿತ್ತಿಲ್ಲ. ಇದೀಗ ಎಫ್ಎಟಿಎಫ್ ಗೆ ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಿರುವುದು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಮಾನ ಹರಾಜು ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
Leave A Reply