ಯುವಾ ಬ್ರಿಗೇಡ್ ನಿಂದ ಸುಭಾಷ್ ಚಂದ್ರಬೋಸ್ ಜಯಂತಿ ಪ್ರಯುಕ್ತ “ಜೈ ಹಿಂದ್ ರನ್”
Posted On January 23, 2021
ಯುವಾ ಬ್ರಿಗೇಡ್ ದಕ್ಷಿಣ ಕನ್ನಡ ವತಿಯಿಂದ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ಜಯಂತಿ ಪ್ರಯುಕ್ತ “ಜೈ ಹಿಂದ್ ರನ್” ಎನ್ನುವ ವಿಶೇಷ ಕಾರ್ಯಕ್ರಮವನ್ನು ಓಟದ ಮೂಲಕ ಬಹಳ ವಿಶಿಷ್ಟವಾಗಿ ಆಚರಿಸಲಾಯಿತು.
ಮಂಗಳೂರಿನ ಉರ್ವ ಸ್ಟೋರ್ ನಿಂದ ಇಂದು ಬೆಳಿಗ್ಗೆ 7 ಗಂಟೆಗೆ ಕಾರ್ಯಕ್ರಮಕ್ಕೆ ಕೌನ್ ಬನೆಗಾ ಕರೋಡ್ ಪತಿಯಲ್ಲಿ ಭಾಗಿಯಾದ ಸಮಾಜ ಸೇವಕ ಶ್ರೀ ರವಿ ಕಟಪಾಡಿ ಅವರು ಚಾಲನೆ ನೀಡಿ, ಕರಾವಳಿ ಮೈದಾನದ ತನಕ ಓಡಿ ಮಹಾಸೇನಾನಿಗೆ ಈ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಅರುಣ್ ಜೀ ಶೇಟ್ ಮಾತನಾಡಿದರು, ಶ್ರೀ ಮನೀಶ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತಿಲಕ್ ಶಿಶಿಲ, ಪ್ರಕಾಶ್ ಪೈ, ವಿವೇಕ್ ಟ್ರೇಡರ್ಸ್ ನ ನರೇಶ್ ಶೆಣೈ, ಎಬಿವಿಪಿಯ ಬಸವೇಶ್, ಭಾಸ್ಕರ್, ಪವನ್ ಮತ್ತು ಹಲವು ಕಾರ್ಯಕರ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದರು.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply