• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಕ್ರಮ ಬಾಂಗ್ಲಾ ನುಸುಳುಕೋರರ ಪತ್ತೆಗೆ ದೃಢ ನಿರ್ಧಾರ, ಪಶ್ಚಿಮ ಬಂಗಾಳದ ದಿದಿ ಕಲಿಯಬೇಕಿದೆ ಪಾಠ

TNN Correspondent Posted On January 2, 2018
0


0
Shares
  • Share On Facebook
  • Tweet It

ಗುವಾಹಟಿ: ಅಸ್ಸಾಂನಲ್ಲಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ಪತ್ತೆ ಹಚ್ಚಲು ಅಸ್ಸಾಂ ಸರ್ಕಾರ ಬಹು ನಿರೀಕ್ಷಿತ ‘ಕಾನೂನು ಬದ್ಧ ನಾಗರಿಕರ ಪಟ್ಟಿಯ ಪ್ರಥಮ ಕರಡನ್ನನು ಬಿಡುಗಡೆ ಮಾಡಿದೆ. ಈ ಮೂಲಕ ಅಕ್ರಮವಾಗಿ ನುಸುಳಿರುವವರನ್ನು ಗಡಿಪಾರು ಮಾಡುವ ಚಿಂತನೆ ಅಸ್ಸಾಂ ಸರ್ಕಾರಕ್ಕೆ ಇದೆ.

‘ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌’ (ಎನ್‌ರ್‌ಸಿ) ಕರಡು ಪ್ರತಿಯ ಪ್ರಥಮ ಭಾಗದಲ್ಲಿ ಒಟ್ಟು 3.26 ಕೋಟಿ ಜನರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1.9 ಕೋಟಿ ಜನರ ಹೆಸರುಗಳು ಮಾತ್ರ ಇವೆ. ಆದರೆ ‘ಈ ಪಟ್ಟಿಯಲ್ಲಿ ಹೆಸರು ಇರದವರು ಭಯ ಪಡಬೇಕಿಲ್ಲ. ಉಳಿದ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಅಂತಿಮ ಪಟ್ಟಿ ಸಿದ್ಧವಾಗುವವರೆಗೆ ತಾಳ್ಮೆಯಿಂದಿರಬೇಕು ಎಂದು ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಶೈಲೇಶ್‌ ಹೇಳಿದ್ದಾರೆ.

ಮೊದಲನೇ ಕರಡು ಪ್ರತಿಯಲ್ಲಿ ಹೆಸರಿಲ್ಲದವರು ಹಿಂಸೆಗೆ ತೊಡಗಬಹುದು ಎಂಬ ಆತಂಕದಿಂದ ರಾಜ್ಯಾಧ್ಯಂತ ಬಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪಶ್ಚಿಮ ಬಂಗಾಳ ಸಿಎಂ ಮಮತಾಗೆ ಮಾದರಿ..?

ಕೇವಲ ಅಸ್ಸಾಂ ಅಷ್ಟೇ ಅಲ್ಲ ದೇಶದ ಹಲವು ರಾಜ್ಯಗಳು ಅಕ್ರಮ ಬಾಂಗ್ಲಾ ನಿವಾಸಿಗಳಿಂದ ತೊಂದರೆಗೆ ಈಡಾಗಿವೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳ ಕೀಟಲೆ, ಅನಾಚಾರ ಮಿತಿ ಮೀರಿದೆ. ಅವರ ಅಟ್ಟಹಾಸವನ್ನು ತಡೆಯಲು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಅಸ್ಸಾಂ ಕೈಗೊಂಡಿರುವ ನಿರ್ಧಾರದಂತೆ, ಪಶ್ಚಿಮ ಬಂಗಾಳವು ಕ್ರಮ ಕೈಗೊಂಡರೆ ಮೂಲ ನಿವಾಸಿಗಳಿಗೆ ಬಲ ಬರಲಿದೆ.

ಅಕ್ರಮ ನುಸುಳುಕೋರರಿಗೆ ಭೀತಿ

1971ರಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದು ಜೀವನ ನಡೆಸುತ್ತಿರುವವರಿಗೆ ಈ ಪರಿಶೀಲನೆ ಕಾರ್ಯ ಭೀತಿ ಹುಟ್ಟಿಸಿದೆ. ಅಲ್ಲದೇ ಅಕ್ರಮ ವಾಸಿಗಳನ್ನು ಪತ್ತೆ ಹಚ್ಚಿ ಅಸ್ಸಾಂನಿಂದ ಹೊರ ಹಾಕುವ ಕಾರ್ಯವು ಸರ್ಕಾರ ಮಾಡಲಿದೆ ಎನ್ನಲಾಗಿದ್ದು, ಇದರಿಂದ ಅಕ್ರಮ ವಾಸಿಗಳು ಗಡಿಪಾರಾಗಿ, ಮೂಲ ನಿವಾಸಿಗಳಿಗೆ ಸೂಕ್ತ ಸೌಲಭ್ಯಗಳು ದೊರೆಯುವ ವಿಶ್ವಾಸ ಮೂಡಿದೆ.

ಎರಡನೇ ಬಾರಿ ಪರಿಷ್ಕರಣೆ

ಭಾರತದ ಸ್ವಾತಂತ್ರ್ಯದ ಬಳಿಕ 1951ರಲ್ಲಿ ಮೊದಲ ಬಾರಿ ಅಸ್ಸಾಂನ ಎನ್ ಆರ್ ಸಿ ಪರಿಷ್ಕರಣೆಯಾಗಿತ್ತು. ನಂತರ ಇದೇ ಮೊದಲ ಬಾರಿ ಪರಿಷ್ಕರಣೆಯಾಗುತ್ತಿದ್ದು. ಮಾ. 25, 1971ರ ನಂತರ ಅಸ್ಸಾಂಗೆ ಬಾಂಗ್ಲಾದೇಶದಿಂದ ಆಕ್ರಮವಾಗಿ ವಲಸೆ ಬಂದವರನ್ನು ಗುರುತಿಸಿ ಹೊರ ಹಾಕುವ ಗುರಿ ಈ ಪರಿಷ್ಕರಣೆ ಹೊಂದಿದೆ.

ಹೆಸರು ಸೇರಿಸಲು ಅವಕಾಶ

1951ರ ‘ಎನ್‌ಆರ್‌ಸಿ’ನಲ್ಲಿರುವ ಅಥವಾ ಮಾ.25,1971ರ ತನಕದ ಮತದಾರರ ಪಟ್ಟಿಯಲ್ಲಿರುವವರು ಕುಟುಂಬ ಸದಸ್ಯರ ಜತೆ ತಮ್ಮ ಸಂಬಂಧವನ್ನು ದೃಢೀಕರಿಸಲು ಸಾಧ್ಯವಾದರೆ ಅಂತಹವರ ಹೆಸರುಗಳನ್ನು ಪರಿಷ್ಕೃತ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ರಾಜ್ಯಾದ್ಯಂತ  ಕರಡಿನಲ್ಲಿರುವ ಹೆಸರುಗಳನ್ನು ಪರಿಶೀಲಿಸಲು 4,200 ಎನ್‌ಆರ್‌ಸಿ ಕೇಂದ್ರಗಗಳನ್ನು ಸ್ಥಾಪಿಸಲಾಗಿದೆ.

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪರಿಷ್ಕರಣೆ ನಡೆಯುತ್ತಿದ್ದು, ಪೂರ್ಣ ‘ಎನ್‌ರ್‌ಸಿ’ ಕರಡು ಪ್ರತಿ ಬಿಡುಗಡೆಗೆ ಅಂತಿಮ ಗಡುವು ವಿಧಿಸಿಲ್ಲ. ಆದ್ದರಿಂದ ಪ್ರಕ್ರಿಯೆ ಇನ್ನು ಕೆಲ ತಿಂಗಳಲ್ಲಿ ಮುಗಿಯಲಿದೆ ಎಂದು ಅಂದಾಜಿಸಲಾಗಿದೆ.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search