• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಜ್ಯದಲ್ಲಿ ಬಿಜೆಪಿ ಬಂದು 9 ತಿಂಗಳಾಯಿತು, ಗುಡ್ ನ್ಯೂಸ್ ಇಲ್ಲ!!

Hanumantha Kamath Posted On February 22, 2020
0


0
Shares
  • Share On Facebook
  • Tweet It

ಕರ್ನಾಟಕದಲ್ಲಿ ಸರಕಾರ ಬದಲಾಗಿ ಒಂಭತ್ತು ತಿಂಗಳು ಆಗುತ್ತಾ ಬಂದಿದೆ. ಸಾಮಾನ್ಯವಾಗಿ ಒಂಭತ್ತು ತಿಂಗಳು ಆಗುತ್ತಾ ಬಂದರೆ ಗುಡ್ ನ್ಯೂಸ್ ಯಾವಾಗ ಎಂದು ನೋಡಿದವರು ಕೇಳುತ್ತಾರೆ. ಆದರೆ ಸದ್ಯದ ನಮ್ಮ ರಾಜ್ಯ ಸರಕಾರವನ್ನು ನೋಡಿದರೆ ಗುಡ್ ಕೂಡ ಇಲ್ಲ, ನ್ಯೂಸ್ ಕೂಡ ಇಲ್ಲ ಎನ್ನುವ ಪರಿಸ್ಥಿತಿ. ನಾನೇಕೆ ಹಾಗೆ ಹೇಳುತ್ತಿದ್ದೇನೆ ಎಂದು ನೀವು ಕೇಳಬಹುದು. ಬೇಕಾದರೆ ನೀವೆ ನೋಡಿ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಸಿಂಪಲ್ ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಆರ್ ಟಿಒ ಕಚೇರಿಯಲ್ಲಿ ನಿಮ್ಮ ಹಳೆ ಡ್ರೈವಿಂಗ್ ಲೈಸೆನ್ಸ್ ಅನ್ನು ಸ್ಮಾರ್ಟ್ ಕಾರ್ಡ್ ಗೆ ಬದಲಾಯಿಸಲು ನೀವು ನಿರ್ಧರಿಸಿದ್ದಿರಿ ಎಂದು ಇಟ್ಟುಕೊಳ್ಳೋಣ. ಅಲ್ಲಿ ಆರ್ ಟಿಒ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ಮಾಡುವ ಕೆಲಸವನ್ನು ಹೊರಗುತ್ತಿಗೆಗೆ ಕೊಟ್ಟಿದ್ದಾರೆ. ನೀವು ನೇರ ದಾರಿಯಲ್ಲಿ ಹೋದರೆ ಕನಿಷ್ಟ 2-3 ತಿಂಗಳು ಆದರೂ ಅವರು ತೆಗೆದುಕೊಳ್ಳುತ್ತಾರೆ. ಅದೇ ನೀವು ಬ್ರೋಕರ್ ಅವರನ್ನು ಹಿಡಿದುಕೊಂಡು ಹೋದರೆ 2-3 ದಿನಗಳು ಕೂಡ ಬೇಕಂತಿಲ್ಲ. ಇದು ಹೇಗೆ ಸಾಧ್ಯ. ಬ್ರೋಕರ್ ಗಳು ಹೋದ ಕೂಡಲೇ ಆರ್ ಟಿಒ ಕಚೇರಿಯವರೆಗೆ ಎರಡು ಇದ್ದ ಕೈಗಳು ನಾಲ್ಕು ಆಗುತ್ತಾ?

ಆರ್ ಟಿಒ ಕಚೇರಿಯಿಂದ ಸ್ವಲ್ಪ ದೂರ ನಡೆದುಕೊಂಡು ಬಂದರೆ ಅಲ್ಲಿ ನಿಮಗೆ ತಾಲೂಕು ಪಂಚಾಯತ್ ಕಚೇರಿ ಸಿಗುತ್ತದೆ. ಅಲ್ಲಿ ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಸಹಿತ ಇತರ ಅನೇಕ ಉಪಯುಕ್ತ ಪ್ರಮಾಣಪತ್ರಗಳನ್ನು ಮಾಡಿಕೊಡಲಾಗುತ್ತದೆ. ಆದರೆ ಯಾವಾಗ? ನೀವು ಗಾಂಧಿಮಾರ್ಗದಲ್ಲಿ ಹೋದರೆ ಯಾವಾಗ ಸಿಗುತ್ತದೆ ಎನ್ನುವುದು ಯಾವ ಜ್ಯೋತಿಷ್ಯಿಗೂ ಹೇಳುವುದು ಕಷ್ಟ. ಅದೇ ಬ್ರೋಕರ್ ಮೂಲಕ ಹೋದರೆ ನೀವು ನಿಮ್ಮ ಆದಾಯವನ್ನು ಲೆಕ್ಕ ಹಾಕುವಷ್ಟರ ಒಳಗೆ ಪ್ರಮಾಣಪತ್ರ ಕೈಯಲ್ಲಿ ಇರುತ್ತದೆ. ನಮ್ಮ ಸರಕಾರಿ ಕಚೇರಿಗಳಲ್ಲಿ ನೀವು ಕೆಲಸ ಮಾಡಿಸಲು ಹೋದರೆ ಅಲ್ಲಿ ತ್ರೀ ಟೈಯರ್ ಸಿಸ್ಟಮ್ ಇದೆ. ಒಂದು ಬಸ್ಸಿನ
ವೇಗದಲ್ಲಿ ಮಾಡಿಸುವುದು. ಇನ್ನೊಂದು ರೈಲಿನ ವೇಗದಲ್ಲಿ ಮಾಡಿಸುವುದು. ಮತ್ತೊಂದು ವಿಮಾನದ ವೇಗದಲ್ಲಿ ಮಾಡಿಸುವುದು. ಬಸ್ಸಿನ ವೇಗ ಎಂದರೆ ನ್ಯಾಯದ ಮಾರ್ಗ. ಅದು ಎಷ್ಟು ದಿನದಲ್ಲಿ ಕೆಲಸ ಆಗುತ್ತದೆ ಎಂದು ಹೇಳುವುದು ಕಷ್ಟ. ರೈಲಿನ ವೇಗ ಎಂದರೆ ಬಸ್ಸಿಗಿಂತ ಉತ್ತಮ, ಆರಾಮದಾಯಕ ಮತ್ತು ಎಸಿ ಆದರೆ ಖರ್ಚು ಸ್ವಲ್ಪ ಜಾಸ್ತಿ. ವಿಮಾನದ ವೇಗ ಎಂದರೆ ನಿಮಗೆ ಇಂತಿಷ್ಟೇ ಸಮಯದ ಒಳಗೆ ವೇಗವಾಗಿ ಆಗಬೇಕು, ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ಎನ್ನುವ ದಾರಿ. ಉದಾಹರಣೆಗೆ ಪಾಲಿಕೆಯ ನಗರ ಯೋಜನಾ ವಿಭಾಗಕ್ಕೆ ನೀವು ಹೋಗುತ್ತೀರಿ. ನೀವು ಬಸ್ಸಿನ ವೇಗದಲ್ಲಿ ಹೋಗಲು ತೀರ್ಮಾನಿಸಿದ್ದೀರಿ ಎಂದರೆ ನಿಮಗೆ ಒಂದು ಕಟ್ಟಡ ಕಟ್ಟಬೇಕಾದರೆ ಕಟ್ಟಡ ನಿರ್ಮಾಣ ಪರವಾನಿಗೆ ಸಿಗಲು ಕನಿಷ್ಟ 2-3 ತಿಂಗಳಾದರೂ ಬೇಕಾಗುತ್ತದೆ. ಅದೇ ನಿಮ್ಮ ಮರುದಿನ ಅರ್ಜಿ ಹಾಕಿದ ಬಿಲ್ಡರ್ ಒಬ್ಬರಿಗೆ ತಮ್ಮ ವಸತಿ ಸಮುಚ್ಚಯ ಕಟ್ಟಲು 10-15 ದಿನಗಳ ಒಳಗೆ ಅದೇ ಲೈಸೆನ್ಸ್ ಸಿಗುತ್ತದೆ. ಹೇಗೆಂದರೆ ಆ ಬಿಲ್ಡರ್ ವಿಮಾನದ ವೇಗಕ್ಕೆ ಒಪ್ಪಿಕೊಂಡಿದ್ದಾರೆ.

ಎಲ್ಲವೂ ಹಾಗೆನೆ. ನೀವು ನೇರವಾಗಿ ಖಾತಾ ಮಾಡಿಸಲು ಹೋದರೆ ನಿಮಗೆ ಕನಿಷ್ಟ 21 ದಿನಗಳು ತಗಲುತ್ತವೆ. ಅದೇ ಬ್ರೋಕರ್ ಮೂಲಕ ಹೋದರೆ ಬೆಳಿಗ್ಗೆ ಹೋಗಿ ಸಂಜೆಯ ಒಳಗೆ ಆಗುತ್ತದೆ. ನೀವು ಹೋದರೆ ಚಲನ್ ಮಾತ್ರ ಕಟ್ಟಬೇಕು. ಉದಾಹರಣೆಗೆ ಹನುಮಂತನ ಹೆಸರಿನಿಂದ ರಾಮನ ಹೆಸರಿಗೆ ಆಸ್ತಿ ನೋಂದಾವಣೆ ಆಗಬೇಕು ಎಂದು ಇಟ್ಟುಕೊಳ್ಳೋಣ. ಒಂದು ವೇಳೆ ಆಸ್ತಿಯ ಮೌಲ್ಯ 37 ಲಕ್ಷ ರೂಪಾಯಿ ಆಗಿದ್ದಲ್ಲಿ ಅದಕ್ಕೆ 2% ನೊಂದಾವಣಿ ಶುಲ್ಕ ಕಟ್ಟಿದರೆ ನಿಮಗೆ 21 ದಿನಗಳಲ್ಲಿ ಕೆಲಸ ಆಗುತ್ತದೆ. ಅದೇ ನೀವು ಒಬ್ಬ ಬ್ರೋಕರ್ ಹಿಡಿದು ಅವರಿಗೆ 6-7 ಸಾವಿರ ರೂಪಾಯಿ ಕೊಟ್ಟರೆ ಕೆಲಸ ಎಷ್ಟು ಬೇಗ ಆಗುತ್ತೆ ಎಂದರೆ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಈ ಭ್ರಷ್ಟಾಚಾರದ ವ್ಯವಸ್ಥೆ ಕಾಂಗ್ರೆಸ್ ಸರಕಾರದಲ್ಲಿಯೂ ಇತ್ತು. ನಂತರ ಮೈತ್ರಿ ಸರಕಾರದಲ್ಲಿಯೂ ಮುಂದುವರೆದಿತ್ತು. ಬಿಜೆಪಿಯವರು ಇದನ್ನು ಹೊಡೆದು ಹಾಕಿ ಜನಸಾಮಾನ್ಯರಿಗೆ ಭ್ರಷ್ಟ ರಹಿತ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ನಂಬಲಾಗಿತ್ತು. ಆದರೆ ಅವರು ಬಂದು 9 ತಿಂಗಳು ಆದರೂ ಪರಿಸ್ಥಿತಿ ಹಾಗೇ ಇದೆ. ಇದಕ್ಕೇನು ಕಾರಣ?
ವಿಷಯ ಏನೆಂದರೆ ಹಸೆಮಣೆಯಲ್ಲಿ ಕುಳಿತ ಮದುಮಗ ಮಾತ್ರ ಬೇರೆಯಾಗಿದ್ದಾನೆ. ಆದರೆ ವಾಲಗ ಊದುವವರು, ಮಂತ್ರ ಹೇಳುವವರು, ಪೆಂಡಾಲ್ ಹಾಕುವವರು, ಅಡುಗೆಯವರು, ಫೋಟೋ, ವಿಡಿಯೋ ಹಿಂದಿನವರೇ ಆಗಿದ್ದಲ್ಲಿ ಮುಂಚೆ ಹೇಗಿತ್ತೋ ಅದೇ ಮುಂದುವರೆಯುತ್ತದೆ. ಇಚ್ಚಾಶಕ್ತಿ ಮತ್ತು ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಸಾಮರ್ತ್ಯ ಯಾರಿಗೆ ಇರಬೇಕೋ ಅವರು ಎಲ್ಲರನ್ನು ಖುಷಿ ಮಾತ್ರ ಮಾಡುತ್ತಾ ಓಡಾಡುತ್ತಿದ್ದರೆ ಅತ್ತ ಚಪ್ಪರ ಬಿದ್ದು ಹೋದದ್ದು ಗೊತ್ತೆ ಆಗಲಿಕ್ಕಿಲ್ಲ!

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Hanumantha Kamath April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Hanumantha Kamath April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search