ಸುಷ್ಮಾ ಸರ್ಜಿಕಲ್ ದಾಳಿಗೆ ಪಾಕ್ ಕಂಗಾಲು
Posted On September 24, 2017
>>> ನಮ್ಮಲ್ಲಿ ಐಐಟಿ, ಐಐಎಂನಂಥ ಪ್ರತಿಷ್ಠಿತ ಸಂಸ್ಥೆಗಳಿವೆ. ಆದರೆ ಪಾಕ್‍ನಲ್ಲಿ ಹಕ್ಕಾನಿ, ಲಷ್ಕರ್-ಎ-ತಯ್ಯಬಾ, ಜೈಷೆ ಮೊಹಮ್ಮದ್ ನಂಥ ಉಗ್ರರ ಕಾರ್ಖಾನೆಗಳಿವೆ.
ನ್ಯೂಯಾರ್ಕ್ : ಜಾಗತಿಕ ವೇದಿಕೆಯಲ್ಲಿ ಪ್ರತಿ ಬಾರಿ ಕಾಶ್ಮೀರ ಸಮಸ್ಯೆಯನ್ನು ಎತ್ತಿ ಆಡುವ ಮೂಲಕ ತನ್ನ ಹೇಡಿ ಕೃತ್ಯಗಳನ್ನು ಮರೆಮಾಚಿಕೊಳ್ಳಲು ಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಶನಿವಾರ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಅಡಗಿಕೊಳ್ಳಲು ಜಾಗವೇ ಸಿಗಲಿಲ್ಲ. ಕಾರಣ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಾಗ್ದಾಳಿ ಹೇಗಿತ್ತೆಂದರೆ ಪಾಕ್ ಕುತ್ತಿಗೆ ಹಿಡಿದು, “ನೋಡ್ರಯ್ಯ ನೀವು ನಿಮ್ಮ ಕಾಲುಗಳನ್ನೇ ಭಯೋತ್ಪಾದನೆಯ ಚರಂಡಿಯಲ್ಲಿ ಹೂತಿಕೊಂಡು ಬೇರೆ ದೇಶಗಳತ್ತ ಬಾಂಬ್ ಎಸೆಯಬೇಡಿ. ಒಂದು ವೇಳೆ ಭಾರತ ತಿರುಗಿಬಿದ್ದರೆ ನಿಮ್ಮ ಹೆಸರು ಅಳಿಸಿ ಹೋಗುತ್ತದೆ ” ಎಂದು ಗದರಿದಂತಿತ್ತು.
ಒಂದು ದಿನ ಹಿಂದೆ ಮುಂದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಎರಡು ಏಷ್ಯಾ ರಾಷ್ಟ್ರಗಳು ಕಳೆದ 60 ದಶಕಗಳಲ್ಲಿ ಏನು ಸಾಧಿಸಿವೆ? ಎಲ್ಲಿ ಈಗ ನಿಂತಿವೆ ಎಂಬುದನ್ನು ಜಗತ್ತಿಗೆ ಸುಷ್ಮಾ ತಮ್ಮ ಭಾಷಣದ ಮೂಲಕ ಮನವರಿಕೆ ಮಾಡಿಕೊಟ್ಟರು.
ಮಹಾಸಭೆಯಲ್ಲಿ ಸುಷ್ಮಾ ವಾಗ್ಬಾಣದಿಂದ ಅಬ್ಬಾಸಿಗೆ ಕಪಾಳಮೋಕ್ಷ
>> ನಾನು ಪಾಕ್ ರಾಜಕಾರಣಿಗಳಿಗೆ ತಮ್ಮ ದೇಶದೊಳಗೆ ಇಣುಕಲು ಕಿವಿಮಾತು ಹೇಳುತ್ತಾನೆ. ಭಾರತ ಐಟಿಯಲ್ಲಿ ಸೂಪರ್ ಶಕ್ತಿಯಾಗಿದೆ. ಆದರೆ ಪಾಕಿಸ್ತಾನ ಜಾಗತಿಕ ಭಯೋತ್ಪಾದನೆ ರಫ್ತುದಾರ ಎಂದು ಕುಖ್ಯಾತಿ ಪಡೆದಿದೆ.
>> ನಾವು ಐಐಟಿ, ಐಐಎಂ, ಏಮ್ಸ್ ಸ್ಥಾಪನೆಯಿಂದ ಪ್ರಗತಿಯ ಹಾದಿಯಲ್ಲಿದ್ದೇವೆ. ಆದರೆ ಪಾಕ್ ಎಲ್‍ಇಟಿ, ಹಕ್ಕಾನಿ , ಜೆಇಎಂ ಥರದ ಉಗ್ರ ಜಾಲಗಳನ್ನು ಸ್ಥಾಪಿಸಿ ಅಧೋಗತಿಯಲ್ಲಿದೆ.
>> ಜಗತ್ತಿನಲ್ಲಿ ಮರಣಮೃದಂಗಕ್ಕೆ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ, ನಮಗೆ ಮಾನವತೆಯ ಪಾಠ ಮಾಡುವುದು ಹಾಸ್ಯಾಸ್ಪದ.
>> ನಾವು ಬಡತನ ನಿಮೂರ್ಲನೆಗಾಗಿ ಹೋರಾಡುತ್ತಿದ್ದೇವೆ. ಆದರೆ ಪಾಕ್ ನಮ್ಮ ವಿರುದ್ಧ ಹೋರಾಡುತ್ತಿದೆ.
>> ವಿಶ್ವಸಂಸ್ಥೆ ಭಯೋತ್ಪಾದನೆಯನ್ನು ಶತ್ರು ಎಂದು ಘೋಷಿಸಲು ವ್ಯಾಖ್ಯಾನಕ್ಕಾಗಿ ಶೋಧಿಸುತ್ತಿದೆ. ಆದರೆ ಭಾರತ ತನ್ನ ಶತ್ರು ಯಾರೆಂದು ಗುರುತಿಸಿಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಉಗ್ರರ ಪಟ್ಟಿಯನ್ನು ಶತ್ರುಗಳೆಂದು ಸಿದ್ಧಪಡಿಸದಿದ್ದರೆ ನಾವೆಲ್ಲ ಹೋರಾಡುವುದು ಯಾವಾಗ?
>> ಶತ್ರುಗಳ ವಿರುದ್ಧ ಹೋರಾಟದಲ್ಲಿ ಭಯೋತ್ಪಾದನೆ ಕೆಲವರಿಗೆ ಸ್ವಹಿತಾಸಕ್ತಿಗೆ ಸಾಧನವಾಗಿ ಕಂಡಿದೆ ಎಂದು ಸುಷ್ಮಾ ಚೀನಾಗೆ ಕುಟುಕಿದ್ದಾರೆ.
>> ವಿಶ್ವಸಂಸ್ಥೆ ಭದ್ರತಾ ಮಂಡಳಿ ಪರಿಷ್ಕರಣೆಗೆ ಕೂಡಲೇ ಒತ್ತುಕೊಡಬೇಕಿದೆ. 160 ರಾಷ್ಟ್ರಗಳು ಕಳೆದ ಬಾರಿ ಬೆಂಬಲ ಘೋಷಿಸಿದ್ದರೂ ಕೆಲಸವಾಗಿಲ್ಲ. ಹವಾಮಾನ ಬದಲಾವಣೆ ವಿರುದ್ಧ ಮಾತಿಗಿಂತ ಗಂಭೀರ ಕ್ರಮಗಳು ಮುಖ್ಯವಾಗುತ್ತವೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply