ಡಿಕೆಶಿ ಒಂದು ಹೆಜ್ಜೆ ಮುಂದೆ!
ಬದುಕಿನಲ್ಲಿ ಎಲ್ಲಾ ವಿಷಯಗಳನ್ನು ಬಹಳ ಕೂಲ್ ಆಗಿ ತೆಗೆದುಕೊಳ್ಳಬೇಕು ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಅದನ್ನು ನಮ್ಮ ಜೀವನದ ವಿಷಯ ಬಂದಾಗ ನಾವು ಅನುಸರಿಸುವುದು ಒಳ್ಳೆಯದು. ಆದರೆ ಬೇರೆಯವರ ಜೀವದ ವಿಷಯವನ್ನು ಕೂಡ ನಾವು ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ ಎಂದರೆ ನಮ್ಮನ್ನು ಸ್ಥಿತಪಜ್ಞರು ಎನ್ನಲು ಆಗುವುದಿಲ್ಲ. ಹೆಚ್ಚೆಂದರೆ ಕರ್ನಾಟಕದ ಗೃಹ ಸಚಿವರು ಎನ್ನಬಹುದು. ಜಾತಿ ಕಾರಣದಿಂದ ಗೃಹ ಸಚಿವ ಸ್ಥಾನ ಪಡೆದುಕೊಂಡಿರುವ, ಅದೃಷ್ಟ ಇಲ್ಲದಿರುವುದರಿಂದ ಸಿಎಂ ಸ್ಥಾನದ ಹತ್ತಿರ ಬಂದು ಮಿಸ್ ಆಗಿರುವ, ಸಿದ್ದು ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ, ಎಂತಹುದೇ ಗಂಭೀರ ವಿಷಯ ಇರಲಿ ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳಬಲ್ಲ ವ್ಯಕ್ತಿ ಯಾರು ಎಂದರೆ ಅದು ನಮ್ಮ ಪರಂ.
ನೀವು ಉಡುಪಿಯ ಲೇಡಿಸ್ ಹಾಸ್ಟೆಲ್ ನ ಟಾಯ್ಲೆಟಿನಲ್ಲಿ ಮೊಬೈಲ್ ವಿಡಿಯೋ ಇಟ್ಟ ವಿಷಯ ಕೇಳಿ, ಅದನ್ನು ಪರಂ ಮಕ್ಕಳಾಟಿಕೆ ಎನ್ನುತ್ತಾರೆ. ಈಗ ಶಿವಮೊಗ್ಗದ ಗಲಭೆಯ ವಿಷಯ ಕೇಳಿ ಅದು ಅಷ್ಟೇನೂ ದೊಡ್ಡದಲ್ಲ ಎನ್ನುತ್ತಾರೆ. ಹೀಗೆ ಹೋಂ ಮಿನಿಸ್ಟರ್ ಎಲ್ಲಾ ವಿಷಯವನ್ನು ಬಹಳ ಲಘುವಾಗಿ ತೆಗೆದುಕೊಂಡಿರುವುದರಿಂದ ಅವರನ್ನು ಹೋಂ ಮಿನಿಸ್ಟರ್ ಮಾಡಬೇಕಿತ್ತಾ ಎನ್ನುವುದು ಪ್ರಶ್ನೆ. ಮುಜುರಾಯಿ ಇಲಾಖೆ ಕೊಟ್ಟಿದ್ದರೆ ಕೂಲ್ ಆಗಿ ದೇವಸ್ಥಾನ ಅದು ಇದು ನೋಡಿಕೊಂಡು ಇರುತ್ತಿದ್ದರೋ ಏನೋ? ಇಲ್ಲ ಅಂತ ಆದ್ರೆ ಪೊಲೀಸರಿಗೆ ಕಲ್ಲು ಎಸೆದಿದ್ದಾರೆ, ಪೊಲೀಸ್ ವರಿಷ್ಠಾಧಿಕಾರಿಯವರ ಮೇಲೆ ಕಲ್ಲು ಬಿಸಾಡಿದ್ದಾರೆ ಎಂದರೆ ಅದು ಈ ಹಿಂದೆನೂ ಆಗಿದೆ. ಹೊಸದಲ್ಲ ಎನ್ನುವ ಅರ್ಥದ ಮಾತುಗಳನ್ನು ಹೇಳುತ್ತಾರೆ.
ಮಧು ಕೂಡ ಲೈಟ್ ಆಗಿ ತೆಗೆದುಕೊಂಡ್ರಾ?
ಅತ್ತ ಶಿವಮೊಗ್ಗದವರೇ ಆಗಿರುವ, ಮಾಜಿ ಸಿಎಂ ಮಗ ಮಧು ಇದು ಕೋಮು ಗಲಭೆಯಲ್ಲ, ಮಾನಸಿಕ ಸ್ಥಿಮಿತ ಕಳೆದುಕೊಂಡವರು ಮಾಡಿದ್ದು ಎನ್ನುತ್ತಾರೆ. ಯಾವ ಸೀಮಿತ ಬೇಕಾದರೆ ಕಳೆದುಕೊಂಡವರು ಮಾಡಲಿ, ಅವರಿಗೆ ಬಿಸಿ ಮುಟ್ಟಿಸದೇ ಹುಚ್ಚರು ಎಂದು ಹಾಗೆ ಬಿಟ್ಟರೆ ಆಗುತ್ತಾ? ನಾಳೆ ಅದೇ ಹುಚ್ಚರು ಹಿಂದೂಗಳ ಮನೆಗೆ ನುಗ್ಗಿ ಈಗಾಗಲೇ ಬೆದರಿಕೆ ಹಾಕಿದ ಹಾಗೆ ರೇಪ್ ಮಾಡಿದರೆ ಆಗಲೂ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಮಾಡಿದ್ರು ಎನ್ನಲು ಆಗುತ್ತಾ? ಇದೆಲ್ಲಾ ಏನು ಸೂಚಿಸುತ್ತದೆ. ಇನ್ನು ಮಧು ರಾಗಿಗುಡ್ಡೆಯಲ್ಲಿ ಕೆಲವು ಮನೆಗಳಿಗೆ ಹೋಗಿ ಅಲ್ಲಿ ಕಾಂಗ್ರೆಸ್ಸಿನ ಬ್ರದರ್ಸ್ ಗಳ ಬಗ್ಗೆ ಮನೆಯವರು ದೂರಿದ್ದಕ್ಕೆ ಅಲ್ಲಿಂದಲೇ ವಾಪಾಸು ಹೋಗಿದ್ದಾರೆ. ಹಲ್ಲೆಗೊಳಗಾದ ಎಷ್ಟೋ ಜನರ ಮನೆ ಕಡೆ ಹೋಗುವ ನೈತಿಕತೆಯನ್ನು ಕೂಡ ತೋರಿಸಿಲ್ಲ. ಎಷ್ಟೋ ಮನೆಗಳಿಗೆ ಕಲ್ಲು ಬಿಸಾಡಿ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ. ಇವರು ಅತ್ತ ಕಡೆ ತಲೆನೂ ಹಾಕಿಲ್ಲ. ಗೃಹ ಸಚಿವರಂತೂ ಅವರಿಗೆ ಇದು ಚಿಕ್ಕ ಘಟನೆಯಾಗಿರುವುದರಿಂದ ಅವರು ಬರುವ ಕಷ್ಟ ಕೂಡ ತೆಗೆದುಕೊಂಡಿಲ್ಲ.
ರಾಜ್ಯದ ಕಾಂಗ್ರೆಸ್ ಸರಕಾರ ತಮ್ಮ ಪರವಾಗಿ ಇದೆ ಎಂದು ಮತೀಯವಾದಿಗಳಿಗೆ ಪ್ರೋತ್ಸಾಹದಾಯಕ ಸಂದೇಶ ಕೊಟ್ಟ ಹಾಗೆ ಆಗುವುದಿಲ್ಲವೇ? ನೀವು ಏನೂ ಮಾಡಿದ್ರು ನಾವು ಲೈಟ್ ಆಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದಂತೆ ಆಗುತ್ತದೆಯಲ್ಲವೇ?
ಹುಬ್ಬಳ್ಳಿ ಕೇಸು ಕೈಬಿಡುವ ಪ್ರಕ್ರಿಯೆ ಶುರುವಾಗುತ್ತಾ?
ಇನ್ನು ರಾಜ್ಯದ ಉಪಮುಖ್ಯಮಂತ್ರಿ ಡಿಕೆಶಿ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ಬಾರಿಯ ಹಳೆ ಹುಬ್ಬಳ್ಳಿಯ ಗಲಭೆಯಲ್ಲಿ ಹಾಕಿದ ಕೇಸುಗಳನ್ನು ಕೈ ಬಿಡುವಂತೆ ಗೃಹಸಚಿವರಿಗೆ ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಹಳೆ ಹುಬ್ಬಳ್ಳಿಯಲ್ಲಿ ಕೇಸು ಹಾಕಿಸಿಕೊಂಡವರು ಯಾರು? ಅದೇ ಡಿಕೆಶಿ ಸಾಹೇಬ್ರ ಬ್ರದರ್ ಗಳು. ಅವರ ಮೇಲೆ ಕೇಸು ಹಾಕಿದರೆ ಡಿಕೆಶಿಯವರಿಗೆ ಹೊಟ್ಟೆ ಉರಿಯಲ್ವಾ? ಇಷ್ಟು ಅವರು ತಡೆದುಕೊಂಡದ್ದೇ ಹೆಚ್ಚು. ಇನ್ನು ಈಗಾಗಲೇ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸರಕಾರಕ್ಕೆ ಪತ್ರ ಬರೆದು ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಭಾಗಿಯಾದವರ ಮೇಲಿನ ಕೇಸು ಕೈಬಿಡುವಂತೆ ಮನವಿ ಮಾಡಿದ್ದಾರೆ. ಹೀಗೆ ಎಲ್ಲರೂ ತಮ್ಮ ತಮ್ಮ ಬ್ರದರ್ ಗಳ ಮೇಲೆ ಸಿಕ್ಕಾಪಟ್ಟೆ ಪ್ರೀತಿ ತೋರಿಸಿದರೆ ಅವರು ಇಷ್ಟು ದಿನ ಮಲಗಿದ್ದ ತಮ್ಮ ಹುಟ್ಟುಗುಣವನ್ನು ಹಾಗೆ ಮರೆತುಬಿಡುತ್ತಾರೆಯೇ?
ಕಾಂಗ್ರೆಸ್ ಸರಕಾರ ಬಂದ ಮೇಲೆ ಮತೀಯವಾದಿಗಳಿಗೆ ರೆಕ್ಕೆಪುಕ್ಕ ಬಂದಂತೆ ಆಗುತ್ತದೆ ಎನ್ನುವ ಅನುಮಾನ ದಿನ ಹೋದಂತೆ ವಾಸ್ತವವಾಗಿ ಬದಲಾಗುತ್ತಿದೆ. ಮುಸ್ಲಿಮರ ಕೃಪೆಯಿಂದ ಕಾಂಗ್ರೆಸ್ ಸರಕಾರ ಬಂದಿರುವುದರಲ್ಲಿ ಸಂಶಯವಿಲ್ಲ. ಹಾಗಂತ ಎಲ್ಲಾ ಮುಸ್ಲಿಮರು ಗಲಭೆಕೋರರಲ್ಲ. ಅವರಲ್ಲಿ ಬೆರಳೆಣಿಕೆಯ ಶೇಕಡಾದಷ್ಟು ಮಂದಿ ಗಲಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅವರನ್ನು ಹಿಡಿದು ರುಬ್ಬಿದರೆ ಇಡೀ ಮುಸ್ಲಿಂ ಸಮುದಾಯ ಬೇಸರಿಸಿಕೊಳ್ಳುತ್ತದೆ ಎನ್ನುವ ಹೆದರಿಕೆ ಕಾಂಗ್ರೆಸ್ ಪಕ್ಷಕ್ಕೆ ಬೇಡಾ. ಹಾಗಂತ ಅಂತವರನ್ನು ಬಿಟ್ಟರೆ ಅವರೇ ಕಾಂಗ್ರೆಸ್ಸಿನ ಚೊಂಗು ಹಿಡಿದು ಪಕ್ಷವನ್ನು ಮುಳುಗಿಸಿಬಿಡುತ್ತಾರೆ.
Leave A Reply