• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಬಜರಂಗದಳದ ಯುವಕರ ಸೇವೆಗೆ ಭಗವಂತನ ಆರ್ಶೀವಾದ ಇದ್ದೇ ಇದೆ. ಆದರೂ!!

Hanumantha Kamath Posted On May 28, 2021
0


0
Shares
  • Share On Facebook
  • Tweet It

ಒಂದು ಕಡೆಯಲ್ಲಿ ನಿರಾಶ್ರಿತರಿಗೆ ಆಹಾರ, ಕಿಟ್ ಕೊಡಲು ಅನೇಕರು ಮುಂದೆ ಬಂದಿದ್ದಾರೆ. ಅದು ಸಮಾಧಾನದ ವಿಷಯ. ಅದನ್ನು ನಮ್ಮ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕೂಡ ಮಾಡುತ್ತಾ ಬರುತ್ತಿದೆ. ಅದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಲಾಕ್ ಡೌನ್ ಸಮಯದಲ್ಲಿ ಇದಕ್ಕಿಂತಲೂ ಹೆಚ್ಚಿನ ಸವಾಲುಗಳನ್ನು ಎದುರಿಸುವ ಇನ್ನೊಂದು ವರ್ಗ ಇದೆ. ಅವರ ಬಗ್ಗೆ ಕೂಡ ಗಮನ ಹರಿಸುವ ಅವಶ್ಯಕತೆಯನ್ನು ಕಂಡುಕೊಂಡಿದ್ದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರೂ, ಮಂಗಳೂರು ನಗರ ದಕ್ಷಿಣದ ಶಾಸಕರೂ ಆಗಿರುವ ವೇದವ್ಯಾಸ ಕಾಮತ್. ಕೊರೊನಾದಿಂದ ಮಂಗಳೂರಿನಲ್ಲಿ ಅನೇಕ ದುರ್ದೈವಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಹೀಗೆ ಯಾರಾದರೂ ಸತ್ತಾಗ ಅಲ್ಲಿ ಎರಡು ರೀತಿಯ ಸಮಸ್ಯೆ ಉದ್ಭವವಾಗುತ್ತದೆ. ಒಂದನೇಯದಾಗಿ ಕೊರೊನಾ ರೋಗಿ ಸತ್ತಾಗ ಮನೆಯವರು ಹೆದರಿಯೇ ಹತ್ತಿರಕ್ಕೆ ಬರದೇ ಇರಬಹುದು. ಇನ್ನೊಂದು ಸತ್ತವರ ಮನೆಯವರಲ್ಲಿ ಶವ ಸಂಸ್ಕಾರ ಮಾಡಬೇಕಾದವರು ಕೊರೊನಾ ಪಾಸಿಟಿವ್ ಆಗಿ ಬರಲು ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಆ ಮೃತ ವ್ಯಕ್ತಿಯ ದೇವರೆಡೆಗಿನ ಪ್ರಯಾಣವನ್ನು ವಿಧಿವತ್ತಾಗಿ ಮಾಡಬೇಕಲ್ಲ. ಸತ್ತಿದ್ದಾರೆ ಎಂದು ಹಾಗೆ ಬೇಕಾಬಿಟ್ಟಿ ಮಾಡಲು ಆಗುತ್ತಾ? ಹಾಗೆ ಯೋಚನೆ ಬಂದ ಬಳಿಕ ಕಾರ್ಪೋರೇಟರ್ ಗಣೇಶ್ ಕುಲಾಲ್ ಅವರ ಸಹಕಾರದಲ್ಲಿ ಒಂದಿಷ್ಟು ಮಾರ್ಗದರ್ಶನ ಪಡೆದುಕೊಂಡು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಹಾಗೂ ನಮ್ಮ ಟ್ರಸ್ಟಿನ ಕಾರ್ಯಕರ್ತರು ಆ ಸೇವೆಯನ್ನು ಮಾಡಲು ಮುಂದೆ ಬಂದ್ರು. ಶವವನ್ನು ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಬಂದು ಸತ್ತವರ ಜಾತಿಗೆ ಅನುಗುಣವಾಗಿ ಪುರೋಹಿತರ ಸಮ್ಮುಖದಲ್ಲಿ ವಿಧಿವತ್ತಾಗಿ ಧಾರ್ಮಿಕ ಕಾರ್ಯಗಳು ಮಾಡಿಕೊಂಡು ಅಂತ್ಯಕ್ರಿಯೆ ನಡೆಸಲಾಗುತ್ತಿತು. ಇಲ್ಲಿ ಅಂತ್ಯಕ್ರಿಯೆಯನ್ನು ನಡೆಸುವಾಗ ಎರಡು ವಿಧಗಳಿವೆ. ಒಂದು ಸ್ಮಶಾನದಲ್ಲಿ ಅದಕ್ಕಾಗಿ ಖಾಯಂ ಜನರಿರುತ್ತಾರೆ. ಹಿಂದಿನ ಬಾರಿ ಕೊರೊನಾದಿಂದ ಯಾರಾದರೂ ಸತ್ತಾಗ ಶವವನ್ನು ಸುಡಲು ಸ್ಮಶಾನದ ಸುತ್ತಮುತ್ತಲು ವಾಸಿಸುವ ವಾರ್ಡುಗಳ ಜನರು ವಿರೋಧ ವ್ಯಕ್ತಪಡಿಸುತ್ತಿದ್ದರು. ಆ ಮಟ್ಟಿಗೆ ಜಾಗೃತಿಯ ಕೊರತೆ ಇತ್ತು. ಈ ಬಾರಿ ಅಂತಹುದು ಇಲ್ಲ. ಹಾಗಂತ ನಾವು ಹೆಣ ಸುಡುವವರ ಅಮೂಲ್ಯ ಜೀವವನ್ನು ಕಡೆಗಣಿಸಲು ಆಗುತ್ತಾ? ಅವರಿಗೂ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ ಎಂದು ಕುಟುಂಬ ಇರಲ್ವಾ? ಅದನ್ನು ಮನಗಂಡು ನಮ್ಮ ಟ್ರಸ್ಟಿನ ವತಿಯಿಂದ ಹೆಣ ಸುಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಜನರಿಗೆ ಮತ್ತು ಕುಟುಂಬದವರಿಗೆ ಒಟ್ಟು 17+3 ಜನರಿಗೆ ಎರಡು ಲಕ್ಷ ಮೊತ್ತದ ಜೀವವಿಮೆಯನ್ನು ಮಾಡಲಾಗಿದೆ. ಆದರೆ ಅವರಿಗೆ ಮಾತ್ರ ಮಾಡಿದರೆ ಸಾಕಾಗಲ್ಲ. ಯಾಕೆಂದರೆ ಇನ್ನೊಂದು ವರ್ಗವಿದೆ. ಅದು ಪ್ರತಿಫಲಾಫೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಕಾರ್ಯಕರ್ತರದ್ದು. ಬಹುಶ: ಆರೋಗ್ಯವಾಗಿರುವ, ತಿಂದುಡು ಮನೆಯಲ್ಲಿ ನೆಮ್ಮದಿಯಿಂದ ಇರುವ ಜನರಿಗೆ ನಾನು ಈಗ ಹೇಳುವುದು ಅರ್ಥವಾಗಲಿಕ್ಕಿಲ್ಲ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತ್ತು ಹೋದವರ ಮನೆಯವರನ್ನು ಕೇಳಿ ನೋಡಿ. ಅವರಿಗೆ ಆವತ್ತು ಭೂಮಿಯೇ ಬಾಯಿ ತೆರೆದುಕೊಂಡಂತೆ ಆಗಿರುತ್ತದೆ. ಏನು ಮಾಡಬೇಕೆಂದು ಗೊತ್ತಿರುವುದಿಲ್ಲ. ಎದುರಿಗೆ ಕಗ್ಗತ್ತಲು ಮಾತ್ರ ಇರುತ್ತದೆ. ಅಂತಹ ಸಂದರ್ಭದಲ್ಲಿ ಆಪತ್ಬಾಂಧವರಂತೆ ಮುಂದೆ ಬಂದಿರುವುದೇ ನಮ್ಮ ಬಜರಂಗದಳದ ಯುವಕರು. ಅವರು ತಾವೇ ಶವವನ್ನು ಅಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿ, ಸ್ಮಶಾನಕ್ಕೆ ಪುರೋಹಿತರನ್ನು ಕರೆಸಿ, ಸಾಮಾನ್ಯ ದಿನಗಳಲ್ಲಿ ಅಂತಿಮ ವಿಧಿವಿಧಾನ ಹೇಗೆ ಮಾಡಬಹುದೋ ಹಾಗೆ ಮಾಡಿ ಗೌರವಯುತವಾಗಿ ಆತ್ಮದ ಪ್ರಯಾಣ ಭಗವಂತನತ್ತ ಕಳುಹಿಸಿಕೊಡುವ ಮಾದರಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವವೂ ಅಮೂಲ್ಯವಲ್ಲವೇ. ಆದ್ದರಿಂದ ಹೀಗೆ ನಿತ್ಯ ಶವದ ಅಂತ್ಯಸಂಸ್ಕಾರ ಮಾಡುವಲ್ಲಿ ಶ್ರಮ ಮತ್ತು ಸೇವೆ ಎರಡನ್ನು ಮಾಡುತ್ತಿರುವ 25 ಯುವಕರಿಗೂ ಕರೋನಾ ಕವಚ್ ಎನ್ನುವ ಜೀವವಿಮೆಯನ್ನು ನಮ್ಮ ಟ್ರಸ್ಟಿನ ವತಿಯಿಂದ ಮಾಡಲಾಗಿದೆ. ಪ್ರತಿಯೊಬ್ಬರಿಗೆ ಪ್ರತ್ಯೇಕವಾಗಿ 5 ಲಕ್ಷದ ಜೀವವಿಮೆಯನ್ನು ಮಾಡಲಾಗಿದೆ. ಹೆಣದ ಅಂತ್ಯಸಂಸ್ಕಾರ ಮಾಡುವವರಿಗೆ ಏನೋ ಆಗುತ್ತದೆ ಎಂದು ನಾವು ಅಪಾರ್ಥ ಮಾಡಿಕೊಳ್ಳಬಾರದು. ಆದರೆ ನಮ್ಮ ಸುರಕ್ಷೆಯಲ್ಲಿ ನಾವು ಇರಬೇಕಾಗಿದೆ. ಅದರೊಂದಿಗೆ ಎಲ್ಲರಿಗೂ ಪಿಪಿಈ ಕಿಟ್, ಗ್ಲೌಸ್, ಮಾಸ್ಕ್, ಸ್ಯಾನಿಟೈಝರ್ ಹಾಗೂ ಇತರ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಅದರೊಂದಿಗೆ ನಿಮ್ಮ ಜೊತೆ ನಾವು ಯಾವಾಗಲೂ ಇದ್ದೇ ಇರುತ್ತೇವೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರು, ಟ್ರಸ್ಟಿಗಳು ಯಾವ ಸಮಯದಲ್ಲಿಯೂ, ಯಾವ ಸಹಕಾರವನ್ನು ಕೂಡ ಕೊಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದೇವೆ. ಇದು ನಾವು ಮಾಡಲೇಬೇಕಾದ ಕಾರ್ಯವೂ ಆಗಿತ್ತು. ಯಾಕೆಂದರೆ ಬಜರಂಗದಳದ ಯುವಕರು ಇಂತಹ ಜೀವವಿಮೆ ಇದೆ ಎನ್ನುವ ಕಾರಣಕ್ಕೆ ಸೇವೆ ಸಲ್ಲಿಸುತ್ತಾರೆ ಎಂದಲ್ಲ. ಅವರು ಸೇವೆಗೆ ನಿಂತರೆ ಯಾವುದನ್ನು ಲೆಕ್ಕಿಸುವುದಿಲ್ಲ. ಅವರಿಗೆ ದೇವರ ಆರ್ಶೀವಾದ ಇದ್ದೇ ಇದೆ. ಅದರೊಂದಿಗೆ ಸಮಾಜದ ಶುಭ ಚಿಂತಕರ, ಹಿತೈಷಿಗಳ ಹಾರೈಕೆನೂ ಇರುತ್ತೆ. ಆದರೆ ಒಂದು ಟ್ರಸ್ಟ್ ಆಗಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹಾರೈಕೆಯೊಂದಿಗೆ ಭರವಸೆ ನೀಡುವ ಪ್ರಯತ್ನ ನಮ್ಮದು. ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Hanumantha Kamath October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • 3
      ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • 4
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • 5
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!

  • Privacy Policy
  • Contact
© Tulunadu Infomedia.

Press enter/return to begin your search