• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಎಡಪಂಥಿಯರನ್ನು ಬಲಪಂಥಿಯರೇ ಯಾಕೆ ಹೊಡೆಯುತ್ತಾರೆ?

Satish Sasi Posted On October 7, 2017


  • Share On Facebook
  • Tweet It

ಎಡಪರ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಗಳು ಹತ್ಯೆಯಾದಾಗ ತಕ್ಷಣ ಅವರ ಬೆಂಬಲಿಗರು ಹೇಳುವುದು ಯಾವುದೋ ಬಲಪಂಥಿಯ ಸಂಘಟನೆಯವರು ಕೊಂದಿರಬೇಕು. ಅನೇಕ ಬಾರಿ ಕೊಂದಿರಬೇಕು ಎನ್ನುವುದಕ್ಕಿಂತ ಬಲಪಂಥಿಯರೇ ಕೊಂದಿದ್ದಾರೆ ಎನ್ನುವ ಹೇಳಿಕೆಯನ್ನು ಪೊಲೀಸರು ಇನ್ನೇನೂ ಹೆಣ ಇರುವ ಸ್ಥಳ ತಲುಪುವ ಮೊದಲೇ ಎಡಪಂಥಿಯರು ಹೇಳಿ ಆಗಿರುತ್ತದೆ. ತನಿಖೆ, ವಿಚಾರಣೆ ಎಲ್ಲವೂ ಪ್ರಾರಂಭವಾಗುವ ಮೊದಲೇ ತಮಗೆ ನೇರವಾಗಿ ಕೊಂದವರು ಫೋನ್ ಮಾಡಿ ಹೇಳಿದ್ದಾರೆ ಎನ್ನುವಂತೆ ತಮ್ಮ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಹೇಳಿ ಬಿಟ್ಟಿರುತ್ತಾರೆ.
ಅದಕ್ಕೆ ಮೊನ್ನೆ ಗೌರಿ ಲಂಕೇಶ್ ಹತ್ಯೆ ಕೂಡ ಹೊರತಾಗಿರಲಿಲ್ಲ. ಅಲ್ಲಿಯೂ ಹಾಗೆ ನಡೆಯಿತು. ಹತ್ಯೆ ನಡೆದ ರಾತ್ರಿಯೇ ಮೋದಿಗೆ ದಿಕ್ಕಾರ ಎಂದು ಕೂಗುವವರು ಅಲ್ಲಿ ಕಾಣಿಸಿಕೊಂಡರು. ಕಲ್ಬುರ್ಗಿ ಹತ್ಯೆ ಆದಾಗಲೂ ಹೀಗೆ ನಡೆಯಿತು. ಹಾಗಾದರೆ ಇಂತಹ ಪೂರ್ವಾಗ್ರಹ ಯಾಕೆ ಎನ್ನುವುದರ ಬಗ್ಗೆ ಚಿಂತನೆ ನಡೆಯಲೇಬೇಕು. ಹೇಗೆ ಕುದುರೆ ಓಡುವಾಗ ಕಣ್ಣಿಗೆ ಕಟ್ಟುತ್ತಾರಲ್ಲ, ಅದರಿಂದ ಕುದುರೆಗೆ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎಂದು ಗೊತ್ತೆ ಅಗುವುದಿಲ್ಲ. ಅಂತಹ ಮನಸ್ಥಿತಿಯವರು ಎಡಪಕ್ಷ ಮತ್ತು ಸಂಘಟನೆಗಳಲ್ಲಿ ಇರುವುದರಿಂದ ಅವರಿಗೆ ಆರೋಪ ಹಾಕುವುದು ಸಲೀಸು. ಉಳ್ಳಾಲದಲ್ಲಿ ಮೊನ್ನೆ ಜುಬೇರ್ ಎನ್ನುವ ಯುವಕನ ಕೊಲೆಯಾಯಿತು. ಆದರೆ ಇಲ್ಲಿ ಎಡಪಂಥಿಯರು ಚಳುವಳಿ ತೆಗೆದಿಲ್ಲ. ಯಾಕೆಂದರೆ ಮೃತನಾದವ ಬಿಜೆಪಿ ಕಾರ್ಯಕರ್ಥ. ಅದೇ ಗೌರಿ ತಮ್ಮ ಬರವಣಿಗೆಯಲ್ಲಿ ತೀವ್ರವಾಗಿ ಹಿಂದೂತ್ವವನ್ನು, ಹಿಂದೂ ಸಂಘಟನೆಗಳನ್ನು, ಹಿಂದೂ ಮುಖಂಡರನ್ನು, ಭಾರತದ ಪ್ರಧಾನಿ ಮೋದಿಯವರನ್ನು, ದೇವರನ್ನು, ದೇವಸ್ಥಾನಗಳನ್ನು ಟೀಕಿಸಿ, ಅವಹೇಳನವಾಗಿ, ನಿಂದಿಸಿ, ಪರಮ ಅಸಹ್ಯ ಪದಗಳನ್ನು ಹುಡುಕಿ ತಂದು ಬರೆಯುತ್ತಿದ್ದ ಕಾರಣ ಅವಳ ಕೊಲೆಯನ್ನು ಬಲಪಂಥಿಯರೇ ಮಾಡಿದ್ದಾರೆ ಎಂದು ಎಡಪಂಥಿಯರು ಹಟಕ್ಕೆ ಕುಳಿತವರಂತೆ ಹೇಳುತ್ತಿದ್ದಾರೆ. ಇದರಿಂದ ಏನಾಗುತ್ತದೆ ಎಂದರೆ ತನಿಖೆಯಲ್ಲಿ ಹತ್ಯೆ ಆದದ್ದು ಬೇರೆ ಯಾರೋ, ಬೇರೆ ಯಾವುದೋ ಕಾರಣಕ್ಕೆ ಎಂದು ತಿಳಿದು ಬಂದರೂ ಕಾಂಗ್ರೆಸ್ ಸರಕಾರ ಅದನ್ನು ಹೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಯಾಕೆಂದರೆ ಹೇಳಿದರೆ ಎಡಪಂಥಿಯರು ಕೋಪಿಸಿಕೊಂಡು, ಅವರ ಹೋರಾಟಕ್ಕೆ ಹಿನ್ನಡೆಯಾಗುತ್ತದೆ, ಅವರಿಗೆ ಇರಿಸುಮುರುಸಾಗುತ್ತದೆ ಎನ್ನುವ ನಂಬಿಕೆಯಿಂದ ಸತ್ಯವನ್ನು ಮುಚ್ಚಿ ಹಾಕಿ ಒಂದೋ ಯಾವುದಾದರೂ ಬಲಪಂಥಿಯರ ತಲೆಗೆ ಕಟ್ಟುತ್ತಾರೆ ಅಥವಾ ಆರೋಪಿ ಸಿಗಲಿಲ್ಲ ಎಂದು ಕೈತೊಳೆದುಕೊಂಡು ಬಿಡುತ್ತಾರೆ. ಕಲ್ಬುರ್ಗಿ ಪ್ರಕರಣದಲ್ಲಿ ಎರಡನೇಯದ್ದಾಗಿದೆ. ಈ ಬಾರಿ ವಿಭಿನ್ನವಾಗಿ ಗೃಹಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ ಹಾಗೆ ಹಂತಕ ಯಾರೆಂದು ಗೊತ್ತಾಗಿದೆ, ಸಾಕ್ಷ್ಯ ಒಟ್ಟು ಮಾಡುತ್ತಿದ್ದೇವೆ!
ಗೌರಿಯ ನಿಲುವುಗಳು ಏನು, ಎತ್ತ ಎಂದು ಯಾರೂ ಕೂಡ ಊಹಿಸಬಹುದಂತೆ ಆಕೆ ಬರೆಯುತ್ತಿದ್ದಳು. ಅದು ಪತ್ರಕರ್ಥೆಯ ನಿಲುವುಗಳು ಎನ್ನುವುದಕ್ಕಿಂತ ತಾನು ಒಪ್ಪಿಕೊಂಡ ಸಿದ್ಧಾಂತ ಅವಳ ಬರವಣಿಗೆಯಲ್ಲಿ ಕಾಣುತ್ತಿತ್ತು. ತನ್ನ ಸಿದ್ಧಾಂತವನ್ನು ಜನರಿಗೆ ತಲುಪಿಸಲು ಅವಳು ಪತ್ರಿಕೆಯನ್ನು ಅಸ್ತ್ರವನ್ನಾಗಿ ಬಳಸಿದಳು. ಆಕೆಯ ಪತ್ರಿಕೆ ಓಮ್ಮೆ ಓದಿದವರಿಗೆ ಮುಂದಿನ ಸಂಚಿಕೆಯಲ್ಲಿ ವಿಷಯ ಹೇಗಿರುತ್ತೆ ಎನ್ನುವ ಕಲ್ಪನೆ ಇರುತ್ತಿತ್ತು. ಅಂತವರ ಪತ್ರಿಕೆ ವಾಸ್ತವಕ್ಕಿಂತ ವಿಡಂಬನೆಯನ್ನೇ ಹೆಚ್ಚು ಹೊರಚೆಲ್ಲುತ್ತಿದ್ದ ಕಾರಣ ಅದರ ಓದುಗ ವಲಯವೇ ಬೇರೆ, ಅದರ ಚೌಕಟ್ಟು ಅಷ್ಟೇ. ಅಂತವರನ್ನು ಕೊಂದು ಯಾರು ತಾನೇ ತಮ್ಮ ಮೇಲೆ ರಿಸ್ಕ್ ತೆಗೆದುಕೊಳ್ಳಲು ಹೋಗುತ್ತಾರೆ, ಅದು ಕೂಡ ಕಾಂಗ್ರೆಸ್ ಸರಕಾರ ಇರುವಾಗ.
ಆದ್ದರಿಂದ ಪ್ರತಿ ಬಾರಿ ಹೀಗೆ ಎಡಪರರು ಸತ್ತಾಗ ಅದನ್ನು ಬಲಪಂಥಿಯರ ತಲೆಗೆ ಕಟ್ಟುವ ಕುರಿತು ಇವತ್ತು ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಸಂಜೆ 5 ಗಂಟೆಗೆ ಸೆಮಿನಾರ್ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುತ್ತಾರೆ. ನೀವು ಕೂಡ ಭಾಗವಹಿಸಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು!

  • Share On Facebook
  • Tweet It


- Advertisement -
Chakravarthy Sulibele


Trending Now
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Satish Sasi February 2, 2023
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Satish Sasi February 1, 2023
Leave A Reply

  • Recent Posts

    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
  • Popular Posts

    • 1
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 2
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 3
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 4
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 5
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search