ದಲಿತ ಜಾತಿ ಹೋರಾಟಗಾರ ಮೇವಾನಿ ಎಂದಾದರೂ ಭರವಸೆಯ ನಾಯಕನಂತೆ ವರ್ತಿಸಿದ್ದಾನಾ..?
ದಲಿತರ ಹೋರಾಟದ ಹೆಸರಲ್ಲಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ಜಿಗ್ನೇಶ್ ಮೇವಾನಿ ಒಬ್ಬ ಪ್ರೌಢ ರಾಜಕಾರಣಿಯಾ,,? ಪ್ರಬುದ್ಧ ಹೋರಾಟಗಾರರನಾ..? ಎಂಬ ಪ್ರಶ್ನೆಗಳು ಸದಾ ಜನರಲ್ಲಿ ಮೂಡುತ್ತಿವೆ. ಇನ್ನು ಮೇವಾನಿ ತನ್ನ ಹೋರಾಟದ ಆರಂಭದಿಂದ ಇಂದಿನವರೆಗೂ ಒಂದೇ ಒಂದು ಪ್ರಬುದ್ಧ ಮಾತನಾಡದೇ ಕಪಟತನ ತೋರಿಸಿದ್ದಾರೆ. ಮೇವಾನಿ ದಲಿತರ ನಾಯಕನೆಂಬ ಪಟ್ಟವನ್ನು ಹೇಗೆ ಬಳಸಿಕೊಂಡ. ಆದರೆ ಎಂದಿಗೂ ದಲಿತರ ವಾಸ್ತವ ನೋವಿನ ಬಗ್ಗೆ ಮಾತನಾಡಲಿಲ್ಲ. ಮತ್ತದೇ ಹಳೆ ಸರಕು ಅಸಮಾನತೆ, ಅಸ್ಪೃಷ್ಯತೆ ಎನ್ನುತ್ತಾ ಭಾಷಣ ಬೀಗಿಯುತ್ತಲೇ ಹೋದರು, ಮೇವಾನಿ ನಾಯಕತ್ವದ ಎಷ್ಟು ಅತೃಪ್ತವಾದದ್ದು ಎನ್ನುವುದಕ್ಕೆ ಈ ಉದಾಹರಣೆಗಳೇ ಸಾಕ್ಷಿ.
- ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ, ಕಲ್ಲೆಸಿಯಿರಿ, ಕೋಲು ಹಿಡಿದು ನಮ್ಮ ನ್ಯಾಯಕ್ಕಾಗಿ ಹೋರಾಡಿ ಎಂದು ಹೇಳಿಕೆ ನೀಡಿ, 200 ವರ್ಷಗಳಿಂದ ಶಾಂತಿಯುತವಾಗಿ ಆಚರಿಸಿಕೊಂಡು ಬಂದಿರುವ ವಿಜಯೋತ್ಸವಕ್ಕೆ ಗಲಭೆಯ ಸೃಷ್ಟಿಸಿದವರು ಜಿಗ್ನೇಶ್ ಮೇವಾನಿ ಮತ್ತು ತಂಡ.
- ಮಹಾರಾಷ್ಟ್ರದಲ್ಲಿ ದಲಿತರ ಸಮಾವೇಶದಲ್ಲಿ ಮಾತನಾಡುತ್ತಾ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ನಿಂಧಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡವನು ಜಿಗ್ನೇಶ್ ಮೇವಾನಿ.
- ಸಂದರ್ಶನವೊಂದರಲ್ಲಿ ನಾನು ಅಂಬೇಡ್ಕರ್ ಅವರ ತತ್ತ್ವಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಎಲ್ಲವೂ ಅವರು ಹೇಳಿದಂತೆ ಪಾಲಿಸಲು ಆಗುವುದಿಲ್ಲ. ಅಂಬೇಡ್ಕರ್ ಅವರೇ ಕೊನೆಯಲ್ಲ. ನಾವು ಬದಲಾಗುತ್ತಿವೆ ಅವರ ಮಾತನ್ನು ಪಾಲಿಸುವುದಿಲ್ಲ ಎಂದ ಮೇವಾನಿ
- ಪತ್ರಕರ್ತರ ಸಂವಾದದಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಯ ವರದಿಗಾರರ ಮೇಲೆ ಹಲ್ಲೆ ನಡೆಸಿ, ಪ್ರತಿಕ್ರಿಯೆ ನೀಡದೇ ಓಡಿ ಹೋದ ಜಿಗ್ನೇಶ್ ಮೇವಾನಿ.
- ವಿಶ್ವವೇ ಗೌರವಿಸುವ, ಅತ್ಯಂತ ಕ್ರಿಯಾಶೀಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಯಸ್ಸಾಗಿದೆ, ಅವರು ಏನೇನೋ ಮಾತನಾಡುತ್ತಾರೆ ಎಂದು ತನ್ನ ಅಲ್ಪಮತಿಯನ್ನು ತೋರಿಸಿದವ ಮೇವಾನಿ.
- ಮಾಧ್ಯಮ ಸಂವಾದದಲ್ಲಿ ರಾಹುಲ್ ಗಾಂಧಿಯ ಸಂಗಡಿಗರನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ಮತ್ತು ಬಿಜೆಪಿ ವಿರುದ್ಧ ಮಸಲತ್ತು ನಡೆಸಿದ ಮೇವಾನಿ.
- ಯಾವುದೇ ರಾಜ್ಯಕ್ಕೆ ಹೋಗಲಿ, ಯಾವುದೇ ಸಮಾವೇಶವಿರಲಿ ಕೇವಲ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ನಿಂದಿಸುವುದೇ ಕಾರ್ಯ ವಾಗಿಸಿಕೊಂಡು ತನ್ನ ಜವಾಬ್ದಾರಿ ಮರೆತಿರುವ ಮೇವಾನಿ.
- ಕರ್ನಾಟಕದಲ್ಲಿ ಪ್ರವಾಸದ ವೇಳೆ ವಿಜಯಪುರದಲ್ಲಿ ದಲಿತ ಯುವತಿ ದಾನಮ್ಮಳ ಸಾವಿಗೆ ಮಿಡಿಯದೇ, ಒಂದು ಸಂತಾಪ ಸೂಚಿಸದೇ ನನ್ನದು ಕಾಟಾಚಾರದ ದಲಿತ ಪ್ರೀತಿ. ನಾನು ಕೇವಲ ಬಿಜೆಪಿ ವಿರುದ್ಧ ಭಾಷಣ ಮಾಡುವ ಸಮಾವೇಶದಲ್ಲಿ ಮಾತಾಡುವ ಸೋಗಲಾಡಿ ಎಂಬುದು ಸಾಬೀತುಪಡಿಸಿದ್ದ ಮೇವಾನಿ…
- ತನ್ನ ಮೂಲ ದಲಿತ ಹೋರಾಟವನ್ನು ಮರೆತು ಹಾರ್ದಿಕ್, ಕಾಂಗ್ರೆಸ್ ಜತೆ ಕೈ ಜೋಡಿಸಿ ಎಡಬಿಡಂಗಿತನ ಪ್ರದರ್ಶಿಸಿದ ಮೇವಾನಿ.
- ಭಾರತವನ್ನು ತುಂಡು ತುಂಡಾಗಿ ಮಾಡುತ್ತೇವೆ ಎನ್ನುವ ಗ್ಯಾಂಗಿನವರಾದ ಉಮರ್ ಖಲೀದ್, ಕನ್ನಯ್ಯ ಕುಮಾರ್ ನಂತಹವರನ್ನು ಸದಾ ಜತೆಯಲ್ಲಿಟ್ಟುಕೊಂಡು ತಿರುಗುವ ಜಿಗ್ನೇಶ್ ಮೇವಾನಿ…
ಗುಜರಾತ್ ನಿಂದ ದಲಿತರ ಸಮಸ್ಯೆ ನೀಗಿಸಲು, ದಲಿತರನ್ನು ಪ್ರತಿಬಿಂಬಿಸಲು ಹೊಸ ಶಕ್ತಿಯೊಂದು ಭರವಸೆ ಹುಟ್ಟಿಸಿದವ ಮೇನಾನಿ ಆದರೆ ಇತ್ತೀಚೆಗೆ ಜಿಗ್ನೇಶ್ ಮೇವಾನಿ ದಲಿತರ ಹೆಸರಲ್ಲಿ ಮಾದ್ಯಮಗಳಿಗಿರುವ ಒಂದು ಸರಕು ಹೊರತೇ, ದಲಿತರಿಗೆ ಆತ ತೋರಿಸಿದ್ದ ಮಾರ್ಗ, ಬಿತ್ತುತ್ತಿರುವ ಚಿಂತನೆಗಳು ಮಾತ್ರ ದೇಶಕ್ಕೆ ಅಪಾಯ ತಂದಿಡುವಂತವು ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಸಾಬೀತಾಗುತ್ತಿದೆ.
ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ತೆಗಳುವುದು ಸೇರಿ ಥೇಟ್ ರಾಹುಲ್ ಗಾಂಧಿಯಂತೆ ವರ್ತಿಸಿ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ಜಿಗ್ನೇಶ್ ಮೇವಾನಿ ಪದೇ ಪದೆ ತೋರಿಸುತ್ತಿದ್ದಾರೆ. ಅಲ್ಲದೇ ಜನರನ್ನು ದಲಿತರ ಹೆಸರಲ್ಲಿ, ಬುದ್ದಿಜೀವಿಗಳ ಹೆಸರಲ್ಲಿ ಮರಳು ಮಾಡಿ ಸಮಾವೇಶದ ನೆಪದಲ್ಲಿ ಮುಖಭಂಗವನ್ನು ಅನುಭವಿಸುತ್ತಿದ್ದಾರೆ.
ಇಂತಹ ಮೇವಾನಿಯನ್ನು ದಲಿತರು ತಮ್ಮ ಭವಿಷ್ಯದ ನಾಯಕ ಎಂದು ಒಪ್ಪಿಕೊಳ್ಳಬೇಕೇ..? ಉತ್ತರ ಪ್ರದೇಶದಲ್ಲಿ ಮಾಯಾವತಿ ತಕ್ಕ ಮಟ್ಟಿಗಾದರೂ ದಲಿತರ ಸ್ವಾಭಿಮಾನ ಕಾಪಾಡುತ್ತಿದ್ದಾರೆ, ಮಹಾರಾಷ್ಟ್ರದಲ್ಲಿ ಅಠಾವಳೆ ತಮ್ಮ ಅಸ್ತಿತ್ವವನ್ನು ಕಾಪಾಕೊಂಡು ಬಂದಿದ್ದು, ದಲಿತರ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ, ತಕ್ಕ ಆಗ್ರಹ ಉತ್ತರ ನೀಡುತ್ತ ಬಂದಿದ್ದಾರೆ. ಆದರೆ ಮೇವಾನಿ ಇದುವರೆಗೆ ಒಂದು ಬಾರಿಯೂ ದಲಿತರ ಅಭಿವೃದ್ಧಿ, ಹಕ್ಕುಗಳ ರಕ್ಷಣೆಯ ಬಗ್ಗೆ ಬಲವಾಗಿ ಮಾತನಾಡಿದ್ದು, ಕಂಡಿಲ್ಲ. ಮಾತಾಡಿದರೂ ಅದರಲ್ಲಿ ನಾಟಕೀಯತೆ, ರಾಜಕೀಯ ಸ್ವಾರ್ಥವೇ ಹೆಚ್ಚು ಕಾಣಿಸುತ್ತಿತ್ತು.
ಅಭಿವೃದ್ಧಿ ಬಗ್ಗೆ ಮಾತನಾಡಿ ಮೇವಾನಿ…!
ದೇಶದಲ್ಲಿ ದಲಿತರು ಸಂಕಷ್ಟದಲ್ಲಿದ್ದಾರೆ, ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ಸರಿಯಿಲ್ಲ ಎಂದು ಭಾಷಣ ಬಿಗಿಯುವ ಜಿಗ್ನೇಶ್ ಮೇವಾನಿ ಒಂದೂ ಸಕಾರಾತ್ಮ ಮತ್ತು ಪರಿಹಾರೋಪಾಯಗಳನ್ನು ಸೂಚಿಸಿಲ್ಲ ಎಂಬುದು ದುರ್ದೈವ.. ಪರಿಸ್ಥಿತಿ ವಿಕೋಪಕ್ಕೆ ಹೋಗುವಂತೆ ಭಾಷಣ ಬಿಗಿದು, ಮುಗ್ದ ಜನರನ್ನು ಸಂಕಷ್ಟಕ್ಕೆ ತಳ್ಳುವುದಕ್ಕಿಂತ ಜನರನ್ನು ಸೃಜನಾತ್ಮಕ ಕಾರ್ಯಗಳನ್ನು ಮಾಡುವುದು ಒಳಿತು.
Leave A Reply