ವಿಮಾನ ನಿಲ್ದಾಣದಲ್ಲಿ ಸಮೋಸಕ್ಕೆ 350 ರೂಪಾಯಿ ಆದ್ರೆ ಹೇಗೆ ಎಂದ ಸಂಸದ!
ದೇಶದ ಸಂಸತ್ತಿನಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇಪ್ಪತ್ತು ರೂಪಾಯಿಯ ನೀರಿನ ಬಾಟಲಿಯಿಂದ ಹಿಡಿದು ಸಾವಿರಾರು ಕೋಟಿ ರೂಪಾಯಿಗಳ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಸಂಸದರು ಚರ್ಚೆ ಮಾಡುತ್ತಾರೆ. ಈ ಬಾರಿಯ ಸಂಸತ್ತಿನ ರಾಜ್ಯ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ, ನಟಿ ಪರಿಣಿತಿ ಚೋಪ್ರಾ ಪತಿ ರಾಘವ್ ಚಡ್ಡಾ ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.
ಹೊರಗೆ 20 ರೂಪಾಯಿಗಳಿಗೆ ಸಿಗುವ ನೀರಿನ ಬಾಟಲಿಗೆ ವಿಮಾನ ನಿಲ್ದಾಣದಲ್ಲಿ ನೂರು ರೂಪಾಯಿ ಮೌಲ್ಯ ಹಾಕಲಾಗುತ್ತದೆ. ಇನ್ನು ಒಂದು ಕಪ್ ಟೀ ಬೇಕಾದರೆ 250 ರೂಪಾಯಿ ನೀಡಬೇಕು, ಒಂದು ಸಮೋಸಕ್ಕೆ 350 ರೂಪಾಯಿ ಚಾರ್ಜ್ ಮಾಡುತ್ತಾರೆ. ಹೀಗಿರುವಾಗ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಕಾಯುವ ಪ್ರಯಾಣಿಗ ಇಷ್ಟು ದುಬಾರಿ ಬೆಲೆಯನ್ನು ಆಹಾರ ಸೇವಿಸಲು ಹಿಂದೇಟು ಹಾಕುತ್ತಾನೆ. ಇನ್ನು ಆತ ಕೇವಲ ಅಲ್ಲಿ ಸಿಗುವ ನೀರನ್ನು ಮಾತ್ರ ಕುಡಿದು ಸಮಯ ಕಳೆಯಬೇಕಾಗುತ್ತದೆ. ಇದನ್ನು ಸರಕಾರ ಗಮನಿಸಬೇಕು. ಈ ಮೂಲಕ ಜನಸಾಮಾನ್ಯರಿಗೆ ಈ ಹೊರೆ ಆಗದ ರೀತಿಯಲ್ಲಿ ನೋಡಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವವರೆಲ್ಲರೂ ಶ್ರೀಮಂತರು ಎಂಬ ಭಾವನೆ ಎಲ್ಲರಲ್ಲಿಯೂ ಇದೆ. ಅದು ಪೂರ್ಣ ಸುಳ್ಳಲ್ಲ, ಹಾಗಂತ ಎಲ್ಲರೂ ಶ್ರೀಮಂತರೂ ಅಲ್ಲ. ಇನ್ನು ವಿಮಾನ ನಿಲ್ದಾಣದಲ್ಲಿ ಸಿಗುವ ಟೀ, ಸಮೂಸಕ್ಕೆ ಅಷ್ಟು ಬೆಲೆ ಕೊಡುವಷ್ಟು ಅದು ಶ್ರೇಷ್ಟವೂ ಅಲ್ಲ. ಆದ್ದರಿಂದ ಈ ಬೆಲೆ ನಿಗದಿಗೆ ಒಂದು ಮಾನದಂಡ ಅನುಸರಿಸಬೇಕಾಗಿದೆ. ಒಂದು ನಿರ್ದಿಷ್ಟ ಬೆಲೆಗಿಂತ ಜಾಸ್ತಿ ವಸೂಲಿ ಮಾಡಬಾರದು ಎಂದು ನಿಯಮ ತಂದರೆ ಆಗ ಮಧ್ಯಮ ವರ್ಗದವರು ಕೂಡ ಅನಿವಾರ್ಯವಾದ್ದಲ್ಲಿ ವಿಮಾನ ನಿಲ್ದಾಣದಲ್ಲಿ ಸಿಗುವ ಆಹಾರ ವಸ್ತುಗಳನ್ನು ಸೇವಿಸಲು ಸಾಧ್ಯವಾಗುತ್ತದೆ. ಇನ್ನು ಈ ಮಾನದಂಡವನ್ನು ಮಲ್ಟಿಫ್ಲೆಕ್ಸ್ ನಲ್ಲಿಯೂ ಅಳವಡಿಸಿದರೆ ಅಲ್ಲಿಯೂ ಪಾಪ್ ಕಾರ್ನ್ , ಕೋಲ್ಡ್ ಡಿಂಕ್ರ್ಸ್ ಬೆಲೆಯೂ ಕೈಗೆಟಕಲು ಸಾಧ್ಯವಿದೆ.
Leave A Reply