• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಳ್ತಪ್ಪಿಸಿಕೊಂಡಿದ್ದ ಕಾಂಗ್ರೆಸ್‍ಗೆ ಮತ್ತೆ ಹೆಗಲೇರಲಿದೆ ಬೋಫೋರ್ಸ್ ಬೇತಾಳ

TNN Correspondent Posted On October 21, 2017


  • Share On Facebook
  • Tweet It

>> ರಾಜೀವ್ ಗಾಂಧಿ ಪಾಪದ ಕೂಸು ಬಗ್ಗೆ ಮರುತನಿಖೆಗೆ ಮೋದಿ ಸರ್ಕಾರ ಅನುಮತಿ ಕೊಡುವುದೇ?

>> ಹಿಂದುಜಾ ಸಹೋದರರ ಅಪರಾಧ ಸಾಬೀತಾಗುವುದೇ?

>> 2005ರಿಂದಲೇ ಸಿಬಿಐಗೆ ಅನುಮತಿ ನೀಡದೇ ಯುಪಿಎ ಸರ್ಕಾರ ಮೌನ ವಹಿಸಿದ್ದು ಯಾಕೆ?

ದೆಹಲಿ : ಸುಪ್ರೀಂಕೋರ್ಟ್‍ನಲ್ಲಿ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಆಡಳಿತದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ “ಬೋಫೋರ್ಸ್’ ಬಗ್ಗೆ ಮರುತನಿಖೆಗೆ ಅನುಮತಿ ನೀಡಲು ಸಿಬಿಐ ಮತ್ತೆ ಎಸ್‍ಎಲ್‍ಪಿ ನಡೆಸಲು ಮುಂದಾಗಿದೆ. ಅಂದರೆ ವಿಶೇಷ ಅರ್ಜಿ ಸಲ್ಲಿಸಿ ಕೋರ್ಟ್‍ನ ರಜಾವಧಿಯಲ್ಲಿ ವಿಚಾರಣೆಗೆ ನಡೆಸಲು ಮನವಿ ಮಾಡಲು ಸಿಬಿಐ ಕೇಂದ್ರ ಸರಕಾರದ ಅನುಮತಿ ಕೇಳಿದೆ. ಶುಕ್ರವಾರ ಕೇಂದ್ರೀಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಿಬಿಐ ಈ ಕುರಿತು ಪತ್ರ ಬರೆದಿದೆ.


2005ರಿಂದಲೂ ಸಿಬಿಐ ಎಸ್‍ಎಲ್‍ಪಿ ಸಲ್ಲಿಕೆಗೆ ಯುಪಿಎ ಸರಕಾರಕ್ಕೆ ಅನುಮತಿ ಕೋರುತ್ತಲೇ ಇತ್ತು. ಆದರೆ ತನ್ನ ಪ್ರಧಾನಿ ರಾಜೀವ್ ಹೆಸರು ಕೆಡುವ ಆತಂಕದಿಂದ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಆಡಳಿತ ಮೌನಕ್ಕೆ ಶರಣಾಗಿತ್ತು.

ಯುರೋಪ್‍ನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲಸಿರುವ ಹಿಂದುಜಾ ಸೋದರರ ವಿರುದ್ಧ ಬಫಫೋರ್ಸ್ ಹಗರಣದಲ್ಲಿ ದಾಖಲಾಗಿದ್ದ ಎಫ್‍ಐಆರ್ ದೆಹಲಿ ಹೈಕೋರ್ಟ್‍ನಿಂದ ಮೇ. 31, 2005ರಲ್ಲಿ ರದ್ದಾಗಿತ್ತು. ಇದನ್ನು ಎಸ್‍ಎಲ್‍ಪಿ ಸಲ್ಲಿಕೆಯಲ್ಲಿ ಪ್ರಶ್ನಿಸಲಾಗುತ್ತಿದೆ. ನಂತರ ದೆಹಲಿ ಹೈಕೋರ್ಟ್ ನ್ಯಾ. ಜೆ.ಡಿ.ಕಪೂರ್ ಬೋಫೋರ್ಸ್ ಹಗರಣದಲ್ಲಿ ಆರೋಪ ಕೇಳಿಬಂದಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನಿರಪರಾಧಿ ಎಂದು ತೀರ್ಪು ನೀಡಿದ್ದರು. ಅವರ ಸಹಿಯನ್ನು ಬೋಫೋರ್ಸ್ ಒಪ್ಪಂದದಲ್ಲಿ ನಕಲು ಮಾಡಲಾಗಿದೆ. ಅದರ ವಿರುದ್ಧ ತನಿಖೆಗೆ ಆದೇಶಿಸಿದ್ದರು.

ಪತ್ತೆದಾರಿ ಹೆರ್ಷ್‍ಮನ್ ಬಾಯ್ಬಿಟ್ಟ ಸ್ವಿಸ್ ಬ್ಯಾಂಕ್ ಸತ್ಯ 

ಇತ್ತೀಚೆಗೆ ಬೋಫೋರ್ಸ್ ಬಗ್ಗೆ ಅಂದಿನ ಹಣಕಾಸು ಸಚಿವ ವಿ.ಪಿ.ಸಿಂಗ್ ನೇಮಿಸಿದ್ದ ಅಮೆರಿಕ ಮೂಲದ ಖಾಸಗಿ ಪತ್ತೆದಾರಿ ಕಂಪನಿ ಫೇರ್‍ಫ್ಯಾಕ್ಸ್ ಮುಖ್ಯಸ್ಥ ಮೈಕೆಲ್ ಹೆರ್ಷ್‍ಮೆನ್ ಭಾರತಕ್ಕೆ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದರು. ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಅವರು,


” ನಾನು ನಡೆಸಿದ ಬೋಫೋರ್ಸ್ ಹಗರಣದ ಪತ್ತೆದಾರಿಯಲ್ಲಿ ಮಧ್ಯವರ್ತಿಯೊಬ್ಬನ ಸ್ವಿಸ್ ಬ್ಯಾಂಕ್ ಖಾತೆ “ಮಾಂಟ್ ಬ್ಲಾಂಕ್’ ಹೆಸರಲ್ಲಿರುವುದು ಪತ್ತೆ ಮಾಡಿದ್ದೆ. ಆದರೆ ಇದು ರಾಜೀವ್ ಗಾಂಧಿಗೆ ತುಂಬಾ ಅಸಮಾಧಾನ ಮೂಡಿಸಿತ್ತು. ನನ್ನ ತನಿಖೆಯನ್ನು ರಾಜೀವ್ ಸರಕಾರ ಮಟ್ಟಹಾಕಲು ಎಲ್ಲ ಯತ್ನ ನಡೆಸಿತ್ತು” ಎಂದು ಆರೋಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮರುತನಿಖೆ ಅನುಮತಿ ಕೇಳಿದೆ.

  • Share On Facebook
  • Tweet It


- Advertisement -
boforsbrotherscbidealenglandgandhihindujamanmohanmodindarajivsinghsoniaupa


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search