ಇ-ಖಾತಾ ಮಾಡಿಸಲು ಮಂಗಳೂರಿನಲ್ಲಿ 50% ಪ್ರಾಪರ್ಟಿ ಐಡಿಗೆ ಆಗಿಲ್ಲ!!
Posted On June 19, 2020
ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾತಾ ಪಡೆದುಕೊಳ್ಳಲು ಜಮೀನು ನೊಂದಾವಣೆ ಪತ್ರ, ಜಮೀನಿನಲ್ಲಿ ಕಟ್ಟಡ ಇದೆ ಎಂದಾದರೆ ಕಟ್ಟಡ ತೆರಿಗೆ ಶುಲ್ಕ ಪಾವತಿಸಿದ ರಸೀದಿ ಕೊಟ್ಟರೆ ನನ್ನ ಹೆಸರಿನಲ್ಲಿ ಇದ್ದ ಮನೆ ಅಥವಾ ಜಾಗವನ್ನು ಇನ್ನೊಬ್ಬನ ಹೆಸರಿನಲ್ಲಿ ನಾನು ಮಾಡಬಹುದಿತ್ತು. ಆದರೆ ಈಗ ಹಾಗೆ ಮಾಡಲಾಗುವುದಿಲ್ಲ. ಪ್ರಸ್ತುತ ಇ-ಖಾತಾ ಚಾಲ್ತಿಯಲ್ಲಿದೆ. ನಾನು ಆಧುನೀಕರಣಕ್ಕೆ ವಿರೋಧಿಯಲ್ಲ. ಡಿಜಿಟಲ್ ವ್ಯವಸ್ಥೆ ಆಗಬೇಕು. ಆದರೆ ಪಾಲಿಕೆಯ ಕಂದಾಯ ವಿಭಾಗದಲ್ಲಿ ಸೂಕ್ತ ವ್ಯವಸ್ಥೆ ಆಗದೇ ಇದ್ದರೆ ಈ ಹೊಸ ಯೋಜನೆ ಜನರಿಗೆ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಎಷ್ಟರಮಟ್ಟಿಗೆ ತಲೆನೋವು ಎಂದು ಈಗ ವಿವರಿಸುತ್ತೇನೆ.
ಮೊದಲನೇಯದಾಗಿ ಪಾಲಿಕೆಯ ಕಂದಾಯ ವಿಭಾಗದಲ್ಲಿ ಅಗತ್ಯಕ್ಕೆ ಬೇಕಾದಷ್ಟು ಸ್ಟಾಫ್ ಇಲ್ಲ. ಇ-ಖಾತಾ ಆಗಬೇಕಾದರೆ ಇದಕ್ಕೆ ಬೇಕಾದ ದಾಖಲೆಗಳು ಸ್ಕ್ಯಾನ್ ಆಗಬೇಕು. ಸ್ಕ್ಯಾನ್ ಮಾಡಲು ಅಲ್ಲಿ ಒಬ್ಬರೇ ಇರುವುದು. ದಿನಕ್ಕೆ ಐವತ್ತು ಜನರು ಇ-ಖಾತಾ ಮಾಡಿಸಲು ಬಂದರೆ ಅಲ್ಲಿ ಒಬ್ಬನಿಂದ ಸಾಧ್ಯವಿಲ್ಲ. ಹಳೇ ದಾಖಲೆಗಳನ್ನು ಇ-ಖಾತಾ ಮಾಡಿಸುವಾಗ ಅದರಲ್ಲಿ ಪೇಪರ್ಸ್ ಜಾಸ್ತಿ ಇರುತ್ತದೆ. ಎಲ್ಲರದ್ದೂ ಇ-ಖಾತಾ ಆದ್ದಲ್ಲಿ ಆಗ ಭವಿಷ್ಯದಲ್ಲಿ ಕಂದಾಯ ವಿಭಾಗ ಪೇಪರ್ ಲೆಸ್ ಆಗಬಹುದು. ಆದರೆ ಅದಕ್ಕಿಂತ ಮೊದಲು ಪ್ರತಿಯೊಂದು ಖಾತಾ ಡಿಜಿಟಲ್ ಆಗಬೇಕಾದರೆ ಏನೇನೂ ಆಗಬೇಕು, ಹೇಳುತ್ತೇನೆ. ಕೇಳಿ. ಸ್ಕ್ಯಾನ್ ಮಾಡಿದ ನಂತರ ಅದು ಕೇಸ್ ವರ್ಕರ್ ಅವರ ಬಳಿ ಬರುತ್ತದೆ. ಕೇಸ್ ವರ್ಕರ್ ನಿಂದ ಅದು ಸೂಪರಿಟೆಂಡೆಂಟ್ ಅವರ ಕೈಗೆ ಹೋಗುತ್ತದೆ. ಸೂಪರ್ ಟೆಂಡೆಂಟ್ ನವರಿಂದ ಅದು ಎಆರ್ ಒ ಅವರಿಗೆ ಹೋಗುತ್ತದೆ. ಎಆರ್ ಒ ಅವರಿಂದ ಆರ್ ಒ ಅವರಿಗೆ ಕೊನೆಯದಾಗಿ ಬಂದು ತಲುಪುತ್ತದೆ. ಈಗ ಹೊಸದಾಗಿ ಇ-ಖಾತಾ ಮಾಡಿಸುವುದು ಒಕೆ. ಆದರೆ ಈಗಾಗಲೇ ಮನಪಾದ ಲಾಲ್ ಭಾಗ್, ಕದ್ರಿ, ಸುರತ್ಕಲ್ ಕಚೇರಿಗಳಲ್ಲಿ ಈಗಾಗಲೇ 500 ಕ್ಕೂ ಮಿಕ್ಕಿ ಖಾತಾ ಮಾಡಿಸಲು ದಾಖಲೆಗಳು ಕಾಯುತ್ತಾ ಕುಳಿತಿವೆ. ಹಾಗಾದರೆ ಅವುಗಳನೇ ಇ-ಖಾತಾ ಮಾಡಿಸಬಹುದಲ್ಲ. ಇಲ್ಲ, ಇ-ಖಾತಾ ಮಾಡಿಸುವ ಪ್ರಕ್ರಿಯೆನೆ ಬೇರೆ ಇದೆ. ಇ-ಖಾತಾದಲ್ಲಿ ಮಾಡಿಸುವಾಗ ಜಾಗ ಅಥವಾ ಮನೆಯ ಫೋಟೋ ನೀಡಬೇಕು. ನೀವು ನಿಮ್ಮ ಜಾಗ ಅಥವಾ ಮನೆಯ ಬಳಿ ನಿಂತು ಸ್ವತ್ತು ಕಾಣಿಸುವಂತೆ ಫೋಟೋ ಮತ್ತು ನಿಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ ಕೂಡ ನೀಡಬೇಕು. ಆದರೆ ಈಗಾಗಲೇ ಖಾತಾ ಮಾಡಿಸಲು ಕೊಟ್ಟವರು ಈ ಫೋಟೋಗಳ ವಹಿವಾಟಿಗೆ ಹೋಗಿಯೇ ಇಲ್ಲ. ಏಕೆಂದರೆ ಅಗತ್ಯವಿರಲಿಲ್ಲ.
ಇನ್ನು ಇ-ಖಾತಾ ಡಿಜಿಟಲ್ ಫಾರಂ ತುಂಬುವಾಗ ಪ್ರಾಪರ್ಟಿ ಐಡಿ ಕಾಲಂ ಫೀಲ್ ಮಾಡಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗೆ ನಂಬರ್ ಕೊಟ್ಟಿದ್ದಾರೆ. 10 ಮನೆಗೆ 10 ನಂಬರ್ ಇರುತ್ತದೆ. ಆದರೆ ಮಂಗಳೂರಿನಲ್ಲಿ 50% ಪ್ರಾಪರ್ಟಿ ಐಡಿ ಆಗಿಲ್ಲ. ಆ ಕಾಲಂ ತುಂಬದಿದ್ದರೆ ಫಾರಂ ಮುಂದೆ ಹೋಗುವುದಿಲ್ಲ. ಸದ್ಯ ಯಾವುದೋ ಒಂದು ನಂಬರ್ ಹಾಕಿ ಫಾರಂ ತುಂಬಿಸಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆಗ ಮುಂದೆ ಆ ಜಾಗ ಸರ್ವೆಗೆ ಒಳಪಟ್ಟು ಹೊಸ ನಂಬ್ರ ನೀಡಿದಾಗ ಹಿಂದೆ ಸಿಕ್ಕಿದ ನಂಬ್ರ ಮ್ಯಾಚ್ ಆಗುವುದಿಲ್ಲ. ಆಗ ಮಾಲೀಕರು ಮತ್ತೆ ಸಮಸ್ಯೆಗೆ ಬೀಳುತ್ತಾರೆ. ಈಗ ಅರ್ಜೆಂಟಲ್ಲಿ ಯಾವುದೋ ನಂಬ್ರ ಕೊಟ್ಟು ಮುಗಿಸಿದರೆ ನಂತರ ನಿಜವಾಗಿಯೂ ಸರ್ವೆ ಆಗಿ ನಂಬ್ರ ಬಂದಾಗ ಆಗುವ ಎಡವಟ್ಟು ಊಹಿಸಿ. ಇದೆಲ್ಲಾ ಒಂದು ಸಮಸ್ಯೆಯಾದರೆ ಇ-ವ್ಯಾಪಾರ್ ಮತ್ತು ಇ-ನಿರ್ಮಾಣ್ ಎನ್ನುವ ಎರಡು ಸಾಫ್ಟ್ ವೇರ್ ಅನುಷ್ಠಾನಕ್ಕೆ ಬಂದಿದೆ. ಇ-ವ್ಯಾಪಾರ್ ನಲ್ಲಿ ಟ್ರೇಡ್ ಲೈಸೆನ್ಸ್ ಗೆ ಸಂಬಂಧಪಟ್ಟ ಕೆಲಸಗಳಾದರೆ, ಇ-ನಿರ್ಮಾಣದಲ್ಲಿ ಕಟ್ಟಡ ಕಟ್ಟಲು ಬೇಕಾಗುವ ಲೈಸೆನ್ಸ್ ಬಗ್ಗೆ ಪ್ರಕ್ರಿಯೆ ನಡೆಸಬಹುದು. ಆದರೆ ಅದು ನಮ್ಮ ಪಾಲಿಕೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿಲ್ಲ. ಆದರೆ ಸುಳ್ಯ, ಪುತ್ತೂರಿನಲ್ಲಿ ಇ-ನಿರ್ಮಾಣ್ ಮತ್ತು ಇ-ವ್ಯಾಪಾರ್ ಮೂಲಕವೇ ಕೆಲಸ ನಡೆಯುತ್ತಿದೆ. ಯಾವುದು ಕಟ್ಟುನಿಟ್ಟಾಗಿ ನಡೆಯಬೇಕೋ ಅದು ನಮ್ಮ ಪಾಲಿಕೆಯಲ್ಲಿ ನಡೆಯುವುದಿಲ್ಲ. ಏಕೆಂದರೆ ಕಟ್ಟಡ ಕಟ್ಟುವ ಬಿಲ್ಡರ್ ಗಳ ಪರವಾಗಿ ಇರಬೇಕಾಗಿರುವುದರಿಂದ ಇಲ್ಲಿಯ ತನಕ ಪಾಲಿಕೆಯಲ್ಲಿ ಬಿಲ್ಡರ್ ಗಳಿಗೆ ಕಿರಿಕಿರಿಯಾಗುವಂತಹ ಯಾವುದೇ ಯೋಜನೆಗಳು ಬರುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹಾಗೆ ಆಗಲಾರದು. ಬಿಲ್ಡರ್ ಗಳು ಕೂಡ ಕಾನೂನಿನ ಪ್ರಕ್ರಿಯೆ ಒಳಗೆ ಬರಲೇಬೇಕು. ಸೂಕ್ತ ನಿಯಮಗಳನ್ನು ಪಾಲಿಸುವಂತಾಗಲೇಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ಸಭೆ ನಡೆಸಿ ಸೂಕ್ತ ಎಚ್ಚರಿಕೆ ನೀಡಿದ್ದಾರೆ!

- Advertisement -
Leave A Reply