• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹರಿಕೃಷ್ಣ ಬಂಟ್ವಾಳ್ ರಾಜಕೀಯ ಹೊಸ ಇನ್ಸಿಂಗ್ಸ್ ಗೆ ಭವ್ಯ ಸಿದ್ಧತೆ!

Naresh Shenoy Posted On October 19, 2017
0


0
Shares
  • Share On Facebook
  • Tweet It

ಹರಿಕೃಷ್ಣ ಬಂಟ್ವಾಳ ಅವರು ನವೆಂಬರ್ ನಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರಲಿದ್ದಾರೆ. ಅದಕ್ಕಾಗಿ ವೇದಿಕೆ ಸಿದ್ಧವಾಗಿದೆ. ಪರಿವರ್ತನಾ ರ್ಯಾಲಿ ಮಂಗಳೂರಿನ ಕೇಂದ್ರ ಮೈದಾನಕ್ಕೆ ಬರುವ ದಿನ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ರಾಜ್ಯ, ರಾಷ್ಟ್ರ ಮಟ್ಟದ ನಾಯಕರ ಸಮ್ಮುಖದಲ್ಲಿ ಬಿಲ್ಲವ ಮಹಾನಾಯಕನೊಬ್ಬನ ರಾಜಕೀಯ ಹೊಸ ಇನ್ನಿಂಗ್ಸ್ ಗೆ ತಯಾರಿ ನಡೆದಿದೆ. ಅಷ್ಟಕ್ಕೂ ಹರಿಕೃಷ್ಣರಿಗೆ ಬಿಜೆಪಿಯ ಸಿದ್ಧಾಂತ ಹೊಸತಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿದ ಹರಿಕೃಷ್ಣ ಬಂಟ್ವಾಳ್ ಅವರು ಬಿಜೆಪಿ ರಾಜಕೀಯ ಪಕ್ಷವಾಗಿ ಹೆಜ್ಜೆ ಇಡಲು ಶುರು ಮಾಡಿದಾಗ ಅದರ ಪ್ರಧಾನ Secreatary ಆಗಿದ್ದರು.
ನಂತರ ಅವರನ್ನು ಸೆಳೆದದ್ದು ಇಂದಿರಾ ಗಾಂಧಿಯವರ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಕಾಂಗ್ರೆಸ್ ನಲ್ಲಿ ಈಗ ಉನ್ನತ ಅಧಿಕಾರದಲ್ಲಿರುವ ಈಗ ಅತಿರಥ ಮಹಾರಥ ಎನಿಸಿಕೊಂಡಿರುವ ಕರಾವಳಿ Karnatakaದ ಅಷ್ಟೂ ಕಾಂಗ್ರೆಸ್ಸಿಗರು ಚುನಾವಣೆಗೆ ನಿಂತಾಗ ಅವರ ಬಗ್ಗೆ ಭಾಷಣ ಮಾಡುತ್ತಿದ್ದವರು ಹರಿಕೃಷ್ಣ ಬಂಟ್ವಾಳ್. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಗಳೂರಿನ ರಥಬೀದಿಯ ಅಶ್ವಥ ಕಟ್ಟೆಯ ಬಳಿ ಜನಾರ್ಧನ ಪೂಜಾರಿಯವರ ರಾಜಕೀಯ ಸಭೆಗಳಾಗುತ್ತಿತ್ತು. ಪೂಜಾರಿಯವರ ಒಂದು ಭಾಗದಲ್ಲಿ ಹರಿಕೃಷ್ಣ ಬಂಟ್ವಾಳರು ಮತ್ತೊಂದೆಡೆ ಎಂಜಿ ಹೆಗ್ಡೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಲು ಮೈಕಿನ ಬಳಿ ಬರುತ್ತಿದ್ದರೆ ಸೇರಿದ್ದ ಸಾವಿರಾರು ಜನರ ಮನಸ್ಸಿನಲ್ಲಿ ವಿದ್ಯುತ್ ಸಂಚಾರ. ಕಂಚಿನ ಕಂಠದ, ಬಲಯುತವಾದ ದೇಹದ , ನರನಾಡಿಗಳಲ್ಲಿಯೂ ಆವೇಶ ಹೊರಹೊಮ್ಮಿಸುತ್ತಿದ್ದ ಹರಿಕೃಷ್ಣರು ಮಾತನಾಡುವಾಗ ಮೈಕ್ ಕೇವಲ ಸಾಂಕೇತಿಕವಾಗಿ ಎನ್ನುವಂತೆ ಕಾಣುತ್ತಿತ್ತು. ಅವರು ಕಟ್ಟೆಯ ಎದುರು ನಿಂತು ರಥಬೀದಿಗೆ ಮುಖ ಮಾಡಿ ಮಾತನಾಡುತ್ತಿದ್ದರೆ ಹೂವಿನ ಮಾರುಕಟ್ಟೆಯ ತನಕ ಸೇರಿದ್ದ ಜನ ಆ ಧ್ವನಿಯನ್ನು ಕೇಳಿ ಹೌದೌದು ಎನ್ನುತ್ತಿದ್ದರು. ಹರಿಕೃಷ್ಣರು ಪೂಜಾರಿಯವರ ಪ್ರತಿ ಚುನಾವಣೆಯಲ್ಲಿ ಮಾತನಾಡಿದ್ದಾರೆ. ಆದರೆ ಇಲ್ಲಿಯ ತನಕ ಅದಕ್ಕೆ ಪ್ರತಿಫಲವಾಗಿ ಒಂದೇ ಒಂದು ರಾಜಕೀಯ ಸ್ಥಾನಮಾನ ಕೇಳಿದವರಲ್ಲ. ಪೂಜಾರಿಯವರ ಹೆಸರು ಬಳಸಿ ನಿಗಮದ ಅಧ್ಯಕ್ಷ ಸ್ಥಾನದಿಂದ ಹಿಡಿದು ಕೇಂದ್ರ ಮಂತ್ರಿ ಆದವರು ಕರಾವಳಿಯಲ್ಲಿ ಇದ್ದಾರೆ. ಆದರೆ ಪೂಜಾರಿಯವರ ಆಪ್ತ ವಲಯದ ಮೊದಲ ಕಟ್ಟಾಳು ಹರಿಕೃಷ್ಣ ಬಂಟ್ವಾಳ್ ಮನಸ್ಸು ಮಾಡಿದ್ದರೆ ರಾಜ್ಯದಲ್ಲಿಯೋ, ಕೇಂದ್ರದಲ್ಲಿಯೋ ದೊಡ್ಡ ಪೋಸ್ಟಿನಲ್ಲಿ ಕುಳಿತು, ಏಸಿ ಕೋಣೆ, ಏಸಿ ಕಾರು, ಲಕ್ಷಗಟ್ಟಲೆ ಏಣಿಸುತ್ತಾ ಆರಾಮವಾಗಿ ಇರಬಹುದಿತ್ತು. ಆದರೆ ಚುನಾವಣಾ ಪ್ರಚಾರಕ್ಕೆ ಹೋಗುವಾಗಲೂ ಪಕ್ಷದಿಂದ ಆಗಲಿ, ನಾಯಕರಿಂದ ಆಗಲಿ ಬಿಡಿಕಾಸನ್ನು ಕೂಡ ಸ್ವೀಕರಿಸದೇ ತನ್ನ ಸ್ವಂತ expenseನಲ್ಲಿ ಓಡಾಡಿದ ಹರಿಕೃಷ್ಣರನ್ನು ಇವತ್ತಿನ ಅನೇಕ ನಾಯಕರು ಬೆಳಿಗ್ಗೆ ಎದ್ದ ಕೂಡಲೇ ಸ್ಮರಿಸಬೇಕು. ಅಂತಹ ವ್ಯಕ್ತಿತ್ವ ಹರಿಕೃಷ್ಣರದ್ದು.
ಆದರೆ ಆವತ್ತಿನ ಕಾಂಗ್ರೆಸ್ಸಿಗೂ ಇವತ್ತಿನ ಕಾಂಗ್ರೆಸ್ಸಿಗೂ ಅಜಗಜಾಂತರವಿದೆ. ಇಂದಿರಾ, ರಾಜೀವ್ ಕಾಲಘಟ್ಟ ಈಗ ಇಲ್ಲ. ಸೋನಿಯಾ ಗಾಂಧಿ ಕೂಡ ತಮ್ಮ ಶಸ್ತ್ರವನ್ನು ಮಗನ ಕೈಯಲ್ಲಿ ಕೊಟ್ಟು ನೇಪಥ್ಯಕ್ಕೆ ಸರಿಯಲು ಮುಹೂರ್ತ ಹುಡುಕುತ್ತಿದ್ದಾರೆ. ರಾಹುಲ್ ಗಾಂಧಿಯವರ ಸುತ್ತಲೂ ಇರುವ ಭಟ್ಟಂಗಿ ಪಡೆಗೆ ಹಿರಿಯರ ಬಗ್ಗೆ ಗೌರವವಿಲ್ಲ. ಅನೇಕರು ಹುಟ್ಟುವಾಗಲೇ ಬಂಗಾರದ ಚಮಚ ಬಾಯಲ್ಲಿಟ್ಟು ಹುಟ್ಟಿದವರು. ಅವರಿಗೆ ತಳಮಟ್ಟದ ಕಾರ್ಯಕರ್ತರ ಶ್ರಮದ ಅರಿವಿಲ್ಲ. ಉಳುವವನೆ ಭೂಮಿಯ ಒಡೆಯ ಹೋಗಿ ಅಧಿಕಾರದಲ್ಲಿದ್ದವರೇ ಎಲ್ಲಾ ಭೂಮಿಯ ಒಡೆಯರಾಗುತ್ತಿದ್ದಾರೆ. ಎಸ್ ಎಂ ಕೃಷ್ಣ ಅವರೇ ಕಾಂಗ್ರೆಸ್ಸ್ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದವರನ್ನು ನಡೆಸಿದ ರೀತಿಯಿಂದ ಬಸವಳಿದು ಬಿಜೆಪಿಗೆ ಬಂದಿದ್ದಾರೆ. ಜನಾರ್ಧನ ಪೂಜಾರಿ ಅವರು ಕಾಂಗ್ರೆಸ್ ಪಕ್ಷವನ್ನು ಸರಿ ಮಾಡಲು ಸಲಹೆ ಕೊಟ್ಟರೆ ಅದನ್ನು ಕಸದ ಬುಟ್ಟಿಗೆ ಹಾಕಿ ಆ ವ್ಯಕ್ತಿಯನ್ನು ಕಾಂಗ್ರೆಸ್ ಕಚೇರಿಗೆ ಸೇರಿಸಬೇಡಿ ಎಂದು ಹೇಳಿದ್ದು ಇದೇ ಕಾಂಗ್ರೆಸ್. ಅಂತಹ ಕಾಂಗ್ರೆಸ್ ನಲ್ಲಿ ಇರುವುದು ಒಂದೇ ಆಸ್ಪತ್ರೆಯ ವೆಂಟಿಲೇಟರ್ ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಮಲಗಿ ದಿನ ಎಣಿಸುವುದು ಒಂದೇ ಎಂದು ಹಲವರಿಗೆ ಗೊತ್ತಿದೆ.
ಹರಿಕೃಷ್ಣ ಬಂಟ್ವಾಳ್ ಅವರ ನೇರನುಡಿ ಕಾಂಗ್ರೆಸ್ ಪಕ್ಷದ ಹಲವರಿಗೆ ಹಿಡಿಸದೇ ಇದ್ದ ಕಾರಣ ದೇಶಸೇವೆ ಮಾಡಲು, ಜನರ ಸೇವೆ ಮಾಡಲು ಕಾಂಗ್ರೆಸ್ಸಿನಲ್ಲಿ ಅವಕಾಶ ಇಲ್ಲದ ಕಾರಣಕ್ಕಾಗಿ ಹರಿಕೃಷ್ಣ ಕಾಂಗ್ರೆಸ್ಸಿಗೆ ದೊಡ್ಡ ನಮಸ್ಕಾರ ಯಾವತ್ತೋ ಹಾಕಿ ಆಗಿದೆ. ನಿಸ್ವಾರ್ಥ ಸೇವೆಗಾಗಿ ಬದುಕು ಮುಡಿಪಾಗಿಟ್ಟ ಹರಿಕೃಷ್ಣ ಬಂಟ್ವಾಳ್ ಅವರ ಸೇವೆ, ಸಮಾಜ ಮುಖಿ ನಿಲುವು, ಕಾಳಜಿ ವ್ಯರ್ಥವಾಗಬಾರದು ಎನ್ನುವ ಆಶಯ ಪ್ರತಿಯೊಬ್ಬರದ್ದು. ಆ ಕಾರಣಕ್ಕಾಗಿ ಬಿಜೆಪಿ ಮುಖಂಡರ ಸತತ ಒತ್ತಾಯದಿಂದ ಬಂಟ್ವಾಳ್ ತನ್ನ ಮಾತೃಪಕ್ಷಕ್ಕೆ ಮರಳುತ್ತಿದ್ದಾರೆ.

0
Shares
  • Share On Facebook
  • Tweet It


bjpHarikrishna Bantwal


Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Naresh Shenoy July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Naresh Shenoy July 29, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search