ನಳಿನ್ ಬಳಿ ಕ್ಷಮೆ ಕೇಳಿದ ಬಿಜೆಪಿ ಹಿರಿಯ ಮುಖಂಡ!! ಗರಂ ಆಗಿದ್ದ ಸುರೇಶ್ ಕುಮಾರ್ ಕ್ಷಮೆ ಕೇಳಿದ್ಯಾಕೆ ಗೊತ್ತೇ?!
ಎಡಪಂಥೀಯ ವಿಚಾರ ಧಾರೆಗಳನ್ನೇ ಮೈಗೂಡಿಸಿಕೊಂಡಿರುವಂತಹ ಕೆಲ ಮಾಧ್ಯಮಗಳು ನೈಜ್ಯ ಸುದ್ದಿಗಳನ್ನೇ ತಿರುಚುವುದರಲ್ಲಿ ನಿಪುಣರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ!! ನಿನ್ನೆಯಷ್ಟೇ, ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಭಟನೆ ನಡೆಸಿ, “ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಎಲ್ಲೆಡೆ ಸುದ್ದಿಯನ್ನು ಭಿತ್ತರಿಸಿದ್ದರು!!
ಈ ಕುರಿತಂತೆ ಬಿಜೆಪಿ ಹಿರಿಯ ಮುಖಂಡರಾದ ಸುರೇಶ್ ಕುಮಾರ್ ಎಸ್. ಅವರು ನಳಿನ್ ಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ್ದಲ್ಲದೇ, ನಮ್ಮ ರಾಜ್ಯದಲ್ಲಿ ಈ ರೀತಿಯ ಭಾಷೆಯಿಂದ ಕೂಡಿದ ಮಾತುಗಳ ಸ್ಪರ್ಧೆ ನಡೆದಿರುವುದು ಅತ್ಯಂತ ದುರದೃಷ್ಟಕರ. ಬಿಜೆಪಿಯ ಸಂಸದರಿಂದ ಇದನ್ನು ಜನತೆ ಬಯಸುವುದಿಲ್ಲ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಬಗ್ಗೆಯೂ ಮಾಧ್ಯಮಗಳು ಗಂಟಲು ಒಣಗುವಷ್ಟು ಬೊಬ್ಬೆ ಹೊಡೆದಿದ್ದರಲ್ಲದೇ ನಳಿನ್ ಹೇಳಿಕೆಗೆ ಬಿಜೆಪಿ ಮುಖಂಡನೇ ಗರಂ ಆಗಿದ್ದು, ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು!!
ಆದರೆ ಇದೀಗ ಸ್ವತಃ ಬಿಜೆಪಿ ಹಿರಿಯ ಮುಖಂಡರಾದ ಸುರೇಶ್ ಕುಮಾರ್ ಎಸ್ ಅವರು, ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದರೆನ್ನಲಾದ ಮಾತನ್ನು ಮಾಧ್ಯಮಗಳಲ್ಲಿ ಓದಿ ನನ್ನ ಪ್ರತಿಕ್ರಿಯೆ ಟ್ವೀಟ್ ಮಾಡಿದ್ದೆ ಎಂದು ಹೇಳಿದ್ದಾರಲ್ಲದೇ ಅವರು ಹಾಗೆ ಹೇಳಿಲ್ಲ ಎಂದು ತಿಳಿದುಬಂದಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ!! ಅಷ್ಟು ಮಾತ್ರವಲ್ಲದೇ, ನಳಿನ್ ಕುಮಾರ್ ಅವರು ನೀಡಿರುವ ಹೇಳಿಕೆಯ ಬಗ್ಗೆ ಕೆಲ ಮಾಧ್ಯಮಗಳು ನೀಡಿರುವ ತಪ್ಪು ವ್ಯಾಖ್ಯಾನಗಳನ್ನು ನೋಡಿ ಪ್ರತಿಕ್ರಿಯಿಸಿದ ನನ್ನಿಂದ ಚ್ಯುತಿಯಾಗಿದೆ ಎಂದು ಹೇಳಿದ್ದಾರೆ.
ಹೌದು ಇತ್ತೀಚೆಗಷ್ಟೇ, “ಒರ್ವ ಮತಾಂಧನಾಗಿರುವ ಟಿಪ್ಪು ಹಿಂದೂ ವಿರೋಧಿ. ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ. ಮತಾಂಧ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಆಚರಣೆ ಮಾಡಿದರು. ಹೀಗಾಗಿ ಕುಮಾರ ಸ್ವಾಮಿ ಟಿಪ್ಪುವಿನ ಬದಲು ಸಿದ್ದರಾಮಯ್ಯ ಜಯಂತಿ ಮಾಡಬಹುದಾಗಿತ್ತು. ಟಿಪ್ಪುವಿನ ಖಡ್ಗ ಪಡೆದ ವಿಜಯ ಮಲ್ಯ ಸೋತು ಸುಣ್ಣವಾದ್ರು. ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ್ರು. ಮುಂದೆ ಕುಮಾರ ಸ್ವಾಮಿಯೂ ಅಧಿಕಾರ ಕಳೆದುಕೊಂಡು ಕಾಡಿಗೆ ಹೋಗಲಿದ್ದಾರೆ” ಎಂದು ಮಂಗಳೂರಿನಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು!!
ಅಷ್ಟು ಮಾತ್ರವಲ್ಲದೇ, ಸಿಎಂ ಕುಮಾರ ಸ್ವಾಮಿಯವರು ಸಿದ್ದರಾಮಯ್ಯನವರ ಓಲೈಕೆಯ ನಿಟ್ಟಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಆದರೆ ಟಿಪ್ಪು ಜಯಂತಿ ಆಚರಣೆಗೆ ಗೈರು ಹಾಜರಾಗುವ ಮೂಲಕ ತಾನು ಆಚೆಯೂ ಅಲ್ಲ ಈಚೆಯೂ ಅಲ್ಲ ಎನ್ನುವಂತಹದ್ದನ್ನು ತೋರಿಸುವ ತಾಕತ್ತಿಲ್ಲದ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಸುದ್ದಿ ಮಾಧ್ಯಮಗಳು ಬೇರೊಂದು ಅರ್ಥವನ್ನು ಕಲ್ಪಿಸಿ ತಮ್ಮ ಟಿ.ಆರ್.ಪಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ತಾಮುಂದು ನಾಮುಂದು ಎಂದು ಸ್ಪರ್ಧೆಗಿಳಿದಿದ್ದರು!!
ಆದರೆ ಈ ಬಗ್ಗೆ ಸರಿಯಾಗಿ ವಿಮರ್ಶಿಸದ ಬಿಜೆಪಿ ಹಿರಿಯ ಮುಖಂಡರಾದ ಸುರೇಶ್ ಕುಮಾರ್ ಎಸ್ ಅವರು ನಳಿನ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದರೆನ್ನಲಾದ ಮಾತನ್ನು ಮಾಧ್ಯಮಗಳಲ್ಲಿ ಓದಿ, ನನ್ನ ಪ್ರತಿಕ್ರಿಯೆ ಟ್ವೀಟ್ ಮಾಡಿದ್ದೆ. ಅವರು ಹಾಗೆ ಹೇಳಿಲ್ಲ ಎಂದು ತಿಳಿದುಬಂದಿದೆ. ಕೆಲ ಮಾಧ್ಯಮಗಳ ತಪ್ಪು interpretation ನೋಡಿ ಪ್ರತಿಕ್ರಿಯಿಸಿದ ನನ್ನಿಂದ ಚ್ಯುತಿಯಾಗಿದೆ ಎಂದು ಹೇಳುವ ಮೂಲಕ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾರೆ!! ಆದರೆ ನಳಿನ್ ವಿರುದ್ಧ ಹಾರಿಹಾಯ್ದಿದ್ದ ಸುದ್ದಿ ಮಾಧ್ಯಮಗಳು ಮಾತ್ರ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ನಿರಾಳ ಮೌನ ವಹಿಸುತ್ತಿರುವುದನ್ನು ನೋಡಿದರೆ ಎಡಪಂಥೀಯರ ಕೃಪಾಕಟಾಕ್ಷ ಈ ಮಾಧ್ಯಮಗಳ ಮೇಲೆ ಅದೆಷ್ಟು ಪ್ರಭಾವ ಬೀರಿದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ!!
Leave A Reply