• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹೊಸ ಪೊಲೀಸ್ ಕಮೀಷನರ್ ಡಿಫರೆಂಟ್ ಆಗಿರಲಿ!!

Tulunadu News Posted On March 3, 2023
0


0
Shares
  • Share On Facebook
  • Tweet It

ಮಂಗಳೂರಿಗೆ ಹೊಸ ಪೊಲೀಸ್ ಕಮೀಷನರ್ ಆಗಿ ಕುಲದೀಪ್ ಕುಮಾರ್ ಜೈನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರು ಬರುತ್ತಲೇ ಮಂಗಳೂರಿನ ಕೆಲವೆಡೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಯಾಗಿದೆ. ಈ ಸುದ್ದಿ ಬಹಿರಂಗವಾಗುತ್ತಲೇ ಮಂಗಳೂರಿನ ನಾಗರಿಕರು ಖುಷಿಯಾಗಿದ್ದಾರೆ. ಹೊಸ ಕಮೀಷನರ್ ಬಗ್ಗೆ ಮೆಚ್ಚುಗೆಯ ಭಾವನೆ ವ್ಯಕ್ತವಾಗುತ್ತಿದೆ. ಇರಲಿ, ರೇಡ್ ಆಗಿರುವುದನ್ನು ನಾವ್ಯಾರು ವಿರೋಧಿಸುತ್ತಿಲ್ಲ. ಆದರೆ ಯಾವುದೇ ಹೊಸ ಪೊಲೀಸ್ ಕಮೀಷನರ್ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಬರುವಾಗ ಕೆಲವು ಪೊಲೀಸ್ ಠಾಣೆಯ ಅಧಿಕಾರಿಗಳು ಓವರ್ ಆಕ್ಟಿವ್ ಆಗಿ ತಮಗೆ ಮೊದಲೇ ಗೊತ್ತಿರುವ ಅಡ್ಡೆಗಳ ಮೇಲೆ ದಾಳಿ ಮಾಡಿ ಹೊಸ ಕಮೀಷನರ್ ಅವರ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಇದು ಮಾಮೂಲಿ ಹೆಚ್ಚಿಸಬೇಕಾಗುತ್ತದೆ ಎನ್ನುವ ಹಿಂಟ್ ಕೂಡ ದಾಳಿಯ ಹಿಂದೆ ಅಡಗಿರುತ್ತದೆ. ಇದು ಹೊಸ ಕಮೀಷನರ್ ಅವರಿಗೆ ಗೊತ್ತಿದ್ರೆ ಒಳ್ಳೆಯದು.

ಸದ್ಯ ನಗರದಲ್ಲಿ ಇಸ್ಪೀಟ್ ಕ್ಲಬ್ಬುಗಳ ಹಾವಳಿ ನಿಂತಿದೆ. ರಿಕ್ರಿಯೇಶನ್ ಕ್ಲಬ್ಬುಗಳ ಹೆಸರಿನಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯದಂತೆ ನೋಡಿಕೊಂಡರೆ ಅದು ಉತ್ತಮ. ಇನ್ನು ಸಿಂಗಲ್ ನಂಬರ್ ಗೇಮ್, ಲಾಟರಿ ಕೂಡ ಬೇರೆ ಬೇರೆ ಹೆಸರಿನಲ್ಲಿ ನಡೆಯುತ್ತವೆ. ಅದಕ್ಕೂ ಕಡಿವಾಣ ಹಾಕಬೇಕು. ಇನ್ನು ಪೊಲೀಸ್ ಕಮೀಷನರ್ ಅವರು ಹೊಸದಾಗಿ ಬಂದಾಗ ಬೇರೆ ಬೇರೆ ಠಾಣೆಗಳಿಗೆ ಭೇಟಿ ನೀಡುವುದು, ಟ್ರಾಫಿಕ್ ಜಾಮ್, ರಸ್ತೆ ಬ್ಲಾಕ್ ಆಗುವ ಕಡೆ ಪೀಕ್ ಅವಧಿಯಲ್ಲಿ ನಿಲ್ಲುವುದು ಎಲ್ಲಾ ಮಾಡುವುದು ಸಹಜ. ಆದರೆ ಹೊಸದಾಗಿ ಬಂದಾಗ ಮಾತ್ರ ಜಾರಿಯಲ್ಲಿರದೇ ನಿರಂತರವಾಗಿ ಇದ್ದರೆ ಜನಸ್ನೇಹಿತ್ವವನ್ನು ಗಳಿಸಬಹುದು.
ಹಿಂದೆ ಮಂಗಳೂರಿನಲ್ಲಿ ಪಂಕಜ್ ಕುಮಾರ್ ಠಾಕೂರ್ ಎಂಬ ಪೊಲೀಸ್ ಕಮೀಷನರ್ ಇದ್ದರು. ಅವರ ಕಚೇರಿ ಯಾವಾಗಲೂ ಜನಸಾಮಾನ್ಯರಿಗಾಗಿ ತೆರೆದಿಡಲ್ಪಡುತ್ತಿತ್ತು. ಪಾಪದವರ ಮೇಲೆ ಯಾರಾದರೂ ಪ್ರಭಾವಿಗಳು ಅನ್ಯಾಯ ಮಾಡಿದಾಗ ಯಾವುದೇ ಠಾಣೆಯಲ್ಲಿ ದೂರು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಿದರೆ ಕಮೀಷನರ್ ಕಚೇರಿಗೆ ಧೈರ್ಯವಾಗಿ ಬಂದು ಕಂಪ್ಲೇಂಟ್ ಮಾಡಬಹುದಿತ್ತು. ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿತ್ತು. ಅವರ ಕೆಲಸದ ಶೈಲಿ ಕೂಡ ವಿಭಿನ್ನವಾಗಿತ್ತು. ಅವರು ಇಡೀ ದಿನ ಕಚೇರಿಯಲ್ಲಿ ಕುಳಿತುಕೊಂಡಿರುತ್ತಿರಲಿಲ್ಲ. ಯಾವುದೇ ಠಾಣೆಗೆ ಯಾವ ಸಮಯದಲ್ಲಿ ಬೇಕಾದರೂ ತುರ್ತಾಗಿ ಭೇಟಿ ನೀಡುತ್ತಿದ್ದ ಕಮೀಷನರ್ ಆಗಿದ್ದರು. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಅಲ್ಲಿ ಧಾವಿಸಿಬಿಡುತ್ತಿದ್ದರು. ಯಾವುದೇ ಸಣ್ಣ ದೂರು ಅಥವಾ ಪ್ರಭಾವಿಗಳ ವಿರುದ್ಧದ ದೂರು ಎಂದು ವರ್ಗೀಕರಣ ಮಾಡದೇ ಕ್ರಮ ಕೈಗೊಳ್ಳುವುದು ಅವರ ಕೆಲಸದ ಶೈಲಿಯಾಗಿತ್ತು. ಗಲಾಟೆ, ಕೊಲೆ ಸಹಿತ ದುರ್ಘಟನೆಗಳ ಸಂದರ್ಭದಲ್ಲಿ ನೊಂದವರ ಪರ ನಿಂತು ಕೆಲಸ ಮಾಡುತ್ತಿದ್ದರು. ಯಾವುದೇ ಸೂಚನೆ ಕೊಡದೇ ಅನೈತಿಕ ಅಡ್ಡೆಗಳಿಗೆ ರೇಡ್ ಮಾಡುವುದು ಸಾಮಾನ್ಯವಾಗಿತ್ತು. ಇದರಿಂದ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು ಯಾವಾಗಲೂ ಅಲರ್ಟ್ ಆಗಿರುತ್ತಿದ್ದರು. ಯಾವಾಗ ಕಮೀಷನರ್ ನಮ್ಮಲ್ಲಿಗೆ ಬಂದು ಬಿಡುತ್ತಾರೋ ಎಂಬ ಆತಂಕ ಯಾವಾಗಲೂ ಇರುತ್ತಿತ್ತು.

ಇನ್ನು ಪ್ರತಿ ಪೊಲೀಸ್ ಠಾಣೆಯ ಅಧಿಕಾರಿ ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆಯ ಸಭೆ ನಡೆಸುತ್ತಿದ್ದರು. ಅದರಲ್ಲಿ ಎಲ್ಲಾ ಧರ್ಮ, ಮತಗಳ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿ ಅಗತ್ಯ ಸಲಹೆಗಳನ್ನು ನೀಡುತ್ತಿದ್ದರು. ಇನ್ನು ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಎಲ್ಲೆಲ್ಲಿ ಗಾಂಜಾ, ಜುಗಾರಿ, ಬೀದಿಪೋಲಿಗಳ ಕಿರಿಕಿರಿ, ಪುಂಡರು ಅಲ್ಲಲ್ಲಿ ವಾಹನ ನಿಲ್ಲಿಸಿ ತೊಂದರೆ ಕೊಡುತ್ತಿದ್ದ ವಿಷಯಗಳು ಪೊಲೀಸರ ಗಮನಕ್ಕೆ ತಂದಾಗ ಅದಕ್ಕೆ ತಕ್ಷಣ ಏನಾದರೂ ಪರಿಹಾರ ಸಿಗುತ್ತಿತ್ತು. ಅದು ಮಾಧ್ಯಮಗಳಲ್ಲಿ ಕೂಡ ವರದಿಯಾಗಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಸಹಕಾರ ಆಗುತ್ತಿತ್ತು.
ಇನ್ನು ಆಗಾಗ ಎಸ್ ಸಿ/ಎಸ್ ಟಿ ಕುಂದುಕೊರತೆ ಸಭೆಯ ಜೊತೆ ರಿಕ್ಷಾ ಚಾಲಕರ, ಬಸ್ ಚಾಲಕ, ಮಾಲಕರ, ಸಾಮಾಜಿಕ ಕಾರ್ಯಕರ್ತರ ಸಭೆಗಳನ್ನು ಮಾಡಿದ್ರೆ ಉತ್ತಮ. ಇನ್ನು ಟ್ರಾಫಿಕ್ ಎಸಿಪಿ ಅವರ ಕಚೇರಿಯಲ್ಲಿ ಪಾರ್ಕಿಂಗ್ ಇಲ್ಲದ ಅನಧಿಕೃತ ಕಟ್ಟಡಗಳ ಪಟ್ಟಿ ಇದೆ. ಅಂತಹ ಕಟ್ಟಡಗಳ ದಾಖಲೆಗಳಲ್ಲಿ ಪಾರ್ಕಿಂಗ್ ಇದೆ. ಆದರೆ ವಾಸ್ತವದಲ್ಲಿ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಇದರಿಂದ ಆ ಮಳಿಗೆಗಳಿಗೆ ಬರುವ ಗ್ರಾಹಕರ ವಾಹನಗಳನ್ನು ಅಲ್ಲಲ್ಲಿಯೇ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತದೆ. ಹೊಸ ಕಮೀಷನರ್ ಅವರು ಅಂತಹ ಕಟ್ಟಡಗಳ ಎದುರು, ಆಸುಪಾಸಿನಲ್ಲಿ ನೋಪಾರ್ಕಿಂಗ್ ಬೋರ್ಡ್ ಹಾಕಿದ್ರೆ ಉತ್ತಮ. ಆಗ ಒಂದೋ ಅಲ್ಲಿ ಬರುವ ಗ್ರಾಹಕರು ಕಡಿಮೆಯಾಗಿ ಅಂಗಡಿಯವರು ಪಾರ್ಕಿಂಗ್ ವ್ಯವಸ್ಥೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದಾದರೂ ವಾಹನ ಮತ್ತೆ ಕೂಡ ಅಲ್ಲಿ ಪಾರ್ಕ್ ಮಾಡಿದರೆ ದಂಡ ವಸೂಲಿ ಮಾಡಬಹುದಾಗಿದೆ. ಇದರೊಂದಿಗೆ ವಾಹನಗಳಿಗೆ ವೀಲ್ ಲಾಕ್ ಹಾಕಿದರೆ ಜನರು ಕೂಡ ಯೋಚಿಸಿ ವಾಹನವನ್ನು ನಿಲ್ಲಿಸುತ್ತಾರೆ. ಸದ್ಯ ಟ್ರಾಫಿಕ್ ಪೊಲೀಸರಿಗೆ ಫೋಟೋ ತೆಗೆದು ತೆಗೆದಿಟ್ಟುಕೊಳ್ಳುವುದು ಮಾತ್ರ ಕೆಲಸ ಎಂದು ಅವರು ಅಂದುಕೊಂಡಿರುವುದರಿಂದ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಇಂತಹ ಹಲವು ವಿಚಾರಗಳನ್ನು ಹೊಸ ಪೊಲೀಸ್ ಕಮೀಷನರ್ ಅವರು ಪರಿಶೀಲಿಸಿ ಬಹಳ ಸಮಯದ ನಂತರ ಒಬ್ಬ ಪ್ರಾಮಾಣಿಕ, ದಕ್ಷ ಪೊಲೀಸ್ ಕಮೀಷನರ್ ಮಂಗಳೂರಿಗೆ ಸಿಕ್ಕಿದ್ದಾರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಬೇಕಾಗಿ ವಿನಂತಿ!!

0
Shares
  • Share On Facebook
  • Tweet It




Trending Now
ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
Tulunadu News July 2, 2025
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
Tulunadu News July 2, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
  • Popular Posts

    • 1
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 2
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 3
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • 4
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 5
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!

  • Privacy Policy
  • Contact
© Tulunadu Infomedia.

Press enter/return to begin your search