ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ನೀಲಮಣಿ.ಎನ್.ರಾಜು
Posted On November 1, 2017
>> ಬಿಜೆಪಿ ಪರಿವರ್ತನಾ ರ್ಯಾಲಿ, ಟಿಪ್ಪು ಜಯಂತಿ, ವಿಧಾನಸಭೆ ಚುನಾವಣೆ ಪೂರ್ವ ಸಮರ ನಿಭಾಯಿಸುವ ಜವಾಬ್ದಾರಿ
ಬೆಂಗಳೂರು : ರೂಪಕ್ ಕುಮಾರ್ ದತ್ತಾ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಸಾರಥ್ಯವಹಿಸಿದ್ದಾರೆ.
ಒಕ್ಕಲಿಗ ಲಾಬಿಯಿಂದ ಕಿಶೋರ್ ಚಂದ್ರ ಡಿಜಿಪಿಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳಾ ಪ್ರಾಧಾನ್ಯತೆ ದಾಳ ಉರುಳಿಸಿದ್ದಾರೆ.
ಡಿಜಿಪಿ ಹುದ್ದೆ ಆಕಾಂಕ್ಷಿಗಳಾಗಿದ್ದ ಎಂ.ಎನ್.ರೆಡ್ಡಿ ಮತ್ತು ಕಿಶೋರ್ ಚಂದ್ರ ಇಬ್ಬರೂ ನೀಲಮಣಿ ಪದಗ್ರಹಣ ಸಂದರ್ಭಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
1983ನೇ ಬ್ಯಾಚಿನ ಐಪಿಎಸ್ ಅಧಿಕಾರಿ ನೀಲಮಣಿ 13 ವರ್ಷ ಕೇಂದ್ರ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ರಾಜ್ಯ ಸರ್ಕಾರದ ಸೇವೆಗೆ ನಿಯೋಜಿತರಾಗಿದ್ದ ಅವರು ಪೊಲೀಸ್ ಠಾಣೆಗಳನ್ನು ಹೆಚ್ಚು ಮಹಿಳಾ ಸ್ನೇಹಿಯಾಗಿಸುವ ಕನಸು ಹೊಂಡಿದ್ದಾರೆ.
ಜನವರಿ 2020ರವರೆಗೆ ನೀಲಮಣಿ ಸೇವಾವಧಿಯಿದೆ.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply