ಕಂಗನಾ ರಾಣಾವತ್ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧೆ!
ಬಾಲಿವುಡ್ ನಟಿ, ನೇರ ನಡೆನುಡಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಕಂಗನಾ ರಾಣಾವತ್ 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಹೆತ್ತವರ ಮೂಲ ಹಿಮಾಚಲ ಪ್ರದೇಶದ ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.
ಈ ಕುರಿತು ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಹಿಮಾಚಲ ಪ್ರದೇಶದಲ್ಲಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿದ್ದು, ಮಂಡಿ ಕ್ಷೇತ್ರ ಹೊರತುಪಡಿಸಿ ಉಳಿದ ಮೂರರಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಈಗ ಕಂಗನಾ ಇದರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. 36 ವರ್ಷದ ಕಂಗನಾ ಬಾಲಿವುಡ್ ನಲ್ಲಿ ತಮ್ಮದೇ ಸ್ಥಾನವನ್ನು ಸಂಪಾದಿಸಿದ್ದು, ಯಶಸ್ವಿ ಕಲಾವಿದೆ ಎಂದು ಸ್ಟಾರ್ ಗಿರಿ ಪಡೆದುಕೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತರಾಗಿರುವ ಕಂಗನಾ ರಾಣಾವತ್ ಅವರ ತಂದೆ ಅಮರದೀಪ್ ರಾಣಾವತ್ ಮಗಳ ಸ್ಪರ್ಧೇಯ ವಿಷಯವನ್ನು ದೃಢಪಡಿಸಿದ್ದು, ಬಿಜೆಪಿ ಕೂಡ ಟಿಕೆಟ್ ನೀಡುವ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಈಗಾಗಲೇ ಹಲವು ಚುನಾವಣೆಗಳಲ್ಲಿ ಬಾಲಿವುಡ್ ಯಶಸ್ವಿ ನಟ, ನಟಿಯರಿಗೆ ಟಿಕೆಟ್ ನೀಡಿದ್ದು, ಅಭ್ಯರ್ಥಿಗಳು ಆಯ್ಕೆಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಂಬೈಯಿಂದ ಮಾಧುರಿ ದೀಕ್ಷಿತ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದ್ದು, ಕಂಗನಾ ಸ್ಪರ್ಧೆ ಸಿನಿಪ್ರಿಯರಲ್ಲಿ ಹೊಸ ಖುಷಿಯನ್ನು ಮೂಡಿಸಿದೆ.
Leave A Reply