ದಸರಾ ಹಿಂದೂಗಳಿಗೇಕೆ ಪವಿತ್ರ, ಏಕೆ ಆಚರಿಸಬೇಕು? ದೇಶಾದ್ಯಂತ ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತಾ?
ದಸರಾ ಪ್ರಯುಕ್ತ ಆಯುಧ ಪೂಜೆಗೆ ಆ ಕುತ್ಸಿತ ಮನಸ್ಸಿನ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದರೇನು, ದೇಶಾದ್ಯಂತ ಎಂದಿನಂತೆಯೇ ದಸರಾ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೋಟ್ಯಂತರ ಹಿಂದೂಗಳು ದಸರಾ ಆಚರಿಸುತ್ತಿದ್ದಾರೆ. ಇಡೀ ದೇಶವೇ ದಸರಾ ಆಚರಣೆಯಲ್ಲಿ ಸಂತಸದಿಂದ ತೊಡಗಿದ್ದಾರೆ. ಒಂಬತ್ತು ದಿನ ದುರ್ಗೆಯ ಪೂಜೆ ಮಾಡಿ ಹತ್ತನೇ ದಿನ ವಿಜಯ ದಶಮಿ ಆಚರಣೆಗೆ ದೇಶವೇ ಸಜ್ಜಾಗಿದೆ.
ಅಷ್ಟಕ್ಕೂ ದಸರಾ ಏಕೆ ಆಚರಿಸಬೇಕು? ಈ ಹಬ್ಬವೇಕೆ ಹಿಂದೂಗಳಿಗೆ ಪವಿತ್ರ? ದೇಶಾದ್ಯಂತ ಹೇಗೆ ಹಬ್ಬ ಆಚರಣೆ ಮಾಡಲಾಗುತ್ತದೆ ಗೊತ್ತಾ?
ದಸರಾ, ವಿಜಯದಶಮಿ ಹಿನ್ನೆಲೆ ಏನು?
ಭಾರತೀಯ ಪುರಾಣ ಶಾಸ್ತ್ರದ ಪ್ರಕಾರ ಎರಡು ಕಾರಣಗಳಿಗಾಗಿ ದಸರಾ ಆಚರಿಸಲಾಗುತ್ತದೆ. ದುರ್ಗಾ ಮಾತೆ ರಾಕ್ಷಸ ಮಹಿಷಾಸುರನನ್ನು ಮರ್ದಿಸಿದ ಹಿನ್ನೆಲೆಯಲ್ಲಿ ಒಂಬತ್ತು ದಿನ ನವರಾತ್ರಿ ಆಚರಿಸಲಾಗುತ್ತದೆ.
ಎರಡನೆಯದಾಗಿ, ರಾಮಾಯಣದ ರಾಮನು ಒಂಬತ್ತು ದಿನ ಹೋರಾಡಿ ಹತ್ತನೇ ದಿನ ರಾವಣನನ್ನು ಸಂಹಾರ ಮಾಡಿದ ಕಾರಣ ವಿಜಯದಶಮಿ ಆಚರಿಸಲಾಗುತ್ತದೆ. ಹಾಗಾಗಿ ಹಿಂದೂಗಳಿಗೆ ಈ ಹಬ್ಬ ವಿಜಯದ ಸಂಕೇತವಾಗಿದೆ.
ದೇಶದ ಎಲ್ಲೆಲ್ಲಿ ದಸರಾ ಆಚರಣೆ?
ದೇಶಾದ್ಯಂತ ದಸರಾ ಆಚರಿಸಿದರೂ, ಬಹುತೇಕ ಕಡೆ ವೈವಿಧ್ಯಮಯವಾಗಿ ಹಬ್ಬ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಗೊಂಬೆಗಳನ್ನು ಜೋಡಿಸಿ, ಒಂಬತ್ತು ದಿನ ಪೂಜೆ ಮಾಡಲಾಗುತ್ತದೆ. ಅದರಲ್ಲೂ ಕರ್ನಾಟಕದ ಮೈಸೂರಿನಲ್ಲಿ ಆಚರಿಸುವ ನವರಾತ್ರಿ, ಒಂಬತ್ತು ದಿನದ ಪೂಜೆ, ಹತ್ತನೇ ದಿನದ ವಿಜಯದಶಮಿ, ಜಂಬೂಸವಾರಿಯಂತೂ ವಿಶ್ವವಿಖ್ಯಾತವಾಗಿದೆ.
ಕೋಲ್ಕತಾದಲ್ಲಿ ದುರ್ಗೆಯ ಪೂಜೆ ಮಾಡಲಾಗುತ್ತದೆ. ಉತ್ತರ ಭಾರತದ ಹಲವೆಡೆ ಹಬ್ಬ ಆಚರಿಸಲಾಗುತ್ತದೆ. ಆದಾಗ್ಯೂ, ರಾಮಾಯಣದ ಹಲವು ಪಾತ್ರಗಳ ವೇಷಧರಿಸಿ ನಾಟಕ, ಸ್ತಬ್ಧಚಿತ್ರಗಳ ಮೂಲಕ ಹಬ್ಬ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲೂ ದಸರಾ ಆಚರಿಸಲಾಗುತ್ತದೆ. ಬಂಧುಗಳು, ಸ್ನೇಹಿತರು ಸಂಬಂಧಿಕರ ಮನೆಗೆ ಹೋಗಿಯೋ, ನೆರೆಹೊರೆಯವರಿಗೋ ಬನ್ನಿ ನೀಡಿ ಪರಸ್ಪರ ಹಬ್ಬದ ಶುಭಾಶಯ ಕೋರಲಾಗುತ್ತದೆ. ಉತ್ತರ ಕರ್ನಾಟಕ ಸೇರಿ ಕರ್ನಾಟಕದಲ್ಲೂ ಬನ್ನಿ ವಿನಿಮಯ ಮೂಲಕ ಬನ್ನಿ ಬಂಗಾರವಾಗಲಿ, ಪರಸ್ಪರ ಸೌಹಾರ್ದಯುತವಾಗಿ ಜೀವನ ಸಾಗಿಸೋಣ ಎಂದು ಶುಭಾಶಯ ಕೋರುತ್ತರೆ.
ಒಟ್ಟಿನಲ್ಲಿ, ಶಾಂತಿ, ವಿಜಯ, ಸೌಹಾರ್ದದ ಸಂಕೇತವಾಗಿ ದೇಶಾದ್ಯಂತ ದಸರಾ ಆಚರಿಸುವುದು ದೇಶದ ಸಂಪ್ರದಾಯ, ಪುರಾಣ, ಘನತೆಗೆ ಹಿಡಿದ ಕನ್ನಡಿಯಾಗಿದೆ.
Leave A Reply