ದಕ್ಷಿಣ ಆಫ್ರಿಕಾದಲ್ಲಿ ಪ್ರಾರ್ಥನೆಯ ಅವಶ್ಯಕತೆ ಇದೆ!
ಭಾರತದಲ್ಲಿ ಬಂದು ಧರ್ಮ ಪ್ರಚಾರಕರು ನಮ್ಮ ದೇಶಕ್ಕಾಗಿ ಪ್ರಾರ್ಥನೆ ಮಾಡುವ ಅವಶ್ಯಕತೆ ಏನಿದೆ ಎನ್ನುವುದನ್ನು ಮೊದಲೇ ನೋಡಿದಿದ್ದರೆ ಕಾರ್ಯಕ್ರಮ ರದ್ದು ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಆದರೆ ಕೆಲವರಿಗೆ ಇಲ್ಲಿ ಎಲ್ಲೆಲ್ಲಿ ಸಾಧ್ಯತೆ ಇದೆಯೋ ಅಲ್ಲೆಲ್ಲಾ ಮತ ಪ್ರಚಾರ ಮಾಡುವ ಹಪಾಹಪಿ ಶುರುವಾಗಿದೆ. ಸದ್ಯ ಇಂತಹ ಒಂದು ಸಮೃದ್ಧ ಅವಕಾಶ ಕೆಲವರಿಗೆ ಕಂಡಿದ್ದು ಕರ್ನಾಟಕದಲ್ಲಿ. ಅದಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮತ ಪ್ರಚಾರದ ಭೋದನೆಗೆ ತಯಾರಾಗಿದ್ದ ವ್ಯಕ್ತಿಯ ಹೆಸರು ಅಲ್ಫಾ ಲುಕಾವು. ಇವರು ಮೂಲತ: ದಕ್ಷಿಣ ಆಫ್ರಿಕಾದವರು. ಪಾದ್ರಿಯಾಗಿ ಜಗತ್ತಿನ ವಿವಿದೆಡೆ ತೆರಳಿ ಮತಪ್ರಚಾರ ಮಾಡುತ್ತಾರೆ. ಮತಪ್ರಚಾರ ಎಂದರೆ ಎಲ್ಲರಿಗೂ ವಿವರಿಸಿ ಹೇಳಬೇಕಾಗಿಲ್ಲ. ಅವರದ್ದೇ ಪೋಸ್ಟರ್ ನಲ್ಲಿ ಇರುವಂತೆ ಪವರ್ ಆಫ್ ಫೇಥ್ ಅಂದರೆ ಶಕ್ತಿಯ ಮೇಲೆ ನಂಬಿಕೆ. ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹೇಗೂ ತಮಗೆ ಬೇಕಾದ ಸರಕಾರವೇ ಬೆಂಗಳೂರಿನಲ್ಲಿ ಇದೆ. ಹಾಗಿರುವಾಗ ಏನೂ ತೊಂದರೆ ಆಗುವುದಿಲ್ಲ ಎಂಬ ಧೈರ್ಯ ಇತ್ತು. ಆದರೆ ಆಯೋಜಕರು ಮರೆತಿದ್ದದ್ದು ವೀಸಾ ನಿಯಮಗಳನ್ನು.
ವೀಸಾ ನಿಯಮಗಳು ಏನು ಹೇಳುತ್ತವೆ?
ಒಬ್ಬ ವಿದೇಶಿ ಪ್ರಜೆ ವೀಸಾ ಪಡೆದು ಭಾರತದಲ್ಲಿ ತಿರುಗಾಡಲು ಬಂದರೆ ಆ ವ್ಯಕ್ತಿ ಇಲ್ಲಿ ತನ್ನ ಧರ್ಮ ಅಥವಾ ಮತದ ಪ್ರಚಾರವನ್ನು ಮಾಡುವಂತಿಲ್ಲ. ತನ್ನ ಧರ್ಮವನ್ನು ಭೋದಿಸುವುದು ಮತ್ತು ಪ್ರಚಾರಪಡಿಸಿ ಜನರ ಮೇಲೆ ಪ್ರಭಾವ ಬೀರುವ ಅವಕಾಶವನ್ನು ವೀಸಾದಲ್ಲಿ ನೀಡಲಾಗಿರುವುದಿಲ್ಲ. ಆದ್ದರಿಂದ ಅಲ್ಫಾ ಲುಕಾವು ಅವರಿಗೆ ಇಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುವುದಕ್ಕೆ ನಿರ್ಭಂದ ವಿಧಿಸಲಾಗಿದೆ. ಇದೆಲ್ಲವೂ ಗೊತ್ತಿದ್ದೂ ಈ ಕಾರ್ಯಕ್ರಮದ ಆಯೋಜಕರು ಹೈಕೋರ್ಟ್ ಮೆಟ್ಟಲೇರಿ ವಿದೇಶಿ ಪ್ರಚಾರಕರಿಗೆ ಅವಕಾಶ ನೀಡಬೇಕೆಂದು ವಿನಂತಿಸಿದ್ದರು. ಆದರೆ ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಮಧ್ಯ ಪ್ರವೇಶಿಸಿ ಕಾನೂನಿನಲ್ಲಿ ಹೀಗೆಲ್ಲಾ ನಿಯಮಗಳು ಇವೆ. ಆದ್ದರಿಂದ ಅದನ್ನು ಪರಿಗಣಿಸಿ ನ್ಯಾಯಾಲಯ ತೀರ್ಮಾನ ನೀಡಬೇಕು ಎಂದು ಕೋರಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಪ್ರಾರ್ಥನೆಯ ಅವಶ್ಯಕತೆ ಇದೆ!
ಇನ್ನು ಈ ಭೋದಕನ ವಿರುದ್ಧ ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಅಲ್ಲಿಯ ಕೆಲವು ಸಂಘಟನೆಗಳು ಈ ಮನುಷ್ಯನ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಮತಾಂಧತೆಯ ಹೆಸರಿನಲ್ಲಿ ನಡೆಯುವ ಅನಿಷ್ಟಗಳ ವಿರುದ್ಧ ಅಲ್ಲಿ ವಿರೋಧ ಕಂಡುಬಂದಿವೆ. ಆದ್ದರಿಂದ ಅಂತಹ ವ್ಯಕ್ತಿಯನ್ನು ಇಲ್ಲಿ ಕರೆದು ಅವರಿಂದ ಇಲ್ಲಿನ ಜನರಿಗೆ ತಿಳಿಹೇಳುವಂತದ್ದು ಏನಿದೆ ಎನ್ನುವುದನ್ನು ಇಲ್ಲಿನವರೇ ಹೇಳಬೇಕು. ಒಟ್ಟಿನಲ್ಲಿ ವಕೀಲರೂ, ಸಾಮಾಜಿಕ ಹೋರಾಟಗಾರರಾದ ಗಿರೀಶ್ ಭಾರದ್ವಾಜ್ ಈ ಕಾರ್ಯಕ್ರಮ ರದ್ದು ಮಾಡುವ ತಮ್ಮ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಪ್ರೇ ಫಾರ್ ಇಂಡಿಯಾ ಕಾರ್ಯಕ್ರಮ ರದ್ದಾಗಿದೆ. ಪ್ರೇ ಫಾರ್ ಇಂಡಿಯಾದ ಆಯೋಜಕರಿಗೆ ನಿಜಕ್ಕೂ ಉತ್ತಮ ಉದ್ದೇಶ ಇದ್ರೆ ಅವರು ಪಾಕಿಸ್ತಾನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ಪಾಕಿಸ್ತಾನದಲ್ಲಿ ಪ್ರೇ ಮಾಡಲಿ. ಯಾಕೆಂದರೆ ಆ ದೇಶಕ್ಕೆ ಇಂತವರ ಪ್ರಾರ್ಥನೆಯ ಅಗತ್ಯ ಇರಬಹುದು. ಪಾಕಿಸ್ತಾನ ದಟ್ಟ ದರಿದ್ರ ದೇಶವಾಗಿ ಅಲ್ಲಿನ ಜನರು ಬದುಕಲು ಪ್ರಾರ್ಥನೆ ಮಾಡುವ ಪರಿಸ್ಥಿತಿ ಇದೆ. ಇನ್ನು ಪ್ರೇ ಮಾಡುವುದೇ ಆದರೆ ದಕ್ಷಿಣ ಆಫ್ರಿಕಾದಲ್ಲಿ ಸುಮಾಲಿಯಾದಂತಹ ಹತ್ತು ಹಲವು ಪುಟ್ಟ ಪ್ರದೇಶಗಳಿವೆ. ಅಲ್ಲಿನ ಜನರಿಗಾಗಿ ಪ್ರಾರ್ಥನೆ ಮಾಡಲಿ. ಇವರು ಈಗಾಗಲೇ ಪ್ರಾರ್ಥನೆಯ ಹೆಸರಿನಲ್ಲಿ ನಮ್ಮ ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶದ, ಮೀಜೋರಂನಲ್ಲಿ ಮಾಡಿದ್ದನ್ನು ನಾವು ನೋಡಿದ್ದೇವೆ. ಈಗ ಬೆಂಗಳೂರಿಗೂ ಅದನ್ನು ಹಬ್ಬಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಮ್ಮ ದೇಶದಲ್ಲಿ ಸಂತರು, ಋಷಿ, ಮುನಿಗಳು ಮಾಡಿರುವ ಪ್ರಾರ್ಥನೆಯಿಂದ ದೇಶ ಈಗ ಜಗತ್ತಿನಲ್ಲಿ ಮೂರನೇ ಶಕ್ತಿಯಾಗಿ ಬೆಳೆಯುವತ್ತ ದಾಪುಗಾಲು ಇಟ್ಟಿದೆ. ಆದ್ದರಿಂದ ಹೊರಗಿನವರು ಬಂದು ನಮ್ಮನ್ನು ಉದ್ಧಾರ ಮಾಡಬೇಕಾದ ದಯನೀಯ ಪರಿಸ್ಥಿತಿಯಲ್ಲಿ ನಾವಿಲ್ಲ. ನಮ್ಮ ಸಂಸ್ಕೃತಿಯನ್ನು ವಿದೇಶಿಗರು ಅನುಸರಿಸುವ ಈ ಕಾಲಘಟ್ಟದಲ್ಲಿ ವಿದೇಶಿಗರು ಬಂದು ಇಲ್ಲಿನ ಮನಪರಿವರ್ತನೆಗೆ ಕೈಹಾಕಲು ಹೋಗುವುದು ಬೇಡಾ. ಆ ನಿಟ್ಟಿನಲ್ಲಿ ಹೋರಾಡಿದ ಗಿರೀಶ್ ಭಾರದ್ವಾಜ್ ಅವರಿಗೆ ಅಭಿನಂದನೆಗಳು!
Leave A Reply