• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನಲ್ಲಿ ಡ್ರಗ್ಸ್ ದಂಧೆ ನಿಂತರೆ ಅರ್ಧಕರ್ಧ ಲವ್ ಜಿಹಾದ್ ಕೂಡ ನಿಲ್ಲುತ್ತದೆ!

Hanumantha Kamath Posted On December 28, 2017


  • Share On Facebook
  • Tweet It

ನನ್ನ ಕನಸಿನ ಮಂಗಳೂರಿನಲ್ಲಿ ಲವ್ ಜಿಹಾದ್ ಇರಲೇಬಾರದು ಎಂದು ನಿನ್ನೆ ನಾನು ಬರೆದಿದ್ದೆ. ಹಾಗೆಂದ ಕೂಡಲೇ ನಾನು ಮುಸಲ್ಮಾನ ವಿರೋಧಿ ಅಂತ ಅರ್ಥ ಅಲ್ಲ. ಮಂಗಳೂರಿನಲ್ಲಿ ಮಧ್ಯಮ ವರ್ಗದ ಕನಿಷ್ಟ ಹತ್ತು ಜನ ಹೆಣ್ಣುಮಕ್ಕಳು ಈ ಪ್ರೀತಿಯ ಜಾಲಕ್ಕೆ ಬಿದ್ದು ಓಡಿ ಹೋಗಿ ಮುಸಲ್ಮಾನ ಹುಡುಗರನ್ನು ಮದುವೆಯಾಗಿ ಕನಿಷ್ಟ ಹತ್ತು ವರ್ಷ ಖುಷಿಯಾಗಿದ್ದರು ಎನ್ನುವ ಉದಾಹರಣೆಯನ್ನು ಯಾರಾದರೂ ಸಾಕ್ಷಿ ಸಮೇತ ತೋರಿಸಿದರೆ ಆಗ ಪ್ರೀತಿ, ಪ್ರೇಮದ ಹೆಸರಿನಲ್ಲಿ ಹಿಂದೂ ಹುಡುಗಿ, ಮುಸಲ್ಮಾನ ಹುಡುಗನೊಂದಿಗೆ ಓಡಿ ಹೋದರೆ ಅದಕ್ಕೆ ಲವ್ ಜಿಹಾದ್ ಎನ್ನುವ ಶಬ್ದ ಕೊಡುವುದು ಸರಿಯಲ್ಲ ಎಂದು ಹೇಳಬಹುದೇನೋ. ಆದರೆ ಅಂತಹ ಉದಾಹರಣೆಗಳು ಸಿಗುವುದಿಲ್ಲ. ಆದ್ದರಿಂದ ಲವ್ ಜಿಹಾದ್ ಆಗದಿದ್ದರೆ ಮಂಗಳೂರಿನಲ್ಲಿ ನಾವೆಲ್ಲ ಕೋಮು ಸಂಘರ್ಷ ಅಥವಾ ಪರಸ್ಪರ ಬೇರೆ ಬೇರೆ ಧರ್ಮದ ಹುಡುಗ, ಹುಡುಗಿ ಮಾತನಾಡಿದರೆ ಅನುಮಾನದಿಂದ ನೋಡುವುದು ನಿಲ್ಲಿಸಬಹುದು. ಈ ಡ್ರಗ್ಸ್ ಮಂಗಳೂರಿಗೆ ಬರುವುದು ನೂರಕ್ಕೆ ಎಂಭತ್ತರಷ್ಟು ಕಡಿಮೆಯಾದರೆ ಅರ್ಧಕರ್ಧ ಲವ್ ಜಿಹಾದ್ ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಡ್ರಗ್ಸ್ ಜಾಲವನ್ನು ವ್ಯವಸ್ಥಿತವಾಗಿ ಮಟ್ಟಹಾಕಲು ನಮ್ಮ ಜನಪ್ರತಿನಿಧಿಗಳು, ಪೊಲೀಸರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಡ್ರಗ್ಸ್ ನ ಕರಾಳ ಬಾಹುವಿಗೆ ಮುಂದೊಂದು ದಿನ ತನ್ನ ಮಗ ಅಥವಾ ಮಗಳು ಕೂಡ ಬಲಿಯಾಗಬಹುದು ಎನ್ನುವ ಆತಂಕ ಒಬ್ಬ ರಾಜಕಾರಣಿಗೆ ಅಥವಾ ಪೊಲೀಸ್ ಅಧಿಕಾರಿಗೆ ಬಂದರೆ ಡ್ರಗ್ಸ್ ಒಳಗೆ ಬರಲು ಸಾಧ್ಯವೇ ಇಲ್ಲ.

ನಂತರ ನನ್ನ ಕನಸಿನ ಮಂಗಳೂರು ಹೇಗಿರಬೇಕು ಎಂದರೆ ಭ್ರಷ್ಟಾಚಾರ ಸಂಪೂರ್ಣವಾಗಿ ನಿಲ್ಲಬೇಕು. ನೀವು ಬ್ರೋಕರ್ ಗಳನ್ನು ಹಿಡಿದು ಅವರ ಮೂಲಕ ಸರಕಾರಿ ಕೆಲಸಗಳನ್ನು ಮಾಡುವುದು ನಿಲ್ಲಿಸಬೇಕು. ನಿಮ್ಮ ಕೆಲಸಗಳನ್ನು ನೀವೆ ಮಾಡಿ. ಯಾವ ಸರಕಾರಿ ಇಲಾಖೆಯಲ್ಲಿಯೂ ಲಂಚ ಕೊಡಬೇಡಿ. ನೀವು ಸರಿಯಿದ್ದರೆ ಲಂಚ ಕೊಡುವ ವಿಷಯವೇ ಬರುವುದಿಲ್ಲ. ಲಂಚ ಕೊಡದೇ ಕೆಲಸ ಆಗುವುದಿಲ್ಲ ಎಂದು ಗೊತ್ತಾದರೆ ಆ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಡಿ. ಫೇಸ್ ಬುಕ್ಕಿನಲ್ಲಿ ಬರೆದು ಆಯಾ ಅಧಿಕಾರಿಗಳ ಹೆಸರು ಹಾಕಿ. ಒಂದೆರಡು ಸಲ ಹೀಗೆ ಆದರೆ ಅಧಿಕಾರಿಗಳು ಕೂಡ ಲೈನಿಗೆ ಬರುತ್ತಾರೆ. ಇನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡಿನಲ್ಲಿ ಒಂದೊಂದು ವಾರ್ಡ್ ಕಮಿಟಿಯ ನೇಮಕವಾಗಲೇಬೇಕು. ಹೀಗೆ ಆದಾಗ ಅರ್ಧ ಮಂಗಳೂರು ತನ್ನಿಂದ ತಾನೆ ಭ್ರಷ್ಟಾಚಾರದಿಂದ ಕ್ಲೀನ್ ಆಗುತ್ತದೆ. ಪಾಲಿಕೆಯ ಸದಸ್ಯರಾಗಲು ಪೈಪೋಟಿ ಇರುವುದಿಲ್ಲ. ಪಾಲಿಕೆಯ ಕಾಮಗಾರಿಗಳನ್ನು ತೆಗೆದುಕೊಳ್ಳಲು ಗುತ್ತಿಗೆದಾರರದ್ದೇ ಈಗ ಇರುವ ಮೈತ್ರಿಕೂಟ ಒಡೆದುಹೋಗುತ್ತದೆ. ಯಾವ ಗುತ್ತಿಗೆದಾರ ಕೂಡ ಶಾಸಕರ, ಪಾಲಿಕೆಯ ಸದಸ್ಯರ ಹಿಂದೆ ಮುಂದೆ ಓಡಾಡಬೇಕಾಗುವುದಿಲ್ಲ. ನಿಮ್ಮ ಏರಿಯಾ ಸಮಾನ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತದೆ. ಇದರ ನಂತರ ಪಾಲಿಕೆಯ ಸದಸ್ಯರು ಎಂದರೆ ಗುತ್ತಿಗೆದಾರರ, ಅಧಿಕಾರಿಗಳ ಪರಮಾಪ್ತರು ಎನ್ನುವುದು ಹೋಗಿ ತಮ್ಮ ವಾರ್ಡಿನ ವಾರ್ಡ್ ಕಮಿಟಿಯ ಅಧ್ಯಕ್ಷರು ಎನ್ನುವುದು ಮಾತ್ರ ಉಳಿಯುತ್ತದೆ. ಹೀಗೆ ನನ್ನ ಕನಸಿನ ಮಂಗಳೂರು ಗರಿಬಿಚ್ಚಿ ಹಾರಾಡಲು ಶುರುವಾಗುತ್ತಿದೆ.

ಅದರೊಂದಿಗೆ ಮಂಗಳೂರು ರಾಮರಾಜ್ಯವಾಗಬೇಕು ಎನ್ನುವುದು ನನ್ನ ಮತ್ತೊಂದು ಕನಸು. ಹಾಗೆಂದ ಕೂಡಲೇ ಎಲ್ಲಾ ಮುಸಲ್ಮಾನರನ್ನು ಗಡಿಪಾರು ಮಾಡಬೇಕು ಎಂದಲ್ಲ. ನಾನು ಹೇಳುತ್ತಿರುವುದು ಮಹಾತ್ಮ ಗಾಂಧಿಯವರ ರಾಮರಾಜ್ಯ ಅಂದರೆ ನಟ್ಟನಡು ರಾತ್ರಿಯಲ್ಲಿ ಯುವತಿಯೊಬ್ಬಳು ಮಂಗಳೂರಿನ ಯಾವುದೇ ಗಲ್ಲಿಯಲ್ಲಿ ಧೈರ್ಯದಿಂದ ನಡೆದುಕೊಂಡು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕು. ಈಗಲೂ ಶನಿವಾರ ಮತ್ತು ಭಾನುವಾರ ಮಂಗಳೂರಿನ ಪ್ರಖ್ಯಾತ ಹೋಟೇಲುಗಳಿಂದ ನಡುರಾತ್ರಿ ಮೊಣಕಾಲಿನ ಮೇಲಿನ ತನಕ ಮಾತ್ರ ಬಟ್ಟೆ ಧರಿಸಿದಂತಹ ಹುಡುಗಿಯರು ಧೈರ್ಯದಿಂದ ಹೊರಗೆ ಬಂದು ನಡೆದುಕೊಂಡು ಹೋಗುವಂತಹ ವಾತಾವರಣ ಇದೆ. ಅವಳು ಕಂಠಪೂರ್ಥಿ ಕುಡಿದಿರುವುದರಿಂದ ಅವಳ ಧೈರ್ಯ ಬೇರೆ. ಒಂದು ವೇಳೆ ಅವಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅದನ್ನು ಅವಳು ಸುದ್ದಿ ಮಾಡುವುದಿಲ್ಲ. ಆದರೆ ನಾನು ಹೇಳುತ್ತಿರುವುದು ಅಂತಹ ಧೈರ್ಯದ ವಿಷಯವಲ್ಲ. ಸಾಮಾನ್ಯ ಹೆಣ್ಣುಜೀವವೊಂದು ಅಗತ್ಯ ಅಥವಾ ಅನಿವಾರ್ಯ ಎಂದು ಬಂದಾಗ ಹೇಗೆ ಹಗಲಲ್ಲಿ ನಡೆದುಕೊಂಡು ಹೋಗುತ್ತಾಳೋ ಹಾಗೆ ರಾತ್ರಿ ಕೂಡ ಹೋಗುವಂತಹ ಪರಿಸರ ನಮಗೆ ಬೇಕು.

ಇನ್ನು ಮಂಗಳೂರಿನಲ್ಲಿ ಗಾರ್ಡನ್ ಗಳು ಹೆಚ್ಚೆಚ್ಚು ನಿರ್ಮಾಣವಾಗಬೇಕು. ಯಾವುದೇ ಹೊಸ ಲೇಔಟ್ ನಿರ್ಮಾಣ ಮಾಡುವ ಸಮಯದಲ್ಲಿ ಅದರ ನಿರ್ಮಾಣದ ಹೊಣೆ ಹೊತ್ತುಕೊಂಡಿರುವವರು ನಕ್ಷೆಯಲ್ಲಿ ಇಂತಿಂಷ್ಟು ಜಾಗದಲ್ಲಿ ಉದ್ಯಾನವನ ಇರುತ್ತದೆ ಎಂದು ನಮೂದಿಸಿರುತ್ತಾರೆ. ಆದರೆ ವಾಸ್ತವದಲ್ಲಿ ಉದ್ಯಾನವನದ ಜಾಗದಲ್ಲಿ ಒಂದು ಗರಿಕೆ ಹುಲ್ಲನ್ನು ಕೂಡ ಅವರು ಬೆಳೆದಿರುವುದಿಲ್ಲ. ಕಾರಣ ಕೇಳುವವರು ಇರುವುದಿಲ್ಲ. ವಸತಿ ಸಮುಚ್ಚಯದ ಎಂದು ಕಟ್ಟುವಾಗ ಕಡ್ಡಾಯವಾಗಿ ಒಂದಿಷ್ಟು ಜಾಗದಲ್ಲಿ ಉದ್ಯಾನವನ ಇರುವಂತೆ ಪಾಲಿಕೆ ನೋಡಿಕೊಂಡರೆ ಮಂಗಳೂರು ಚೆಂದ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ರಸ್ತೆಯ ಬದಿಯಲ್ಲಿ ಮೈಚಾಚಿ ಬೆಳೆದಿರುವ ಅನೇಕ ಮರಗಳು ರಸ್ತೆ ಅಗಲೀಕರಣದ ನೆಪದಲ್ಲಿ ಧರೆಗೆ ಉರುಳುತ್ತಿವೆ. ಮರಗಳ ಮಾರಣ ಹೋಮ ನಿಲ್ಲಬೇಕು. ಆದಷ್ಟು ಕಡಿಮೆ ಪ್ರಮಾಣದಲ್ಲಿ ಮರಗಳನ್ನು ಕಡಿಯುವಂತಹ ಪ್ರಕ್ರಿಯೆ ನಡೆಯಬೇಕು. ಒಂದು ವೇಳೆ ಕಡಿಯಲೇಬೇಕು ಎನ್ನುವುದಾದರೆ ಒಂದು ಕಡಿದರೆ ಎರಡು ಗಿಡ ನೆಡುವುದಕ್ಕೆ ಮತ್ತು ಅದು ಮರವಾಗಿ ಬೆಳೆಯುವ ತನಕ ತಮ್ಮ ಮನೆಯ ಮಕ್ಕಳನ್ನು ನೋಡುವಂತೆ ಕಡಿಸಿದವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಇನ್ನು ಹಸಿರು ಮಂಗಳೂರು ಆಗಬೇಕಾದರೆ ನಗರದೊಳಗೆ ಇರುವ ರಸ್ತೆಗಳ ಅಗಲದ ಡಿವೈಡರ್ ಗಳ ಮೇಲೆ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸಬೇಕು. ಹಿಂದೆ ಆದರೆ ಮೇ 15 ರಿಂದಲೇ ಮಳೆ ಪ್ರಾರಂಭವಾಗುತ್ತಿತ್ತು. ನವೆಂಬರ್ 15 ರ ತನಕ ಮಳೆ ಬರುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗಿರುವಾಗ ನಗರದೊಳಗೆ ಹಸಿರು ಕಾಣುವುದು ಕಡಿಮೆ. ಆ ನಿಟ್ಟಿನಲ್ಲಿ ಹಸಿರು ಮಂಗಳೂರು ಮಾಡಲು ಮುಂದೆ ಬರುವ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಹಾಗೂ ಪ್ರಯತ್ನ ಕೂಡ ಪಡಬೇಕು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search