• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

“ಧರ್ಮ ಸಂಸದ್” ಫ್ಲೆಕ್ಸ್ ತೆರವು ಮಾಡಿದ ಹಾಗೆ ಎಲ್ಲರದ್ದೂ ಮಾಡುತ್ತೀರಾ!

Hanumantha Kamath Posted On November 22, 2017


  • Share On Facebook
  • Tweet It

ಪರಿಸರ ಉಳಿಸುವ ವಿಷಯವನ್ನು ಕುರಿತು ಬರೆಯುತ್ತಿದ್ದ ಹಾಗೆ ಕಾಕತಾಳೀಯ ಎನ್ನುವುಂತೆ ಮನೆಮನೆಯಿಂದ ತ್ಯಾಜ್ಯ ಸಂಗ್ರಹಿಸುವವರು ಕೆಲಸ ನಿಲ್ಲಿಸಿದ್ದಾರೆ. ಈ ಮೂಲಕ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ ಎಂದು ಬರೆಯುವ ಮೊದಲು ಈ ಕಸ ತೆಗೆಯುವುದೇ ನಿಂತಿರುವಾಗ ಮತ್ತೆ ಪ್ಲಾಸ್ಟಿಕ್ ಯಾವ ಲೆಕ್ಕ. ತ್ಯಾಜ್ಯ ಸಂಗ್ರಹಣೆ ಆಗಾಗ ನಿಲ್ಲುವುದು ಮಂಗಳೂರಿಗೆ ಹೊಸತಲ್ಲ. ಮಂಗಳೂರು ಮಹಾನಗರ ಪಾಲಿಕೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ಕೊಡಬೇಕಾದ ಬಿಲ್ ಬಾಕಿ ಇಡುವುದು, ಪಾಲಿಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಆಂಟೋನಿಯವರು ತಮ್ಮ ಕೆಲಸದವರಿಗೆ ಸಂಬಳ ಕೊಡದೇ ಇರುವುದು, ಸಂಬಳ ತುಂಬಾ ದಿನಗಳಿಂದ ಬಂದಿಲ್ಲ ಎಂದು ಕೆಲಸದವರು ಕೆಲಸ ಮಾಡುವುದನ್ನು ನಿಲ್ಲಿಸುವುದು, ನಂತರ ಒಂದಿಷ್ಟು ಹಣ ಬಿಡುಗಡೆ ಮಾಡುವುದು, ಅದನ್ನು ಆಂಟೋನಿಯವರು ಕೆಲಸದವರಿಗೆ ನೀಡುವುದು ನಂತರ ಅವರು ಮತ್ತೆ ಕೆಲಸ ಪ್ರಾರಂಭಿಸುವುದು ನಡೆಯುತ್ತಾ ಇದೆ. ಯಾವಾಗ ಆಂಟೋನಿ ಮತ್ತು ಈಗ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿತ್ತೊ ಆವತ್ತಿನಿಂದ ತು-ತು-ಮೇ-ಮೇ ನಡೆಯುತ್ತಲೇ ಇದೆ. ಮಂಗಳೂರು ಆಗಾಗ ಹಾಳಾಗುತ್ತಲೇ ಇರುತ್ತದೆ. ಮತ್ತೆ ಅದನ್ನು ಚೆಂದ ಮಾಡಲು ಕಸರತ್ತು ಶುರುವಾಗುತ್ತದೆ.
ಉದಾಹರಣೆಗೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ಆಗಾಗ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮಾರುವ ಅಂಗಡಿಗಳ ಮೇಲೆ, ಉತ್ಪಾದಿಸುವವರ ಮೇಲೆ ಪಾಲಿಕೆ ರೇಡ್ ಮಾಡುತ್ತದೆ. ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಅದು ಮಾಧ್ಯಮಗಳಲ್ಲಿ ಬರುವುದು, ಅಲ್ಲಿಗೆ ಇವರ ಕೆಲಸ ಮುಗಿಯುತ್ತದೆ. ನಾನು ಹೇಳುವುದೇನೆಂದರೆ ಕೇವಲ ಉತ್ಪಾದಿಸುವವರ ಮತ್ತು ಆರಾಟ ಮಾಡುವವರ ಮೇಲೆ ಕ್ರಮ ತೆಗೆದುಕೊಂಡರೆ ಸಾಕಾಗುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಇದು ಗೊತ್ತಿದ್ದೂ ಸುಮ್ಮನೆ ಕುಳಿತುಕೊಂಡ ಅಧಿಕಾರಿಗಳು ಇರುತ್ತಾರಲ್ಲ, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಯಾರಿಗೂ ಗೊತ್ತಾಗದೇ ಪ್ಲಾಸ್ಟಿಕ್ ಬ್ಯಾನ್ಡ್ ಉತ್ಪನ್ನಗಳನ್ನು ಉತ್ಪಾದಿಸಲು ಅಥವಾ ಮಾರಲು ಆಗುವುದಿಲ್ಲ. ಆದರೆ ಅಧಿಕಾರಿಗಳು ಸಮ್ ಥಿಂಗ್ ತೆಗೆದುಕೊಂಡು ಮೌನವಾಗಿರುವುದರಿಂದ ಮಾರಾಟ, ಉತ್ಪಾದನೆ ರಾಜಾರೋಶವಾಗಿ ನಡೆಯುತ್ತದೆ.

ಇನ್ನೂ ಈ ಫ್ಲೆಕ್ಸ್ ಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ಕೂಡ ಬ್ಯಾನ್ ಆದ ಪಟ್ಟಿಯಲ್ಲಿ ಬರುತ್ತದೆ. ಆದರೆ ಇಂತಹುದೇ ಫ್ಲೆಕ್ಸ್ ಗಳಲ್ಲಿ ನಮ್ಮ ಮೇಯರ್, ಶಾಸಕರು ತಮ್ಮ ಫೋಟೋ ಹಾಕಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಶುಭಕೋರುವುದನ್ನು ಕಾಣುತ್ತೇವೆ. ಪರಿಷತ್ ಒಳಗೆ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದೇವೆ ಎಂದು ಹೇಳಿಕೆ ಕೊಡುವವ ನಮ್ಮ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಅದೇ ಪಾಲಿಕೆಯ ಎದುರುಗಡೆ, ಅಕ್ಕಪಕ್ಕದಲ್ಲಿ, ಹಿಂದಿನ , ಮುಂದಿನ ರಸ್ತೆಗಳಲ್ಲಿ ತಮ್ಮದೇ ಫೋಟೊ ಹೊಂದಿದ ಫ್ಲೆಕ್ಸ್ ನಿಲ್ಲಿಸುತ್ತಾರೆ. ಅದಕ್ಕೆ ಉತ್ತರ, ದಕ್ಷಿಣ ಶಾಸಕರು ಹೊರತಾಗಿಲ್ಲ. ಜನಪ್ರತಿನಿಧಿಗಳೇ ಹೀಗೆ ಮಾಡಿದ ಮೇಲೆ ಜನಸಾಮಾನ್ಯರಿಗೆ ಹೇಳಿ ಏನು ಪ್ರಯೋಜನ? ನಿನ್ನೆ ಪಾಲಿಕೆಯ ವ್ಯಾಪ್ತಿಯಲ್ಲಿ ಹಾಕಿದ್ದ ಉಡುಪಿಯ ಕಾರ್ಯಕ್ರಮವೊಂದರ ಫ್ಲೆಕ್ಸ್ ಗಳನ್ನು ಪಾಲಿಕೆ ತೆರವುಗೊಳಿಸಿದೆ. ಇದು ಎಲ್ಲ ಕಾರ್ಯಕ್ರಮಗಳೀಗೂ ಅನ್ವಯವಾದರೆ ಪರವಾಗಿಲ್ಲ. ಹಿಂದೂ ಸಂಘಟನೆಗಳ, ಭಾರತೀಯ ಜನತಾ ಪಾರ್ಟಿಯವರ ಕಾರ್ಯಕ್ರಮಗಳ ಫ್ಲೆಕ್ಸ್ ಬೇಗ ತೆರವುಗೊಳಿಸಿ ತಮ್ಮ ಪಕ್ಷ, ಸಂಘಟನೆಗಳ ನಾಯಕರ ಫ್ಲೆಕ್ಸ್ ಹಾಗೆ ತುಂಬಾ ದಿನ ಬಿಟ್ಟರೆ ಮಾತ್ರ ಇದರಲ್ಲಿ ಪಾಲಿಕೆಗೆ ಮಂಗಳೂರಿನ ಸೌಂದರ್ಯಕರಣಕ್ಕಿಂತ ವಿರೋಧಿಗಳನ್ನು ಹಳಿಯುವುದು ಹೆಚ್ಚು ಮುಖ್ಯ ಎನ್ನುವ ಭಾವನೆ ಬರುತ್ತದೆ.
ಇನ್ನು ಅನೇಕ ಜಾಹೀರಾತು ಕಂಪೆನಿಗಳು ತಾವು ಪರ್ಮಿಟ್ ತೆಗೆದುಕೊಂಡು ಹಾಕಿರುವ ಹೋರ್ಡಿಂಗ್ ನಲ್ಲಿಯೇ ಬ್ಯಾನ್ ಆದ ಪ್ಲಾಸ್ಟಿಕ್ ಅನ್ನು ಬಳಸುತ್ತಾರೆ. ಇದು ಅಕ್ಷರಶ: ತಪ್ಪು. ಆದರೆ ಪಾಲಿಕೆಯಲ್ಲಿ ಕೇಳುವವರಿಲ್ಲ. ಯಾಕೆಂದರೆ ಜಾಹೀರಾತು ಕಂಪೆನಿಗಳು ಪಾಲಿಕೆಯ ಅಧಿಕಾರಿಗಳನ್ನು “ಚೆನ್ನಾಗಿ” ಇಟ್ಟುಕೊಂಡಿರುತ್ತಾರೆ. ಯಾವುದಾದರೂ ಖಡಕ್ ಅಧಿಕಾರಿ ಬಂದು ಈ ಹೋರ್ಡಿಂಗ್ ನಲ್ಲಿ ಬ್ಯಾನ್ ಆಗಿರುವ ಪ್ಲಾಸ್ಟಿಕ್ ಪ್ರಮಾಣವನ್ನು ಬಳಸಲಾಗಿದೆ ಎಂದು ಎಚ್ಚರಿಕೆ ಕೊಟ್ಟು ತೆಗೆಸಿ ಹಾಕಲಿ ನೋಡೋಣ, ಆಗ ಎಲ್ಲವೂ ಸರಿಯಾಗುತ್ತದೆ. ನೀವು ಪ್ಲಾಸ್ಟಿಕ್ ಗೆ ಹಣ ಕೊಟ್ಟು ತೆಗೆದುಕೊಂಡು ಬಳಸುತ್ತಾ ಇರಬಹುದು. ಆದರೆ ಅದು ಪರಿಸರದಲ್ಲಿ ಉಂಟು ಮಾಡುವ ಅಪಾಯವನ್ನು ತಡೆಗಟ್ಟುವುದು ಯಾರು? ನಾವು ಹಣ ಇದೆ ಎಂದು ಗಂಡನಿಗೊಂದು, ಹೆಂಡತಿಗೊಂದು, ಮಗನಿಗೊಂದು, ಮಗಳಿಗೊಂದು ವಾಹನವನ್ನು ಖರೀದಿಸಿ ಅದನ್ನು ರಸ್ತೆಗೆ ಟ್ಯಾಕ್ಸ್ ಕಟ್ಟುತ್ತೇವೆ ಎನ್ನುವ ಅಹಂನಿಂದ ಚಲಾಯಿಸಬಹುದು. ಆದರೆ ಒಂದೊಂದು ವಾಹನ ಹೊರಗೆ ಬಿಡುವ ವಿಷಯುಕ್ತ ಅನಿಲವನ್ನು ತಡೆಹಿಡಿಯುವುದು ಯಾರು? ನಮ್ಮಲ್ಲಿ ವಾಹನ ಖರೀದಿಸುವಷ್ಟು ಹಣ ಇರಬಹುದು. ಆದರೆ ಹಾಳಾದ ಪರಿಸರವನ್ನು ಸರಿ ಮಾಡುವಷ್ಟು ಹಣ ಇಲ್ಲ. ಒಮ್ಮೆ ಪರಿಸರ ಹಾಳಾದರೆ ಎಷ್ಟೇ ಹಣ ಸುರಿದರೂ ಅದು ವಾಪಾಸ್ ಬರುವುದಿಲ್ಲ

  • Share On Facebook
  • Tweet It


- Advertisement -


Trending Now
ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?
Hanumantha Kamath December 9, 2023
ಪಾಲಕ್ಕಾಡಿನಲ್ಲಿ ನಡೆಯಿತು ರೈಲ್ವೆ ಬಳಕೆದಾರರ ಸಭೆ!
Hanumantha Kamath December 8, 2023
Leave A Reply

  • Recent Posts

    • ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?
    • ಪಾಲಕ್ಕಾಡಿನಲ್ಲಿ ನಡೆಯಿತು ರೈಲ್ವೆ ಬಳಕೆದಾರರ ಸಭೆ!
    • ಕೆಮ್ಮಿನ ಸಿರಫ್ ಎಂದು ಬಿಯರ್ ಮಾರಿ 42 ಕೋಟಿ ಸಂಪಾದನೆ!
    • ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
    • 9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!
    • ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
  • Popular Posts

    • 1
      ಮಾಹುಅ ಮೊಯಿತ್ರಾ ಅವರಿಗೆ ಸಿಕ್ಕಿಬೀಳಲ್ಲ ಎಂಬ ಧೈರ್ಯ ಇತ್ತಾ?
    • 2
      ಪಾಲಕ್ಕಾಡಿನಲ್ಲಿ ನಡೆಯಿತು ರೈಲ್ವೆ ಬಳಕೆದಾರರ ಸಭೆ!
    • 3
      ಕೆಮ್ಮಿನ ಸಿರಫ್ ಎಂದು ಬಿಯರ್ ಮಾರಿ 42 ಕೋಟಿ ಸಂಪಾದನೆ!
    • 4
      ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
    • 5
      9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search