ಅ.6. ರ ಪತ್ನಿಯ ಬರ್ತ್ ಡೇ ಗೆ ಸೆ. 25 ರಂದು ಪತಿ ಯೋಧನ ಶುಭಾಶಯ..!!
Posted On October 10, 2018
0
ಮಂಗಳೂರು-ಸೈನಿಕರು ಕಾಯುವ ಗಡಿ ಪ್ರದೇಶದಲ್ಲಿ ನೆಟ್ ವರ್ಕ್ ಸಿಗುವುದು ಕಷ್ಟ ಹಾಗಾಗಿ ಸೇನೆಯಿಂದ ಬೇರೆ ಫೋನ್ ಸೌಲಭ್ಯವನ್ನು ಕಲ್ಪಿಸಿರುತ್ತಾರೆ. ನಿಗದಿತ ಸಮಯದಲ್ಲಿ ಒಬ್ಬರ ಹಿಂದೆ ಮತ್ತೊಬ್ಬರು ಕಾಯಬೇಕಾದ ಪರಿಸ್ಥಿತಿ ಇದ್ದದ್ದೇ. ಅವರು ತಮ್ಮ ವ್ಯೆಯಕ್ತಿಕ ಫೋನ್ ನಲ್ಲಿ ಕುಟುಂಬದವರಿಗೆ ಮಾತನಾಡಲು ಅವಕಾಶವಿದೆ ಆದರೆ ಇದಲ್ಕೆ ನೆಟ್ವರ್ಕ್ ಸಹಕರಿಸಬೇಕಷ್ಟೆ..ಹೌದು ನಾವು ಇಷ್ಟೆಲ್ಲ ಹೇಳಲು ಕೂಡ ಕಾರಣ ವಿದೆ. ಅದು ಏನಂತಿರ ಈ ಸ್ಟೋರಿ ಓದಿ.
ಬೇಸರಿಸಬೇಡ ಇಲ್ಲಿ ನೆಟ್ವರ್ಕ್ ಇಲ್ಲ 1-300 ಕೀಮಿ ದೂರ ಇದ್ದೇನೆ 10 ದಿನ ಆಯಿತು.ನೆಟ್ವರ್ಕ್ ಸಿಗುವುದೇ ದುಸ್ತರ ಎನಿಸಿದೆ ಹಾಗಾಗಿ ನಿನ್ನ ಹುಟ್ಟುಹಬ್ಬದ ಮೊದಲೇ ಮೆಸೆಜ್ ಮಾಡಿರುವೆ ಅಮ್ಮನಿಗೆ ತಿಳಿಸು ರಜೆ ಸಿಕ್ಕರೆ ದೀಪಾವಳಿಗೆ ಬರುವೆ ವಿಶ್ ಯು ಹ್ಯಾಪಿ ಬರ್ತ್ ಡೆ .. ಹೀಗೆ ಅಂತ ವಿಶ್ ಮಾಡಿದ್ದು ಯಾರಿಗೆ ಗೊತ್ತೆ…

ಜಮ್ಮು ಕಾಶ್ಮೀರ ಭಾರತ- ಪಾಕಿಸ್ಥಾನ ಗಡಿಭಾಗದಲ್ಲಿ ದೇಶ ಕಾಯುವತ್ತರಿರುವ ಯೋಧನೊಬ್ಬ ತನ್ನ ಪತ್ನಿಗೆ ಬರ್ತ್ ಡೇ ವಿಶ್ ಗಾಗಿ ಕಳುಹಿಸಿದ ಫೇಸ್ ಬುಕ್ ಮೆಸೆಜ್ ತ್ಯಾಗದಕಥೆಯನ್ನು ಹೇಳುತ್ತದೆ.ಪಂಜ ಸಮೀಪದ ಕೂತ್ಕುಂಜ ಗ್ರಾಮ ಕಕ್ಯಾನ ನಿವಾಸಿ ಯೋಧ ಸುದರ್ಶನ ಗೌಡ ತನ್ನ ಪತ್ನಿ ಲಾವಣ್ಯ ಅವರ ಹುಟ್ಟುಹಬ್ಬಕ್ಕೆ ಕಳುಹಿಸಿದ ಸಂದೇಶ ಈಗ ವೈರಾಲ್ ಆಗಿದೆ.ಸಂದೇಶಕ್ಕೆ ಉತ್ತರಿಸಿದ ಲಾವಣ್ಯ ಸಹ ಒಂದು ತಿಂಗಳಾಯಿತು ನೀವು ಮಾತನಾಡಿ ತುಂಬಾ ಭಯ ಆಗಿತ್ತು ಈಗ ಯಾವ ಪ್ರದೇಶದಲ್ಲಿದ್ದೀರಿ ಎಂದು ತಮ್ಮ ಪತಿಯ ಯೋಗಕ್ಷೇಮ ವಿಚಾರಿಸಿದರು.
17 ವರ್ಷಗಳಿಂದ ದೇಶ ಸೇವೆ..
ಉಜಿರೆಯಲ್ಲಿ ಪದವು ವ್ಯಾಸಂಗ ಮಾಡುತ್ತಿದ್ದಾಗ ಸೈನ್ಯಕ್ಕೆ ಆಯ್ಕೆಗೊಂಡ ಸುದರ್ಶನ್ 17 ವರ್ಷಗಳಿಂದ ದೇಶವನ್ನಜ ಕಾಯುತ್ತಿದ್ದಾರೆ.
ಅಕ್ಟೋಬರ್ 6 ಹುಟ್ಟು ಹಬ್ಬಕ್ಕೆ.. ಸೆಪ್ಟೆಂಬರ್ 25 ಸಂದೇಶ..
ಅಕ್ಟೋಬರ್ 6 ರಂದು ಲಾವಣ್ಯ ಅವರ ಹುಟ್ಟು ಹಬ್ಬವಿತ್ತು ಅದಕ್ಕೆ ಸೆಪ್ಟೆಂಬರ್ 25 ರಂದು ಬರ್ತ್ ಡೇ ಮೆಸೆಜ್ ಮಾಡಿದ್ದಾರೆ..
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









