ಬಿಜೆಪಿಗೆ ಯೋಧರ ಮೇಲೆ ನಿಜವಾದ ಪ್ರೀತಿ ಇದೆ ಎಂದಾದರೆ…..
ಕಾಶ್ಮೀರದಲ್ಲಿ ಅಲ್ಲಿನ ಪಾಕಿಸ್ತಾನಕ್ಕೆ ಹುಟ್ಟಿದ ಮುಸ್ಲಿಮರು ಮತ್ತೆ ಭಾರತೀಯ ಯೋಧರ ಮೇಲೆ ಕಲ್ಲುಗಳನ್ನು ಬಿಸಾಡಲು ಶುರು ಮಾಡಿದ್ದನ್ನು ನೀವು ರಾಷ್ಟ್ರೀಯ ವಾಹಿನಿಗಳಲ್ಲಿ ನೋಡಿರಬಹುದು. ಅಲ್ಲಿ ಒಬ್ಬ ಸೈನಿಕನಿಗೆ ಡ್ಯೂಟಿಯ ಮೇಲೆ ಹಾಕಿದ್ರೆ ಅವನಿಗೆ ಎದುರಿನಿಂದ ಪಾಪಿ ಪಾಕಿಗಳು ಎಸೆಯುವ ಗ್ರೇನೇಡ್ ಗಳನ್ನು ಎದುರಿಸಬೇಕು ಹಾಗೆ ಹಿಂದಿನಿಂದ ಈ ಕಾಶ್ಮೀರಿ ಜಿಹಾದಿಗಳು ಎಸೆಯುವ ಕಲ್ಲುಗಳನ್ನು ಎದುರಿಸಬೇಕು ಎನ್ನುವ ಪರಿಸ್ಥಿತಿ ಇರುವುದರಿಂದ ಇಷ್ಟು ಸವಾಲು ಉಳ್ಳ ಯೋಧರು ಪ್ರಪಂಚದ ಯಾವುದೇ ಭಾಗದಲ್ಲಿಯೂ ಇರಲಿಕ್ಕಿಲ್ಲ. ನೀವು ನಿಮ್ಮ ಮನೆಯ ಅಂಗಳದಲ್ಲಿ ನಿಂತು ಹೊರಗಿನಿಂದ ಬೊಗಳುವ ಕಂತ್ರಿ ಕಜ್ಜಿ ನಾಯಿಗಳಿಗೆ ಕಲ್ಲು ಎಸೆಯುತ್ತಿರುವಾಗ ನಿಮ್ಮದೇ ಮನೆಯ ಟೇರಿಸಿನಿಂದ ನಿಮ್ಮ ಮನೆ ಮೇಲೆ ಯಾರಾದರೂ ಕಲ್ಲು ಬಿಸಾಡುತ್ತಿದ್ದರೆ ನೀವು ಯಾವುದು ಅಂತ ನೋಡುತ್ತೀರಿ.
ಪಾಕಿಗಳು ಎಸೆದ ಬ್ರೆಡಿಗೆ ಅವರ ಎಂಜಿಲು ಜಾಮ್ ನಂತೆ ಸವರಿ…..
ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುತ್ತಾ ರಸ್ತೆಗಳಲ್ಲಿ ರ್ಯಾಲಿಯೊಂದು ಹೋಗುತ್ತಿದ್ದರೆ ಕೈಯಲ್ಲಿ ಮಿಶಿನ್ ಗನ್ ಹಿಡಿದು ದೇಶಸೇವೆಗೆ ನಿಂತ ಸೈನಿಕನ ರಕ್ತ ಯಾವ ಲೆವೆಲ್ಲಿಗೆ ಕುದಿಯುತ್ತದೆ ಎನ್ನುವ ಅಂದಾಜು ಒಬ್ಬ ಯೋಧನಿಗೆ ಮಾತ್ರ ಇರಲು ಸಾಧ್ಯ. ಹಾಗಂತ ಹಾಗೆ ಘೋಷಣೆ ಕೂಗಬೇಡಿ ಎಂದು ಅವನು ಹೇಳಿದ್ರೆ “ತಪ್ಪಾಯ್ತು ಅಣ್ಣ, ಗೊತ್ತಾಗಿಲ್ಲ, ಪಾಕಿಸ್ತಾನದವರು ಎಸೆದ ಬ್ರೆಡ್ ಗೆ ಅವರ ಎಂಜಿಲನ್ನು ಜಾಮ್ ತರಹ ಸವರಿ ತಿಂದ ಕಾರಣ ಹೀಗೆ ಹೇಳಬೇಕೆನಿಸಿತು, ಇನ್ನು ಹೇಳಲ್ಲ” ಎಂದು ಯಾವ ಕಾಶ್ಮೀರಿ ಮುಸಲ್ಮಾನ ಕೂಡ ಹೇಳಲ್ಲ. ಈ ಜಿಹಾದಿಗಳು ಬೊಬ್ಬೆ ಹಾಕುತ್ತಾ ಹೋಗುವಾಗ ಆ ಭಾಗದಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದರೂ ಸಾಕು ನಮ್ಮ ಸೈನಿಕರ ಮೇಲೆ ಸುಮ್ಮಸುಮ್ಮನೆ ಕಲ್ಲು ಬಿಸಾಡಲಾಗುತ್ತದೆ, ಜಿಹಾದಿಗಳು ಯೋಧನನ್ನು ಕೆಟ್ಟ ಶಬ್ದಗಳಿಂದ ನಿಂದಿಸುತ್ತಾರೆ, ಅವನ ಶಿರಸ್ತ್ರಾಣಕ್ಕೆ ಕೈ ಹಾಕುತ್ತಾರೆ, ಅವನ ಮೈ ಮೇಲೆ ಕೈ ಹಾಕಲು ಹೋಗುತ್ತಾರೆ. ಅಂತಹ ಪರಿಸ್ಥಿತಿಯನ್ನು ಅಲ್ಲಿನ ಯೋಧರು ಎದುರಿಸುತ್ತಿದ್ದಾರೆ. ಅದೇ ಅಲ್ಲಿ ನೆರೆ ಅಥವಾ ಪ್ರಕೃತಿ ವಿಕೋಪ ಆಯಿತು ಎಂದು ಇಟ್ಟುಕೊಳ್ಳೋಣ. ಆಗ ಆ ಕಾಶ್ಮೀರಿಗಳನ್ನು ರಕ್ಷಿಸಲು ಅವರ ಪಾಕಿಸ್ತಾನದ ಅಪ್ಪ ಬರುವುದಿಲ್ಲ. ಆಗ ನಮ್ಮ ಭಾರತೀಯ ಸೈನಿಕರೇ ಬೇಕು. ಇವರ ಕಿಟಕಿಯಿಂದ ಒಳಗೆ ತಿಂಡಿ ಬಿಸಾಡಲು, ಒಂದು ಪ್ರದೇಶದಿಂದ ಮತ್ತೊಂದು ಕಡೆ ಸಾಗಿಸಲು ನಮ್ಮವರೇ ಬೇಕು. ನೀವು ಕಳೆದ ಬಾರಿ ಒಂದು ಫೋಟೋ ಸಾಮಾಜಿಕ ತಾಣದಲ್ಲಿ ನೋಡಿರಬಹುದು. ಸೈನಿಕನೊಬ್ಬನ ಬೆನ್ನ ಮೇಲೆ ಕೂಸುಂಬರಿ ಮಾಡುತ್ತಾ ನೆರೆ ಪ್ರದೇಶವನ್ನು ದಾಟುತ್ತಿರುವ ಓರ್ವ ಹೆಂಗಸು ಒಂದು ತಿಂಗಳ ಬಳಿಕ ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದಾಳೆ!
ಪಿಡಿಪಿಯೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಮಾಡುವ ಬಿಜೆಪಿ….
ಈಗ ಮುಖ್ಯ ವಿಷಯಕ್ಕೆ ಬರೋಣ. ಕಳೆದ ವಾರ ಸೈನಿಕರು ಕಾಶ್ಮೀರದ ಒಂದು ಭಾಗದಲ್ಲಿ ಗಸ್ತಿನಲ್ಲಿ ಇರುವಾಗ 200-250 ರಷ್ಟು ಕಾಶ್ಮೀರಿ ಮುಸಲ್ಮಾನರು ಅತ್ತ ಪಾಕ್ ಪರ ಘೋಷಣೆ ಕೂಗುತ್ತಾ ಬಂದಿದ್ದಾರೆ. ಸೈನಿಕರು ಅಲ್ಲಿ ನಿಂತಿರುವುದು ನೋಡಿದ ಕೂಡಲೇ ಪಾಕಿಸ್ತಾನದ ಕಡೆಯಿಂದ “ಆಕ್ರಮಣ್” ಎಂದು ಆದೇಶ ಬಂದಂತೆ ಈ ಸೈನಿಕರ ಮೇಲೆ ಮುಗಿ ಬಿದ್ದಿದ್ದಾರೆ. ಒಬ್ಬ ಸೈನಿಕನನ್ನು ಹೇಗೆ ಹೊಡೆಯುತ್ತಿದ್ದರು ಎಂದರೆ ಅವನು ಸಾಯುವ ತನಕ ಇವರ ಕೋಪ ಆರುವುದಿಲ್ಲವೇನೋ ಎಂದು ಅನಿಸುತ್ತಿತ್ತು. ಅಷ್ಟೊತ್ತಿಗೆ ಅವನು ತನ್ನ ಜೀವ ಉಳಿಸಲು ಕೊನೆಯ ದಾರಿ ಎನ್ನುವಂತೆ ತನ್ನ ಗನ್ ತೆರೆದಿದ್ದಾನೆ. ಒಂದು ಸಲ ಟ್ರಿಗರ್ ಒತ್ತಿದ ರಭಸಕ್ಕೆ ಒಬ್ಬರಾ, ಇಬ್ಬರಾ ಪಾಕಿಸ್ತಾನದ ಅನೈತಿಕ ಪುತ್ರರು ಸತ್ತಿದ್ದಾರೆ. ಅಷ್ಟೊತ್ತಿಗೆ ಪಿಡಿಪಿ ಎನ್ನುವ ಪಕ್ಷದ ಹೃದಯ ಒಡೆದು ಹೋಗಿದೆ. ಸತ್ತದ್ದು ಅಮಾಯಕ ಮುಗ್ಧರು ಎಂದು ಆತಂಕಕ್ಕೆ ಒಳಗಾದ ಪಿಡಿಪಿ ಸೈನಿಕರ ಮೇಲೆ ಎಫ್ ಐ ಆರ್ ದಾಖಲಿಸಿದೆ. ಮೆಹಬೂಬಾ ಮುಫ್ತಿ ಸೈಯಿದ್ ಎನ್ನುವ ಇವರನ್ನು ಹೆತ್ತ ಕರುಳಿನ ಮುಖ್ಯಮಂತ್ರಿಗೆ ಸತ್ತವರ ಮೇಲೆ ಮಮಕಾರ ಹೆಚ್ಚಾಗಿ ಸೈನಿಕರ ವಿರುದ್ಧವೇ ಕ್ರಮಕ್ಕೆ ಆದೇಶಿಸಿದ್ದಾರೆ. ಈಗ ನನ್ನ ಪ್ರಶ್ನೆ ಇರುವುದು ಭಾರತೀಯ ಜನತಾ ಪಾರ್ಟಿಯವರು ಪಿಡಿಪಿಯೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ನಿಜವಾದ ದೇಶಭಕ್ತಿ ಇದ್ದರೆ ಆ ಸೈನಿಕನ ಮೇಲೆ ಯಾವುದೇ ಶಿಸ್ತುಕ್ರಮ ಆಗದ ರೀತಿಯಲ್ಲಿ ನೋಡಬೇಕು. ಬದಲಾಗಿ ಆ ಸೈನಿಕನಲ್ಲಿ ನೈತಿಕ ಸ್ಥೈಯ ಹೆಚ್ಚುವಂತೆ ಮಾಡಬೇಕು. ಅವನಿಗೆ ಸನ್ಮಾನ ಮಾಡಬೇಕು. ಸನ್ಮಾನ ಮಾಡಿದರೆ ಕೆಲವು ಪಕ್ಷಗಳು, ಕೆಲವು ಮಾಧ್ಯಮಗಳು ಟೀಕಿಸಬಹುದು. ಅದು ಬೇರೆ ವಿಷಯ. ಆದರೆ ಸಾವಿರಾರು ಸೈನಿಕರಿಗೆ ತಮ್ಮ ದೇಶದ ಮೇಲೆ ಪ್ರೀತಿ, ಅಭಿಮಾನ ಇಮ್ಮಡಿಯಾಗುತ್ತದೆ.
ಅದೇ ಬಿಜೆಪಿಯವರು ಪಿಡಿಪಿ ಮಾಡಿದ್ದಕ್ಕೆ ಮೌನ ಸಮ್ಮತಿ ಕೊಟ್ಟರೆ ಸಿಎಂ ಮೆಹಬೂಬಾಗೆ ಇನ್ನಷ್ಟು ಧೈರ್ಯ ಬಂದು ಸೈನಿಕರ ಮನೋಸ್ಥೈರ್ಯವನ್ನು ತಗ್ಗಿಸುವ ಕೆಲಸ ಮಾಡುತ್ತಾಳೆ. ಆಕೆಯ ಸರಕಾರದ ಸಚಿವನೊಬ್ಬ ಈಗಾಗಲೇ ಇಬ್ಬರು ಭಯೋತ್ಪಾದಕರು ಸತ್ತ ದಿನ “ಆತಂಕ್ ವಾದಿ ಮರ್ ಗಯೇ” ಎಂದು ಟಿವಿಗಳಲ್ಲಿ ಬಂದಾಗ “ಅವರನ್ನು ಆತಂಕವಾದಿ ಎನ್ನಬೇಡಿ, ಅವರು ನಮ್ಮವರು” ಎಂದು ಹೇಳಿ ಮೊಸಳೆ ಕಣ್ಣೀರು ಸುರಿಸಿದ್ದ. ಭಯೋತ್ಪಾದಕರನ್ನೇ ನಮ್ಮವರು ಎಂದು ಹೇಳುವವರೊಡನೆ ಅಧಿಕಾರ ಅನುಭವಿಸುವುದೂ ಒಂದೇ, ನಾಯಿಗೂಡಿನಲ್ಲಿ ನಾಯಿಯನ್ನು ತಬ್ಬಿ ಮಲಗುವ ಸುಖ ಅನುಭವಿಸುವುದೂ ಒಂದೇ. ಬಿಜೆಪಿ ರಾಷ್ಟ್ರದ ಸೈನಿಕರ ಬಗ್ಗೆ ಗಂಟೆಗಟ್ಟಲೆ ಮಾತನಾಡಿ ಅಭಿಮಾನ ತೋರಿಸುತ್ತದೆ, ಅದಕ್ಕಾಗಿ ಈ ಮಾತನ್ನು ಹೇಳಿದ್ದೇನೆ. ಒಂದು ವೇಳೆ ಪಿಡಿಪಿಯೊಂದಿಗೆ ಕಾಂಗ್ರೆಸ್ಸಿನೊಂದಿಗೆ ಅಧಿಕಾರದಲ್ಲಿದ್ದರೆ ಇದನ್ನೆಲ್ಲ ಹೇಳುವ ಅಗತ್ಯ ಇರಲಿಲ್ಲ. ಅಂತಿಮವಾಗಿ ಯಾವುದೇ ಯೋಧನ ಮೇಲೆ ಪಿಡಿಪಿ ಕ್ರಮ ತೆಗೆದುಕೊಂಡಿದೆ ಎಂದು ಮಾಧ್ಯಮಗಳಿಂದ ವಿಷಯ ಗೊತ್ತಾದರೆ ಬಿಜೆಪಿಯದ್ದು ಸೈನಿಕರ ಮೇಲೆ ಕಪಟ ಪ್ರೀತಿ ಎಂದು ಸಾಬೀತಾಗುತ್ತದೆ. ಹಾಗೆ ಆಗದಿರಲಿ, ಸೈನಿಕರ ಮೇಲೆ ಇರುವ ಅಭಿಮಾನ ನಿಜವೆಂದು ಬಿಜೆಪಿ ತೋರಿಸಲಿ ಎನ್ನುವ ಹಾರೈಕೆಯೊಂದಿಗೆ ವಾರಾಂತ್ಯವನ್ನು ಮುಗಿಸುತ್ತಿದ್ದೇನೆ, ಜೈ ಹಿಂದ್!
Leave A Reply