• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹೀಗೆ ನಾವು ನಿರ್ಲಕ್ಷ್ಯ ಮಾಡಿದರೆ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ!!

Hanumantha Kamath Posted On February 27, 2019
0


0
Shares
  • Share On Facebook
  • Tweet It

ಫೆಬ್ರವರಿ ಮಧ್ಯದಿಂದಲೇ ಮಂಗಳೂರಿನಲ್ಲಿ ಬಿಸಿಗಾಳಿ ಬೀಸುತ್ತಿದೆ. ಇನ್ನೂ ಮೂರು ತಿಂಗಳುಗಳನ್ನು ನಾವು ಈ ಬಿಸಿಯಲ್ಲಿಯೇ ತೆಗೆಯಬೇಕು. ಎಲ್ಲಿ ಹೋದರೂ ಎಲ್ಲರದ್ದೂ ಒಂದೇ ಮಾತು. ಎಂಚಿನ ಬೆಚ್ಚ ಮಾರ್ರೆ ಕುಡ್ಲ. ಎಂತಹ ಬಿಸಿ ಮಂಗಳೂರಿನಲ್ಲಿ. ಅಷ್ಟಕ್ಕೂ ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಸೆಕೆ, ಬಿಸಿ ಗಾಳಿ, ಉಷ್ಣಹವೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಲು ಕಾರಣವೇನು? ಸಂಶಯವೇ ಇಲ್ಲ. ಮಂಗಳೂರು ಕಾಂಕ್ರೀಟ್ ಕಾಡಾಗಿ ಬೆಳೆಯುತ್ತಿದೆ. ಕಟ್ಟಡಗಳು ಕಾಂಕ್ರೀಟ್, ರೋಡ್ ಕಾಂಕ್ರೀಟ್. ಎಲ್ಲವೂ ಕಾಂಕ್ರೀಟ್. ಇದರಿಂದ ಏನಾಗುತ್ತಿದೆ ಎಂದರೆ ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲೆ ಇದ್ದಾಗ ವಾತಾವರಣ ಎಷ್ಟು ಬಿಸಿ ಇರುತ್ತದೋ ಅಷ್ಟೇ ಬಿಸಿ ಮಧ್ಯಾಹ್ನ ಕಳೆದು ಸಂಜೆ ಐದು ಗಂಟೆಯ ತನಕ ಇರುತ್ತದೆ. ಹಿಂದೆ ಹೇಗಿತ್ತು ಎಂದರೆ ಮಧ್ಯಾಹ್ನದ ಸೂರ್ಯ ಊಟ ಮುಗಿಸಿ ಸಂಜೆ ಚಾ ಸಮಯದ ಒಳಗೆ ಪ್ರಖರತೆ ಕಡಿಮೆ ಮಾಡಿಕೊಳ್ಳುತ್ತಿದ್ದ. ಈಗ ಏನು ಎಂದರೆ ಸೂರ್ಯ ಹೇಗೆ ಇರಬೇಕೋ ಇವತ್ತಿಗೂ ಹಾಗೆ ಇದ್ದಾನೆ. ಆದರೆ ನಾವು ಬದಲಾಗಿದ್ದೇವೆ. ಹಿಂದೆ ಡಾಮರು ಇದ್ದ ರಸ್ತೆಗಳು, ಕಡಿಮೆ ಇದ್ದ ಬಿಲ್ಡಿಂಗ್ ಗಳು ಈಗ ಬದಲಾಗಿವೆ. ಈಗ ಏನಿದ್ದರೂ ಆಧುನಿಕತೆ. ಹಾಗಂತ ಕಾಂಕ್ರೀಟ್ ರೋಡ್ ಬೇಡಾ ಎನ್ನಲು ಆಗುತ್ತದಾ? ಬೇಡಾ ಎಂದು ನಮ್ಮ ಶಾಸಕರೋ, ಸಂಸದರೋ ಹೇಳಿದರೆ ಜನ ಅವರಿಗೆನೆ ಟೀಕೆ ಮಾಡಿಯಾರು. ಬೈಯಬಹುದು. ಹಾಗಾದರೆ ಇದನ್ನು ತಡೆಯಲು ಆಗುವುದಿಲ್ಲ. ಹಾಗಿದ್ದರೆ ನಾವು ಏನು ಮಾಡಬೇಕು. ಅದೇ ಪರಿಹಾರದ ಬಗ್ಗೆ ಇವತ್ತು ಮಾತನಾಡಲೇ ಬೇಕಾದ ಅವಶ್ಯಕತೆ ಇದೆ. ಕಾಂಕ್ರೀಟ್ ಕಾಡುಗಳ ನಡುವೆ ಹಸಿರು ಕಾಡನ್ನು ನಿರ್ಮಿಸಲು ನಾವು ಶುರು ಮಾಡಬೇಕು. ಇವತ್ತಿನ ದಿನ ಏನಾಗಿದೆ ಎಂದರೆ ನಗರದಲ್ಲಿ ನಾಲ್ಕು ಮರಗಳನ್ನು ನೋಡುವುದೂ ಒಂದೇ, ಮರುಭೂಮಿಯಲ್ಲಿ ಮಳೆ ನೋಡುವುದೂ ಒಂದೇ. ಹೀಗಾಗಿದೆ.

ಗಿಡ ನೆಡುವ ಸೂಚನೆ ಜಾರಿಗೆ ಬರುವುದೇ ಇಲ್ಲ.

ಅತ್ತ ಇತ್ತ ಮರಗಳನ್ನು ರಸ್ತೆ ಅಗಲ ಮಾಡುವಾಗ ಇವರು ಕಡಿಯುತ್ತಾರೆ. ಆದರೆ ಪ್ರಶ್ನೆ ಏನೆಂದರೆ ಇವರು ಮರಗಳನ್ನು ಕಡಿಯುವಾಗ ಎಷ್ಟು ಉತ್ಸಾಹ ತೋರಿಸುತ್ತದೆಯೋ ಅಷ್ಟೇ ಉತ್ಸಾಹವನ್ನು ರಸ್ತೆ ಅಗಲವಾದ ನಂತರ ಅಲ್ಲಿ ಗಿಡಗಳನ್ನು ನೆಡಲು ತೋರಿಸುವುದಿಲ್ಲ. ಪಾಲಿಕೆ ರಸ್ತೆ ಅಗಲ ಮಾಡುವಾಗ ಮರಗಳನ್ನು ಕಡಿಯಬಹುದಾ ಎಂದು ಅರಣ್ಯ ಇಲಾಖೆಯಿಂದ ಅನುಮತಿ ಕೇಳುತ್ತದೆ. ಆದರೆ ಅನುಮತಿ ಕೊಡುವಾಗ ಅರಣ್ಯ ಇಲಾಖೆ ಕಾಮಗಾರಿ ಮುಗಿದ ನಂತರ ಒಂದು ಮರ ಕಡಿದ ಜಾಗದಲ್ಲಿ ಎರಡು ಗಿಡಗಳನ್ನು ನೆಡಬೇಕು ಎಂದು ಹೇಳಿರುತ್ತದೆ. ಅದನ್ನು ಮಾತ್ರ ಇವರು ಯಾವ ಕಾರಣಕ್ಕೂ ಪಾಲಿಸಲು ಆಸಕ್ತಿ ತೋರಿಸುವುದಿಲ್ಲ.

ಇನ್ನು ಎಷ್ಟೋ ವಸತಿ ಸಮುಚ್ಚಯ ಈಗ ಬೆಳೆದು ನಿಂತಿರುವ ಜಾಗದಲ್ಲಿ ಅದು ಕಟ್ಟುವ ಮೊದಲು ಅನೇಕ ಹಳೆಯ ಮರಗಳು ಇದ್ದವು. ಆದರೆ ದೊಡ್ಡ ಅಪಾರ್ಟ್ ಮೆಂಟ್ ಕಟ್ಟಬೇಕಾದರೆ ಆ plot ಇರುವ ಜಾಗದಲ್ಲಿ ಮರಗಳನ್ನು ತೆರವುಗೊಳಿಸದೇ ಏನೂ ಕಟ್ಟಲು ಆಗುವುದಿಲ್ಲ. ಅದಕ್ಕೆ ಬಿಲ್ಡಿಂಗ್ ಕಟ್ಟುವ ಮೊದಲೇ ಬಿಲ್ಡರ್ ಗೆ ಪಾಲಿಕೆ ಒಂದು ಕಂಡೀಷನ್ ಹಾಕಿರುತ್ತದೆ. ಅದೇನೆಂದರೆ ಆ ವಸತಿ ಸಮುಚ್ಚಯದ ಆವರಣದಲ್ಲಿ ಗಿಡಗಳನ್ನು ನೆಡಬೇಕು ಎನ್ನುವುದು. ಒಂದು ಮರ ಕಟ್ ಮಾಡಿದರೆ ಎರಡು ಗಿಡಗಳನ್ನು ನೆಡಬೇಕು ಎನ್ನುವುದು. ಆದರೆ ಯಾವ ಬಿಲ್ಡರ್ ತಾನೆ ಈ ನಿಯಮಗಳನ್ನು ಅನುಸರಿಸುತ್ತಾರೆ. ಯಾರೂ ಇಲ್ಲ. ಎಲ್ಲರೂ ಎಷ್ಟು ಫ್ಲಾಟ್ ಕಟ್ಟುವುದು, ಎಷ್ಟು ಜಾಗವನ್ನು ಅತಿಕ್ರಮಣ ಮಾಡುವುದು. ಎಷ್ಟು ಅನಧಿಕೃತ ಮಹಡಿಗಳನ್ನು ಎತ್ತರಿಸುವುದು, ಎಷ್ಟು ಅಕ್ರಮ ಮಾಡಿ ಡಬ್ಬಲ್ ಟ್ಯಾಕ್ಸ್ ಕಟ್ಟಿ ಆದರೂ ಅಲ್ಲಿ ವ್ಯಾಪಾರ ವಹಿವಾಟು ಮಾಡಿ ಹಣ ಮಾಡುವುದು, ಇದೇ ಯೋಚನೆಯಲ್ಲಿ ಎಲ್ಲರೂ ಇರುತ್ತಾರೆ ವಿನ: ಗಿಡಗಳನ್ನು ನೆಡುವ ಬಗ್ಗೆ ಯಾರೂ ಕೂಡ ಟೆನ್ಷನ್ ಮಾಡುವುದಿಲ್ಲ. ಇ ನ್ನು ಅಲ್ಲಿಗೆ ಬರುವ ಗ್ರಾಹಕರು ಕೂಡ ಬಿಲ್ಡರ್ ಓನರ್ ಬಳಿ ಯಾಕೆ ಇಲ್ಲಿ ಗಿಡಗಳನ್ನು ನೆಟ್ಟಿಲ್ಲ. ಮುಂಚೆ ಇಲ್ಲಿ ಸಾಕಷ್ಟು ಮರಗಳು ಇದ್ದವಲ್ಲ ಎಂದು ಕೂಡ ಕೇಳುವುದಿಲ್ಲ. ಬಿಲ್ಡರ್ ಹೋಗಲಿ, ಅವರು ಹಣ ಮಾಡುವುದಕ್ಕಾಗಿಯೇ ಹುಟ್ಟಿರುವುದು ಎಂದೇ ಇಟ್ಟುಕೊಳ್ಳೋಣ, ಆ ಅಪಾರ್ಟ್ ಮೆಂಟಿನಲ್ಲಿ ವಾಸಿಸಲು ಬರುವ ಜನರಾದರೂ ನಾವು ನಮ್ಮ ಕೈಲಾದಷ್ಟು, ಇಲ್ಲಿ ಲಭ್ಯವಿರುವಷ್ಟು ಜಾಗದಲ್ಲಿ ಗಿಡ ನೆಡಬಹುದಲ್ಲ ಎಂದು ಯೋಚಿಸುವುದಿಲ್ಲ.

ಆದ್ದರಿಂದ ಒಂದಂತೂ ನಿಜ. ನಾವು ಆದಷ್ಟು ಬೇಗ ಎಚ್ಚೆತ್ತುಕೊಳ್ಳಲೇಬೇಕು. ಈಗಾಗಲೇ ಮರಗಳು ಮಂಗಳೂರಿನಲ್ಲಿ ಖಾಲಿಯಾಗುತ್ತಾ ಬಂದಿವೆ. ಸೆಕೆ, ಉಷ್ಣ ಹವೆ ತಾರಕಕ್ಕೆ ಏರಿದೆ. ನಾವು ಯೋಚಿಸದೇ ಹೋದರೆ ಒಂದು ದಿನ ನಾವು ಅತ್ಯಂತ ಕೆಟ್ಟ ಭೂಮಿಯನ್ನು ನಮ್ಮ ಮುಂದಿನ ತಲೆಮಾರಿಗೆ ಬಿಟ್ಟು ಹೋಗುತ್ತೇವೆ. ಯಾರಿಗೆ ಗೊತ್ತು, ಮುಂದಿನ ಜನ್ಮದಲ್ಲಿ ನಾವು ಮತ್ತೆ ಇದೇ ಭೂಮಿಯಲ್ಲಿ ಹುಟ್ಟಿದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪವನ್ನು ಅನುಭವಿಸಬೇಕಾಗುತ್ತದೆ!!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search