• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

“ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಹೆಸರೇ ಹೇಳಲು ಎಷ್ಟು ಖುಷಿಯಾಗುತ್ತದೆ.

Hanumantha Kamath Posted On September 23, 2020


  • Share On Facebook
  • Tweet It

ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಮಂಗಳೂರಿನ ಹೃದಯಭಾಗದಲ್ಲಿರುವ ರಸ್ತೆಗೆ ಇಡುವ ಮೂಲಕ ಕರಾವಳಿಯ ಜನರ ಬಹುಕಾಲದ ಆಶಯ ಈಡೇರಿದಂತಾಗಿದೆ. ಸುಂದರರಾಮ ಶೆಟ್ಟಿಯವರು ಜಾತಿಯಲ್ಲಿ ಬಂಟರಾಗಿದ್ದರೂ ಅವರು ನಮ್ಮ ಅವಿಭಜಿತ ಜಿಲ್ಲೆಯ ಅಸಂಖ್ಯಾತ ಕುಟುಂಬಗಳಿಗೆ ಉದ್ಯೋಗ ನೀಡಿ ಬೆಳಕಾದವರು. ಅವರು ತಮ್ಮ ವಿಜಯಾ ಬ್ಯಾಂಕಿನಲ್ಲಿ ಯಾವ ಜಾತಿ ಎಂದು ನೋಡದೇ ಉದ್ಯೋಗ ಕೊಟ್ಟ ಕಾರಣ ಅವರನ್ನು ಇವತ್ತಿಗೂ ಲೆಕ್ಕವಿಲ್ಲದಷ್ಟು ಕುಟುಂಬಗಳು ನಿತ್ಯ ಸ್ಮರಿಸುತ್ತಿವೆ. ಅವರ ಹೆಸರನ್ನು ರಸ್ತೆಗೆ ಇಡುವ ಮೂಲಕ ಅವರು ಗ್ರೇಟ್ ಆಗುವುದಿಲ್ಲ. ಅವರು ಈಗಾಗಲೇ ಗ್ರೇಟ್ ಆಗಿಯೇ ಇದ್ದಾರೆ. ಆದರೆ ಜೀವನದುದ್ದಕ್ಕೂ ಮಾದರಿಯಾಗಿ ಬದುಕಿದ ಮಹಾನ್ ವ್ಯಕ್ತಿಯೊಬ್ಬರ ಹೆಸರನ್ನು ಮುಂದಿನ ಪೀಳಿಗೆಗೆ ನಾವು ಜನಸಾಮಾನ್ಯರು ಒಯ್ದಂತೆ ಆಗುತ್ತದೆ. ಆ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿಯಮಾನುಸಾರ ಏನು ಮಾಡಬೇಕೋ ಅದನ್ನು ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಸುಂದರರಾಮ ಶೆಟ್ಟಿಯವರ ಕೊಡುಗೆಯನ್ನು ಮರೆತಿದ್ದವರು ಒಂದು ಸಮುದಾಯದ ಪರವಾಗಿ ನಿಂತ ಕಾರಣ ಅಡೆತಡೆ ಉಂಟಾಗಿತ್ತು. ಈಗ ಮತ್ತೆ ಎಲ್ಲವೂ ಸರಿಯಾಗಿದೆ.

ಬುಧವಾರ ಮೇಯರ್ ದಿವಾಕರ ಪಾಂಡೇಶ್ವರ್ ಅವರು ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಬಿಜೆಪಿ ಸರಕಾರ ನುಡಿದಂತೆ ನಡೆಯುತ್ತದೆ ಎನ್ನುವುದನ್ನು ಸಾಬೀತುಪಡಿಸಿದರು. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಮುಖಂಡರಾಗಿರುವ ಅಜಿತ್ ಕುಮಾರ್ ರೈ ಮಾಲಾಡಿ ಹಾಗೂ ಸದಾನಂದ ಶೆಟ್ಟಿಯವರ ಸಹಿತ ಅನೇಕ ಗಣ್ಯರು, ಈ ಹೋರಾಟವನ್ನು ತಾರ್ಕಿತ ಅಂತ್ಯದ ತನಕ ತೆಗೆದುಕೊಂಡು ಹೋದ ಎಲ್ಲರೂ ಇದ್ದರು. ನಾನು ಕೂಡ ಹೋಗಿದ್ದೆ. ಇನ್ನು ಅದು ಮುಗಿದ ಅಧ್ಯಾಯ ಎಂದುಕೊಂಡಿದ್ದೇನೆ, ಹೊಸದಾಗಿ ಯಾರಿಂದಾದರೂ ಅಪಸ್ವರ ಏಳುವ ತನಕ.

ಇನ್ನು ಲೇಡಿಹಿಲ್ ಸರ್ಕಲ್ ಕಡೆ ಬರೋಣ. ಲೇಡಿಹಿಲ್ ಎನ್ನುವ ಹೆಸರೇ ಇವತ್ತಿನ ದಿನಗಳಲ್ಲಿ ಅಪ್ರಸ್ತುತ. ಅವರ ಕೊಡುಗೆ ನಮ್ಮ ನಗರಕ್ಕೆ ಏನಿದೆ ಎನ್ನುವುದು ಯಾರಿಗೆ ಗೊತ್ತು. ಆದ್ದರಿಂದ ನಮ್ಮ ಮಣ್ಣಿನಲ್ಲಿ ಕಾಲಿಟ್ಟು ಈ ಭೂಮಿಯನ್ನು ಪಾವನಗೊಳಿಸಿದ ಮಹಾನ್ ಯೋಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಲೇಡಿಹಿಲ್ ವೃತ್ತಕ್ಕೆ ಇಡಲೇಬೇಕಿದೆ. ಅದಕ್ಕೆ ಕಾಲ ಸನ್ನಿಹಿತವಾಗಿದೆ. ಇದಕ್ಕೆ ನಮ್ಮ ಜಿಲ್ಲೆಯ ಪ್ರತಿಯೊಬ್ಬರು ಬೆಂಬಲ ನೀಡಬೇಕು. ಯಾಕೆಂದರೆ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಬಿಲ್ಲವ ಸಮುದಾಯಕ್ಕೆ ಮಾತ್ರ ಗುರುಗಳಲ್ಲ. ಅವರು ಇಡೀ ಮನುಕುಲಕ್ಕೆ ಮಾರ್ಗದರ್ಶಕರಾಗಿದ್ದರು. ಅವರು ನಮ್ಮ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ, ವಿದೇಶದ ತುಳುವರು ಹಾಗೂ ಎಲ್ಲಾ ಜಾತಿ, ಪಂಗಡದವರು ಕೂಡ ಭಕ್ತಿಯಿಂದ ಆರಾಧಿಸುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಸ್ಥಾಪಿಸಿದವರು. ಅವರು ಪ್ರತಿಷ್ಠಾಪಿಸಿದ ಗೋಕರ್ಣನಾಥ ದೇವರನ್ನು ಪೂಜಿಸಲು ಎಲ್ಲೆಲ್ಲಿಂದ್ದಲೋ ಭಕ್ತರು ಬರುತ್ತಾರೆ. ಪಾವನರಾಗುತ್ತಾರೆ. ಮಂಗಳೂರು ನಗರದಲ್ಲಿರುವ ಆ ದೇವಳದ ಸನಿಹದಲ್ಲಿರುವ ಬೃಹತ್ ವೃತ್ತವೇ ಲೇಡಿಹಿಲ್ ವೃತ್ತ. ಪ್ರತಿ ದಸರಾದಂದು ಅಂತಿಮ ಶೋಭಾಯಾತ್ರೆಯ ಮೊದಲು ಸಿಗುವ ವೃತ್ತ ಕೂಡ ಇದೇ. ಕುದ್ರೋಳಿಯಿಂದ ನೀವು ಕರಾವಳಿಯ ಬೇರೆ ಜಿಲ್ಲೆಗಳಿಗೆ ಹೋಗಬೇಕಾದರೂ ಅತ್ಯಂತ ಅಭಿವೃದ್ಧಿ ಕಂಡಿರುವ ರಸ್ತೆಯಾಗಿರುವ ರಸ್ತೆಯ ಮೊದಲಿಗೆ ಸಿಗುವುದು ಲೇಡಿಹಿಲ್ ವೃತ್ತ. ಹೀಗಿರುವಾಗ ಈ ವೃತ್ತಕ್ಕೆ ಯಾವತ್ತೋ ಬ್ರಹ್ಮಶ್ರೀಗಳ ಹೆಸರು ಇಡಬೇಕಿತ್ತು. ಅದಕ್ಕೆ ಹೆಸರಿಡಲು ಯಾರಾದರೂ ವಿರೋಧ ಮಾಡಿದರೆ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಗೊತ್ತಿಲ್ಲ ಎಂದೇ ಅರ್ಥ. ಅವರ ಬಗ್ಗೆ ಅನೇಕ ಗ್ರಂಥಗಳಿವೆ. ಅದನ್ನು ಒಂದು ಸಲ ಓದಿದರೂ ಯಾರೂ ಕೂಡ ವೃತ್ತದ ಹೆಸರು ಬದಲಾವಣೆಗೆ ಆಕ್ಷೇಪ ಎತ್ತಲಾರರು. ಇನ್ನು ಪಾಲಿಕೆಯಲ್ಲಿ ಈ ಬಗ್ಗೆ ಹೆಸರು ಬದಲಾವಣೆಯ ಪ್ರಕ್ರಿಯೆ ಶುರುವಾಗಿದೆ. ಆಕ್ಷೇಪ ಇದ್ದವರು ನ್ಯಾಯಮಾರ್ಗದಲ್ಲಿ ವಿರೋಧ ವ್ಯಕ್ತಪಡಿಸಲು ಅವಕಾಶ ನಿಯಮಗಳಲ್ಲಿ ಇದೆ. ಆದರೆ ವಿರೋಧ ಯಾರೂ ಮಾಡಲಾರದಷ್ಟು ಮಹಾನ್ ದಿವ್ಯ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳದ್ದು.
ಇನ್ನು ಹೆಸರು ಬದಲಾಯಿಸುವುದು ನಮ್ಮ ರಾಷ್ಟ್ರಕ್ಕೆ ಹೊಸತೇನಲ್ಲ. ಹಿಂದೆ ಮೈಸೂರು ಪ್ರಾಂತ್ಯ ಇದ್ದದ್ದು ನಂತರ ಕರ್ನಾಟಕ ಆಗಿತು. ಬೊಂಬೆ ಹೋಗಿ ಮುಂಬೈ ಆಯಿತು. ಕಲ್ಕತ್ತಾ ಹೋಗಿ ಕೋಲ್ಕತ್ತಾ ಆಯಿತು. ಮದ್ರಾಸ್ ಹೋಗಿ ಚೆನೈ ಆಯಿತು. ಅದೆಲ್ಲಾ ನೋಡಿದರೆ ಲೇಡಿಹಿಲ್ ಎನ್ನುವ ಯಾವುದೋ ಅಜ್ಞಾತ ಹೆಸರನ್ನು ತೆಗೆದು ಶತಮಾನದ ಕ್ರಾಂತಿಕಾರಿ ಯೋಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಟ್ಟರೆ ನಾವು ಧನ್ಯರು. ಆ ಮಹಾನ್ ಯೋಗಿಯ ಹೆಸರನ್ನು ಇಡಬಾರದು ಎಂದು ಯೋಚಿಸುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ.

  • Share On Facebook
  • Tweet It


- Advertisement -


Trending Now
ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
Hanumantha Kamath June 8, 2023
ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
Hanumantha Kamath June 8, 2023
Leave A Reply

  • Recent Posts

    • ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
  • Popular Posts

    • 1
      ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • 2
      ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • 3
      ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • 4
      ಹೆಣ್ಣು ಕಾಮದ ಸರಕಲ್ಲ!
    • 5
      ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search