• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದೇಸಾಯಿ, ಡೈನೆಸ್ಟಿ, ಡೆವಲಪ್‍ಮೆಂಟ್- ಮೋದಿ 3ಡಿ ಮಂತ್ರ

TNN Correspondent Posted On October 17, 2017
0


0
Shares
  • Share On Facebook
  • Tweet It

>> ಭ್ರಷ್ಟಾಚಾರ, ಜಾತೀಯತೆ, ಕೋಮುಗಲಭೆ ಮತ್ತು ವಂಶಾಡಳಿತ – ಇದು ಕಾಂಗ್ರೆಸ್ ಅಭಿವೃದ್ಧಿಯ ಮಾದರಿಗೆ ಆಧಾರಸ್ತಂಭಗಳು.

>> ಈ ವಿಧಾನಸಭೆ ಚುನಾವಣೆ ವಂಶಾಡಳಿತ ಮತ್ತು ಅಭಿವೃದ್ಧಿ ನಡುವೆ.

>> ಸರ್ದಾರ್ ಪಟೇಲ್ ತುಳಿಯಲು ಹರಸಾಹಪಟ್ಟ ಕಾಂಗ್ರೆಸ್, ಈಗಲೂ ಗುಜರಾತಿಗರನ್ನು ಮುಗಿಸುವ ಹುನ್ನಾರದಿಂದ ಚುನಾವಣೆ ರಣತಂತ್ರ

>> ರಾಜ್ಯದ ರೈತರಿಗೆ ರೂ. 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಘೋಷಿಸಿದ ಸಿಎಂ ರೂಪಾನಿ

ಗಾಂಧಿನಗರ : ಪ್ರಧಾನಿ ಮೋದಿ ಮತ್ತೆ ಗುಡುಗಿದ್ದಾರೆ. ಆದರೆ ಈ ಬಾರಿ ತವರು ರಾಜ್ಯ ಗುಜರಾತ್‍ನಲ್ಲಿ ಡಿಸೆಂಬರ್‍ಗೆ ಎದುರಾಗುವ ವಿಧಾನಸಭೆ ಚುನಾವಣೆಗೆ ರಣಕಹಳೆ ಎನ್ನಲಾದ “ಗುಜರಾತ್ ಗೌರವ್ ಮಹಾಸಮ್ಮೇಳನ” ದಲ್ಲಿ ಕಾಂಗ್ರೆಸ್ ಒಳಸಂಚುಗಳನ್ನು ಬಟಾಬಯಲು ಮಾಡಿ ಆರ್ಭಟಿಸಿದ್ದಾರೆ. ಸೋಮವಾರ ನಡೆದ ಮಹಾಸಮ್ಮೇಳನದಲ್ಲಿ 7 ಲಕ್ಷ ಮಂದಿ ಪ್ರಧಾನಿ ಅವರ ಅಭಿವೃದ್ಧಿ ಘೋಷಣೆಗೆ ಸಾಕ್ಷಿಯಾದರು.

ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬಿಸಿದ್ದು ಕಾಂಗ್ರೆಸ್. ಸರ್ದಾರ್ ಪಟೇಲ್‍ರನ್ನು ರಾಜಕೀಯವಾಗಿ ಮುಗಿಸಲು ಹರಸಾಹಸಪಟ್ಟಿತ್ತು ಕಾಂಗ್ರೆಸ್. ಇಂಥ ಕಾಂಗ್ರೆಸ್ ಕುಟುಂಬ ರಾಜಕಾರಣ ಗುಜರಾತಿಗರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದ್ದಾರೆ.

ಅಮಿತ್ ಷಾ “ಪಂದ್ಯ ಪುರುಷೋತ್ತಮ”

ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಶ್ರಮಕಾರಣ. ಅವರು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಮೋದಿ ಹೊಗಳಿದರು. ಅಂಥ ಷಾರನ್ನು ಜೈಲಿಗೆ ಅಟ್ಟಲು ಕಾಂಗ್ರೆಸ್ ಯುಪಿಎ ಅವಧಿಯಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಷಾ ಮೂಲಕ ನನ್ನನ್ನು ಹಣಿಯಲು ಹೊರಟಿತ್ತು ನೆಹರು-ಗಾಂಧಿ ಫ್ಯಾಮಿಲಿ ಎಂದು ಮೋದಿ ಕುಟುಕಿದ್ದಾರೆ.

ಜಿಎಸ್‍ಟಿಯಲ್ಲಿ ಕಾಂಗ್ರೆಸ್ ಪಾಲಿದೆ 

ಪ್ರಸ್ತುತ ಜಿಎಸ್‍ಟಿ ಬಗ್ಗೆ ಅಪಪ್ರಚಾರವನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ತನ್ನ ಆಡಳಿತದ ರಾಜ್ಯಗಳ ಸರ್ಕಾರಗಳಿಂದ ಅನುಮೋದನೆ ಕೊಡಿಸಿದ್ದೇಕೆ? ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳನ್ನು ಸಂಪರ್ಕಿಸಿ, ಅವರ ಒಪ್ಪಿಗೆ ಪಡೆದೇ ಜಿಎಸ್‍ಟಿ ಜಾರಿ ಮಾಡಿತು ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

ನ.8 “ಕಪ್ಪುಹಣ ಮುಕ್ತ ದಿನಾಚರಣೆ”
ದೇಶದ ಆರ್ಥಿಕತೆಗೆ ಸಬಲೀಕರಣ ತಂದ ನೋಟು ಅಮಾನ್ಯೀಕರಣ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ನ.8ನ್ನು “ಕರಾಳ ದಿನ’ ಎಂದು ಆಚರಿಸಲು ಮುಂದಾಗಿದೆ. ಇದು ದುರಾದೃಷ್ಟ. ಆದರೆ ಬಿಜೆಪಿ ಮಾತ್ರ ನ.8ಕ್ಕೆ ಸಂಭ್ರಮಿಸಿ ಕಾಳಧನ ಮುಕ್ತ ದಿನ ಎಂದು ಆಚರಿಸಲಿದೆ ಎಂದು ಮೋದಿ ಕಾಂಗ್ರೆಸ್ ಕಾಲೆಳೆದಿದ್ದಾರೆ.

ರಾಹುಲ್‍ರಿಂದ ಅಸಮಾಧಾನದ ಟೀಕೆ
ಮೋದಿ ಗುಜರಾತ್‍ನಲ್ಲಿ ಭಾಷಣ ಆರಂಭಿಸುವ ಮುನ್ನ ಟ್ವಿಟ್ಟರ್‍ನಲ್ಲಿ ಟಾಂಗ್ ಕೊಟ್ಟ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ” ಇಂದು ಹವಾಮಾನ ಇಲಾಖೆ ಪ್ರಕಾರ, ಪೊಳ್ಳು ಭರವಸೆಗಳ ಮಳೆ ಸುರಿಯಲಿದೆ” ಎಂದು ಟೀಕೆ ಮಾಡಿದ್ದರು. ಆದರೆ ಮೋದಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಂಶಾಡಳಿತ ಟೀಕಿಸಿ, ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ರಾಹುಲ್ ಪಟ್ಟಾಭಿಷೇಕದ ತಯಾರಿಯನ್ನು ಕುಟುಕಿ ನೆಹರು-ಗಾಂಧಿ ಕುಟುಂಬಕ್ಕೆ ಮುಜುಗರ ತಂದಿಟ್ಟರು.

0
Shares
  • Share On Facebook
  • Tweet It


2017amitassemblybjjpbjpelectiongandhigandhinagargujaratindiamahasammelanmodindaneharunehrurahulshahsoniaupa


Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Tulunadu News January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Tulunadu News January 19, 2026
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search