• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ವಕ್ಫ್ ಭೂಮಿಗೆ ಕೈ ಹಾಕಲು ಗಂಡಸುತನ ಇಲ್ಲದವರು ಹಿಂದೂ ದೇವಾಲಯ ಕೆಡವುತ್ತಿದ್ದಾರೆ!!

Hanumantha Kamath Posted On September 15, 2021
0


0
Shares
  • Share On Facebook
  • Tweet It

ಕರ್ನಾಟಕದಲ್ಲಿ ಕಟ್ಟಲ್ಪಟ್ಟಿರುವ ಪುರಾತನ ದೇವಾಲಯಗಳನ್ನು ಕೆಡವಿ ಎಂಬ ಆದೇಶವನ್ನು ಹೊರಡಿಸಿದ್ದು ಯಾರು ಎಂದು ಹಿಂದೆ ನಾವು ಚಿಕ್ಕದಿರುವಾಗ ಪ್ರಶ್ನೆಪತ್ರಿಕೆಯಲ್ಲಿ ಕೇಳಿದಿದ್ದರೆ ಟಿಪ್ಪು ಸುಲ್ತಾನ್ ಅಥವಾ ಮೊಹಮ್ಮದ್ ಘಜ್ನಿ ಅಥವಾ ಇನ್ಯಾವುದೋ ಅರಸನ ಹೆಸರನ್ನು ನೀವು ಬರೆದಿರಬಹುದು. ಈಗ ಪಠ್ಯ ನವೀಕರಣ ಸಮಿತಿಯವರು ಆ ಹಳೆ ರಾಜರುಗಳ ಜೊತೆಯಲ್ಲಿ ಇನ್ನೊಂದು ಹೆಸರನ್ನು ಸೇರಿಸಬೇಕು. ಅದೇನೆಂದರೆ ಕರ್ನಾಟಕದ ದೇವಾಲಯಗಳನ್ನು ಕೆಡವಲು ಆದೇಶ ಕೊಟ್ಟಿದ್ದು 2021 ರಲ್ಲಿ ಇದ್ದ ಭಾರತೀಯ ಜನತಾ ಪಾರ್ಟಿಯ ಸರಕಾರ ಎಂದು ಮುಂದಿನ ಪೀಳಿಗೆ ಬರೆಯಬೇಕಾಗಬಹುದು. ಎರಡು ದಿನಗಳ ಹಿಂದಿನ ತನಕ ಈ ದೇವಸ್ಥಾನಗಳನ್ನು ಕೆಡವುತ್ತಿರುವುದು ಯಾರೆಂದು ನಮಗೆ ಗೊತ್ತೆ ಇಲ್ಲಪ್ಪ ಎಂದು ಬಿಜೆಪಿಯ ಮುಖಂಡರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ಪ್ರತಾಪು ಅಲ್ಲಿ ಪ್ರತಿಭಟನೆ, ಸುದ್ದಿಗೋಷ್ಟಿ ಮಾಡುತ್ತಾ ಗಾಳಿಯಲ್ಲಿ ಆಯುಧ ಬೀಸುವ ವ್ಯರ್ಥ ಶ್ರಮ ಮಾಡುತ್ತಿದ್ದರು. ಸದ್ಯ ಈಗ ಕರ್ನಾಟಕದ ಘಜ್ನಿ ಯಾರೆಂದು ಗೊತ್ತಾಗಿದೆ. ಅದು ರಾಜ್ಯ ಮುಖ್ಯ ಕಾರ್ಯದರ್ಶಿ. ಸರಕಾರದ ಯಾವುದೇ ಮುಖ್ಯ ಕಾರ್ಯದರ್ಶಿಗಳು ಹೀಗೆ ಒಂದು ಕ್ರಮ ತೆಗೆದುಕೊಳ್ಳುವಾಗ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಮಾಡುತ್ತಾರೆ ಎನ್ನುವುದನ್ನು ಯಾರಾದರೂ ನಂಬುತ್ತಾರೆ ಎಂದರೆ ಅವರಿಗೆ ರಾಜಕೀಯದ ಅ, ಆ, ಇ, ಈ ಗೊತ್ತಿಲ್ಲ ಎಂದೇ ಅರ್ಥ. ಒಂದು ವೇಳೆ ಸ್ವತ: ಮುಖ್ಯಮಂತ್ರಿಗಳೇ “ಪಾಪಾರಿ, ಮುಖ್ಯ ಕಾರ್ಯದರ್ಶಿಗಳು ಗೊತ್ತಿಲ್ಲದೇ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟುಬಿಟ್ಟಿದ್ದರು” ಎಂದು ಹೇಳಿದರೂ ಅದನ್ನು ಅವರ ಹತ್ತಿರ ನಿಂತವರೇ ನಂಬದೇ ಕಿಸಕ್ಕನೇ ನಕ್ಕುಬಿಡಬಹುದು. ಆದ್ದರಿಂದ ಇಂತಹ ಹೇಳಿಕೆಗಳನ್ನು ಹೇಳಿ ಆಸ್ತಿಕಬಂಧುಗಳ ತಾಳ್ಮೆಯನ್ನು ಬಿಜೆಪಿ ಸರಕಾರ ಪರೀಕ್ಷಿಸಲು ಹೊರಟಿರುವುದೇ ಒಂದು ಪರಮ ಅಸಹ್ಯ. ಒಂದು ವೇಳೆ ಇದನ್ನು ಕಾಂಗ್ರೆಸ್ ಮಾಡಿದಿದ್ದರೆ ಇಷ್ಟೊತ್ತಿಗಾಗಲೇ ಕರ್ನಾಟಕ ಬಂದ್ ಗೆ ಬಿಜೆಪಿಯ ಸೋದರ ಸಂಘಟನೆಗಳು ಬಂದ್ ಗೆ ಕರೆಕೊಟ್ಟಾಗುತ್ತಿತ್ತು. ಸಿದ್ಧರಾಮಯ್ಯನವರ ಮೀನು ತಿನ್ನುವ ವಿಷಯವನ್ನೇ ಹಿಡಿದು ಅನೇಕ ಕಡೆ ಕಾಂಗ್ರೆಸ್ಸಿಗೆ ಪ್ರಬಲ ಟಕ್ಕರ್ ಕೊಟ್ಟ ಬಿಜೆಪಿಗೆ ದೇವಾಲಯ ಕೆಡವಲು ಕಾಂಗ್ರೆಸ್ ಹೊರಟಿದ್ದರೆ ಅದು ಹಬ್ಬವಾಗುತ್ತಿತ್ತು. ಒಂದೊಂದು ದೇವಸ್ಥಾನ ಬೀಳುತ್ತಿದ್ದಂತೆ ಒಂದೊಂದು ಸೀಟು ಜಾಸ್ತಿಯಾದಂತೆ ಬಿಜೆಪಿಗೆ ಕನಸು ಬೀಳುತ್ತಿತ್ತು. ಆದರೆ ಈಗ ಕೆಡವುತ್ತಿರುವುದೇ ಬಿಜೆಪಿ ಸರಕಾರ.
ಅದು ಬಿಡಿ, ವಕ್ಫ್ ಬೋರ್ಡಿನ ನಾಲ್ಕು ಲಕ್ಷ ಕೋಟಿ ಮೌಲ್ಯದ ಭೂಮಿಯನ್ನು ಅವರದೇ ಧರ್ಮದ ಮುಖಂಡರು ನುಂಗಿ ನೀರು ಕುಡಿದ ವರದಿಯನ್ನು ಇದೇ ಬಿಜೆಪಿ ಪಕ್ಷದ ಅನ್ವರ್ ಮಾಣಿಪ್ಪಾಡಿ ತಯಾರಿಸಿ ಕೊಟ್ಟಾಗ ಅದನ್ನು ಹಿಡಿದೇ ಪ್ರತಿಭಟನೆ ಮಾಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ಮಾಡಿ ಸಂಬಂಧಪಟ್ಟವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕೋಟ್ಯಾಂತರ ರೂಪಾಯಿ ಆಮಿಷವನ್ನು ಇದೇ ಅನ್ವರ್ ಮಾಣಿಪ್ಪಾಡಿಯವರಿಗೆ ಒಡ್ಡಿದ್ದು ಇದೇ ರಾಜ್ಯದ ಬಿಜೆಪಿ ಬಾಸ್ ಎನಿಸಿಕೊಂಡವರು ಎಂದು ಸ್ಪಷ್ಟವಾಗಿ ಹೆಸರು ಹೇಳಿಯೇ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ. ಅತ್ತ ಅಲ್ಪಸಂಖ್ಯಾತರ ಭೂಮಿಯನ್ನು ಅತಿಕ್ರಮಣಕಾರರಿಂದ ವಶಪಡಿಸಿಕೊಳ್ಳಬೇಕಾದ ಬಿಜೆಪಿ ಸರಕಾರ ಈಗ ಹಿಂದೂ ದೇವಾಲಯಗಳನ್ನು ಕೆಡವಿ ಅಲ್ಲಿ ಏನು ಮಾಡಲು ಹೊರಟಿದೆ ಎನ್ನುವುದನ್ನು ಅವರೇ ಹೇಳಬೇಕು. ಈ ದೇವಸ್ಥಾನಗಳನ್ನು ಕೆಡವುಹುದು ನಮ್ಮಲ್ಲಿ ಯಾವಾಗ ಬೇಕಾದರೂ ಆಗಬಹುದು ಎನ್ನುವುದು ಮಂಗಳೂರಿನವರಿಗೂ ಗೊತ್ತೆ ಇದೆ. ಯಾಕೆಂದರೆ ವೈದ್ಯನಾಥ ದೇವಸ್ಥಾನ ಕೂಡ ಈ ಘಜ್ನಿಗಳ ಲಿಸ್ಟ್ ನಲ್ಲಿದೆ. ಇವರಿಗೆ ನಿಜವಾಗಿಯೂ ಧಮ್ ಇದ್ದರೆ, ಅಂತರ್ಜಲದ ಬಗ್ಗೆ ಕಾಳಜಿ ಇದ್ದರೆ ಪಾಲಿಕೆ ವ್ಯಾಪ್ತಿಯ ಎಮ್ಮೆಕೆರೆ, ಬೈರಾಡಿ ಕೆರೆ ಮತ್ತು ಕಾವೂರು ಕೆರೆಯ ಆಸುಪಾಸಿನ ಪ್ರದೇಶವನ್ನು ಯಾರು ಅತಿಕ್ರಮಣ ಮಾಡಿ ತಮ್ಮ ಮಹಲು ಕಟ್ಟಿಕೊಂಡಿದ್ದಾರೋ ಅವರಿಂದ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಆಗುತ್ತಾ ಎನ್ನುವ ಪ್ರಶ್ನೆ ನನ್ನದು. ಯಾವುದೇ ಒಂದು ಖಾಲಿ ಜಾಗದಲ್ಲಿ ಒಂದು ಬಾವಿ ಇದ್ದರೆ ಅದನ್ನು ಮುಚ್ಚಿ ವಸತಿ ಸಮುಚ್ಚಯ ಕಟ್ಟುವ ಬಿಲ್ಡರ್ ಗಳನ್ನು ಎಚ್ಚರಿಸುವ ಗಂಡಸುತನ ಇಲ್ಲದ ಸರಕಾರ ಯಾರೂ ಕೇಳುವವರಿಲ್ಲ ಎನ್ನುವ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ನೆಲಸಮ ಮಾಡುತ್ತಿದೆ.
ಹಾಗಾದ್ರೆ ಹಿಂದೂ ಧರ್ಮದ ಗುತ್ತಿಗೆ ವಹಿಸಿಕೊಂಡಂತೆ ಮಾತನಾಡುತ್ತಿದ್ದವರು ಎಲ್ಲಿ ಹೋದರು ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಮತಾಂತರ, ಲವ್ ಜಿಹಾದ್, ಗೋಹತ್ಯೆ ವಿಷಯದಲ್ಲಿ ಮಾತ್ರ ಮಾತನಾಡಬೇಕು ಎನ್ನುವ ಸಿಲೆಬಸ್ ನಿಂದ ಹೊರಗೆ ಇಣುಕಬಾರದು ಎಂದು ನಿಮಗೆ ಯಾರಾದರೂ ಹೇಳಿದ್ದಾರಾ ಎನ್ನುವ ಪ್ರಶ್ನೆ ಈಗ ಉದ್ಭವಿಸುತ್ತದೆ. ಕೆಲವು ತಿಂಗಳ ಹಿಂದೆ ಸರಕಾರ ಖಾಸಗಿಯವರ ದೇವಸ್ಥಾನಗಳ ಲೆಕ್ಕ ಕೇಳಿತು ಎಂದ ಕೂಡಲೇ ಸುದ್ದಿಗೋಷ್ಟಿ ಮಾಡಿದವರಿಗೆ ಆಗ ಆ ಶ್ರೀಮಂತ ಖಾಸಗಿ ದೇವಸ್ಥಾನಗಳ ಪರ ಮಾತನಾಡುವ ಶಕ್ತಿ ಇತ್ತು. ಈಗ ಬಡ ದೇವಾಲಯಗಳನ್ನು ಸರಕಾರ ಕೆಡವಲು ಟೊಂಕ ಕಟ್ಟಿ ನಿಂತಿದೆ, ಎಲ್ಲರೂ ಬಾಯಿಗೆ ಅವಲಕ್ಕಿ ಹಾಕಿ ಕುಳಿತುಕೊಂಡಿದ್ದಾರಾ ಎನ್ನುವುದು ಸಾಮಾನ್ಯ ಭಕ್ತರ ಪ್ರಶ್ನೆ!
0
Shares
  • Share On Facebook
  • Tweet It




Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Hanumantha Kamath January 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search