ಹಿಂದೂತ್ವ ಬೈಯುವ ಸಾಹಿತಿಗಳು ಪೇಮೆಂಟ್ ಗಿರಾಕಿಗಳು- ಯತ್ನಾಳ್
Posted On August 19, 2023
0

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಸಾಹಿತಿಯೊಬ್ಬರು ಟೀಕಿಸಿರುವುದಕ್ಕೆ ಶಾಸಕ, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ತೀಕ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕೆಲವು ಸಾಹಿತಿಗಳೆನಿಸಿಕೊಂಡವರು ಪೇಮೆಂಟ್ ಗಿರಾಕಿಗಳು, ಅವರು ಸಾಹಿತಿಗಳಲ್ಲ. ಅವರು ಕಾಂಗ್ರೆಸ್ಸಿನ ಏಜೆಂಟ್ ಗಳು, ಅವರಿಗೆ ಪ್ರತಿ ತಿಂಗಳು ಪೇಮೆಂಟ್ ಆಗುತ್ತಿದೆ. ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿ, ಶ್ರೀರಾಮಸೇನೆ ಹಾಗೂ ಹಿಂದೂತ್ವವನ್ನು ಬೈಯಲು ಹಣ ಸಿಗುತ್ತದೆ. ಇಂತಹ ಪೇಮೆಂಟ್ ಗಿರಾಕಿಗಳು ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಾಕಷ್ಟು ಜನರಿದ್ದಾರೆ. ಅವರ ಬಗ್ಗೆ ಮಾಧ್ಯಮಗಳು ಹೆಚ್ಚು ಪ್ರಾಮುಖ್ಯತೆ ಕೊಡಬಾರದು. ತಿಂಗಳ ಪೇಮೆಂಟ್ ಸಿಕ್ಕಿದ ತಕ್ಷಣ ಅವರು ವದರಲು ಶುರು ಮಾಡುತ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ.
Trending Now
ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
August 28, 2025
ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
August 26, 2025