ಗೌರಿ ಲಂಕೇಶ್ ನೋಟು ಅಮಾನ್ಯೀಕರಣದಿಂದ ತೀರಿಕೊಂಡರು ಎಂದು ಎಡಪಂಥೀಯ, ಪ್ರಗತಿಪರ ಚಿಂತಕ, ದೇಶದ ಸಾಕ್ಷಿಪ್ರಜ್ಞೆ ಪತ್ರಕರ್ತ ಕೃಷ್ಣಪ್ರಸಾದ್ ಹೇಳಿದ್ದಾರಂತೆ.
ಬಹಳ ದುಃಖದ ವಿಷಯ. ಗೌರಿ ಮೋದಿಯನ್ನು ತನ್ನ ಕೊನೆಯ ಉಸಿರಿದ್ದವರೆಗೂ ದ್ವೇಷಿಸಿದ್ದರು. ಆದರೆ ಅದೇ ಮೋದಿ ತಂದ ನೋಟು ಅಮಾನ್ಯೀಕರಣವೇ ಗೌರಿಯನ್ನು ಬಲಿತೆಗೆದುಕೊಂಡಿತೆಂದರೆ ವಿಧಿವಿಪರ್ಯಾಸ. ಕಾಲನ ಕ್ರೂರ ನೃತ್ಯ ಎನ್ನದೆ ವಿಧಿಯಿಲ್ಲ.
ನೋಟು ಅಮಾನ್ಯೀಕರಣ ಗೌರಿ ಅವರನ್ನು ಹೇಗೆ ಕೊಂದಿರಬಹುದು ಎಂದು ಯೋಚಿಸುತ್ತಿದ್ದೆ. ಒಂದು ಆಂಗಲ್ ಹೊಳೆಯಿತು. ಏನೆಂದರೆ, ಆಕೆ ರಾಜ್ಯದೊಳಗೆ ಕ್ರಿಯಾಶೀಲರಾಗಿದ್ದ ನಕ್ಸಲರಿಗೆ ಭಾರೀ ಆತ್ಮೀಯಳಾಗಿದ್ದರು. ರಾಜ್ಯದ ನಕ್ಸಲರು ನಂಬುವ ಏಕೈಕ ಪತ್ರಕರ್ತೆ ಆಕೆ ಆಗಿದ್ದರು. ಹಾಗಾಗಿ ಕಾಡಿನಲ್ಲಿ ತಮ್ಮ ದುಡ್ಡಿನ ಗಂಟನ್ನು ಇಟ್ಟುಕೊಳ್ಳಲು ಕಷ್ಟವಾಗಿ ಆ ನಕ್ಸಲರು ಅದನ್ನು ಗೌರಿಗೆ ವರ್ಗಾಯಿಸಿರಬಹುದು. ಗೌರಿಯ ಬಳಿಯೇ ಆ ಗಂಟು ಸುರಕ್ಷಿತವಾಗಿ ಬಹಳ ಕಾಲ ಇದ್ದಿರಬಹುದು. ತಮ್ಮ ಅಗತ್ಯಕ್ಕೆ ತಕ್ಕಂತೆ ಅದರಿಂದ ಸ್ವಲ್ಪ ಸ್ವಲ್ಪವೇ ದುಡ್ಢನ್ನು ನಕ್ಸಲರು ಪಡೆಯುತ್ತಿದ್ದಿರಬಹುದು. ಕಾಲ ಹೀಗೆ ನಡೆಯುತ್ತಿರಲಾಗಿ,ಇದ್ದಕ್ಕಿದ್ದಂತೆ ಒಂದು ದಿನ ಮೋದಿ ಡಿಮಾನಿಟೈಸೇಶನ್ ಘೋಷಣೆ ಮಾಡಿದ್ದಾರೆ. ವರ್ಷಾಂತ್ಯದೊಳಗೆ ನೋಟೆಲ್ಲವೂ ಬದಲಾಯಿಸಿಕೊಳ್ಳಿ. ಸೂಕ್ತ ಆಧಾರ ತೋರಿಸಿದರೆ ಮಾತ್ರ ಹಳೆ ನೋಟು ಪಡೆದು ಹೊಸದು ಕೊಡುತ್ತೇವೆ ಎಂದಿದ್ದಾರೆ. ಕಳ್ಳನೋಟುಗಳ ರಾಶಿ ರಾಶಿ ಶೇಖರಿಸಿದ್ದವರಿಗೆ ಪೀಕಲಾಟಕ್ಕೆ ಬಂದಿದೆ.
ಗೌರಿಯ ಬಳಿ ಆಗ ತನ್ನಲ್ಲಿದ್ದ ಆ ಕಂತೆ ಕಂತೆ ನೋಟುಗಳನ್ನು ಎಕ್ಸ್-ಚೇಂಜ್ ಮಾಡಿಕೊಂಡು ಹೊಸ ನೋಟು ಪಡೆಯಲು ಕಷ್ಟವಾಗಿದ್ದಿರಬಹುದು. ಹಳೆ ನೋಟು ಚಲಾವಣೆಯಾಗದೆ, ಹೊಸ ನೋಟು ದಕ್ಕದೆ ಕಾಡಿನಲ್ಲಿದ್ದ ನಕ್ಸಲರಿಗಂತೂ ಉಪವಾಸ ಬಿದ್ದು ಲಬೋ ಲಬೋ ಅನ್ನುವ ಪರಿಸ್ಥಿತಿಯೂ ಬಂದಿರಬಹುದು. ಸಹಜವಾಗಿಯೇ ಆ ಹಸಿವು ಗೌರಿಯ ಮೇಲೆ ಆಕ್ರೋಶವಾಗಿ ಬದಲಾಗಿದೆ. ನಾವು ನಿನ್ನಲ್ಲಿ ಇಡುಗಂಟಾಗಿ ಇಟ್ಟಿದ್ದ ದುಡ್ಡಿನ ಹೊಸ ನೋಟು ಕೊಡು ಎಂದು ನಕ್ಸಲರು ದುಂಬಾಲು ಬಿದ್ದಿದ್ದಾರೆ. ಇಲ್ಲದೇ ಇರೋದನ್ನು ಹೇಗೆ ಕೊಡಲಿ ಎಂದು ಗೌರಿಯೂ ಅಲವತ್ತುಕೊಂಡಿದ್ದಾರೆ. ವಿಷಯ ತೀರಾ ಗಂಭೀರ ಸ್ವರೂಪಕ್ಕೆ ತಿರುಗಿದಾಗೆಲ್ಲ ತನ್ನ ಖಾತೆಯ ದುಡ್ಡನ್ನೇ ಎತ್ತಿ ಎತ್ತಿ ನಕ್ಸಲರ ಉಡಿಗೆ ಹಾಕಿದ್ದಾರೆ. ಆದರೆ ನಕ್ಸಲರ ದ್ವೇಷ ಮಾತ್ರ ಒಂದಿನಿತೂ ಕಡಿಮೆಯಾಗಲೇ ಇಲ್ಲ. ಕ್ರಮೇಣ ಇದು ಇಬ್ಬರ ನಡುವಿನ ದ್ವೇಷ, ಸಿಟ್ಟು, ಗಲಾಟೆಗಳಿಗೆ ತಿರುಗಿದೆ. ಒಂದು ಕಾಲದ ಪರಮಮಿತ್ರೆಯೇ ಈಗ ಕಾಡಿನ ಮಂದಿಗೆ ಪರಮದ್ವೇಷಿಯಾಗಿ, ಪರಮಶತ್ರುವಾಗಿ ಕಾಣಿಸಿದ್ದಾರೆ. ಶತ್ರುಗಳನ್ನು ಗುಂಡೇಟಿನ ಮೂಲಕ ಪರಿಹರಿಸುವುದಷ್ಟೇ ಒಂದಂಶದ ಕಾರ್ಯಕ್ರಮವಾಗಿರುವ ಕಾಡಿನ ಜನ ಅದೇ ದಾರಿ ಹಿಡಿದು ಗೌರಿಯನ್ನು ಕೂಡ ಮುಗಿಸಿಹಾಕಿದ್ದಾರೆ.
ಹೀಗೆ ನೋಟು ಅಮಾನ್ಯೀಕರಣ, ಕೊಟ್ಟಕೊನೆಗೆ ಗೌರಿಯ ಜೀವ ತೆಗೆಯುವಂತಾಗಿದೆ.
ಕೃಷ್ಣಪ್ರಸಾದ್ ಹೇಳಿದ್ದು ಯಾವ ಆಂಗಲ್’ನಲ್ಲಿ ಇರಬಹುದು ಎಂದು ಯೋಚಿಸುತ್ತಿದ್ದೇನೆ. ಇದೊಂದು ಆಂಗಲ್ ಬಿಟ್ಟು ಬೇರಾವುದೂ ಹೊಳೆಯುತ್ತಿಲ್ಲ. ಘಟನಾವಳಿಗಳು ಹೀಗೇ ನಡೆದಿರುತ್ತವೆ ಎಂದೇನೂ ಹೇಳುತ್ತಿಲ್ಲ. ಆದರೆ ತನಿಖೆ ಮಾಡುತ್ತಿರುವವರಿಗೆ ಅನುಕೂಲವಾಗಲಿ ಎಂದು ಈ ಆಂಗಲ್ ಅನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಗೌರಿಯ ಹಂತಕರನ್ನು ಹುಡುಕಿಕೊಟ್ಟವರಿಗೆ ಸಿಗುವ ೧೦ ಲಕ್ಷ ರುಪಾಯಿ ಮೇಲೆ ನಾನು ಕಣ್ಣಿಟ್ಟಿದ್ದೇನೆಂದು ಯಾರೂ ಭಾವಿಸಬಾರದಾಗಿ ವಿನಂತಿ.
Leave A Reply