ನಿರ್ದೇಶಕನಾಟದಂತೆ ನಟಿಸುವ ಪ್ರಕಾಶ್ ರೈಗೆ ಸ್ವಂತಿಕೆ ಇಲ್ಲದೇ ಹೋಯಿತೇ..?
ಪ್ರಕಾಶ್ ರೈ..
ದಕ್ಷಿಣ ಭಾರತದಲ್ಲಿ ಚಿರಪರಿಚಿತ ಹೆಸರು. ಪ್ರಕಾಶ್ ರೈ, ಪ್ರಕಾಶ್ ರಾಜ್ ತಮ್ಮ ಅದ್ಭುತ ನಟನೆಗಳ ಮೂಲಕ ಭಾರತದ ಗಮನ ಸೆಳೆದವರು. ಪದ್ಮಭೂಷಣ ಪ್ರಶಸ್ತಿಗೂ ಭಾಜನರಾದವರು. ಎಲ್ಲೆಡೆ ತಮ್ಮದೇ ಅಭಿಮಾನಿ ವರ್ಗವನ್ನು ಅಭಿನಯದ ಮೂಲಕವೇ ಸೃಷ್ಟಿಸಿಕೊಂಡವರು. ಪ್ರತಿ ಪಾತ್ರಕ್ಕೂ ನಿರ್ದೇಶಕರ ಆಜ್ಞೆ ಮೆರೆಗೆ ಜೀವ ತುಂಬಿ ಪ್ರೇಕ್ಷಕರಿಗೆ ಮನದುಂಬಿಸಿದರು. ಅದು ಪ್ರಕಾಶ ರೈ ಮೆಚ್ಚುಗೆಗೆ ಕಾರಣ. ನಟನೆ ವೇಳೆ ಎಲ್ಲಿಯೂ ಪ್ರಕಾಶ್ ರೈ ತನ್ನ ಸ್ವಂತಿಕೆ ಕಳೆದುಕೊಳ್ಳಲಿಲ್ಲ. ನಿರ್ದೇಶಕ ಸೂಚನೆಯಂತೆ ಪಾತ್ರಕ್ಕೆ ಜೀವ ತುಂಬಿದರು. ಆದರೆ ದುರಂತವೆಂದರೆ ಪ್ರಕಾಶ್ ರೈ ನಿಜ ಜೀವನದಲ್ಲೂ ಯಾರದೋ ಅಣತಿಯ ಮೇರೆಗೆ, ಯಾರನ್ನೋ ಮೆಚ್ಚಿಸಲು ನಟನೆ ಮಾಡುತ್ತಿರುವುದು ಮತ್ತು ಮನದಿಂಗಿತವನ್ನೆ ಹೊರಹಾಕುತ್ತಿರುವುದು ಸ್ಪಷ್ಟವಾಗಿದೆ.
ಇತ್ತೀಚೆಗೆ ಪ್ರಕಾಶ್ ರೈ ತಮ್ಮ ಜಸ್ಟ್ ಆಸ್ಕಿಂಗ್ ಪ್ರಶ್ನೆಗಳ ಮೂಲಕ ಮನದ ಕೊಳಕುತನವನ್ನು ಹೊರಹಾಕುವುದು ಒಂದೆಡೆಯಾದರೆ, ಯಾರಿಗೋ ಲಾಭವಾಗಲಿ ಎಂಬ ಉದ್ದೇಶಕ್ಕಾಗಿ ಭಾರತ ಒಡೆಯುತ್ತೇನೆ ಎನ್ನುವ ಹುಂಬರ ಜತೆ ಕೂಡಿ ಜೈ ಕಾರ ಹಾಕುವುದು. ಉದ್ದೇಶ ಪೂರ್ವಕವಾಗಿ ಕೇವಲ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಟ್ಟುಕೊಂಡು ತಮ್ಮ ಅಮೂಲ್ಯ ನಟನಾ ಕೌಶಲ್ಯವನ್ನು ಬಳಸುತ್ತಿರುವುದು. ಇದೇ ಅಲ್ಲವೇ ದುರಂತವೆಂದರೆ.
ಈ ಎಲ್ಲ ಅಂಶಗಳನ್ನು ಗಮನಿಸಿದರೇ ಪ್ರಕಾಶ್ ರೈ ಕೇವಲ ಸಿನೆಮಾದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಯಾರದೋ ಅಣತಿಯಂತೆ, ವಿಶೇಷವಾಗಿ ಗಂಜೀ ಗಿರಾಕಿಗಳಂತೆ ವರ್ತಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಕೇಳುವ ಪ್ರಕಾಶ್ ರೈ ‘ಇದೀಗ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗುವ ಅರ್ಹತೆಯೇ ಇಲ್ಲವೆನ್ನುವ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಇದೇ ಪ್ರಶ್ನೆಯನ್ನು ಬಾರಿ ಗಾತ್ರದ ಅಂತರದಿಂದ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಕೇಳುವ ದರ್ದು ಇರಬೇಕಲ್ಲವೇ…?
ಪ್ರಧಾನಿ ಹುದ್ದೆಗೆ ಒಂದು ವಿಶೇಷ ಘನತೆ ತಂದು ಕೊಟ್ಟ ನರೇಂದ್ರ ಮೋದಿ ಅವರ ವಿರುದ್ಧವೇ ಮಾತನಾಡುವ ಪ್ರಕಾಶ ರೈಗೆ ಹಿಂದೂಗಳು, ಹಿಂದೂಪರ ಸಂಘಟನೆಗಳು, ಬಲಪಂಥೀಯವಾದವೆಂದರೆ ಬಾಯಿಯಲ್ಲಿ ಕಡುಬು ತುರುಕಿದಂತೆ ಆಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ತಮ್ಮ ಎಡಬಿಡಂಗಿ ಹೇಳಿಕೆಗಳ ಮೂಲಕ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುವ ಪ್ರಕಾಶ್ ರೈ. ಇದೀಗ ತಾನು ಏನು ಮಾತನಾಡುತ್ತಿದ್ದೇನೆ, ಯಾರಿಗೆ ಪ್ರಶ್ನಿಸುತ್ತಿದ್ದೇನೆ ಎಂಬುದರ ಸಣ್ಣ ಅರಿವು ಇಲ್ಲದೇ ಬೊಗಳುತ್ತಿರುವುದು ನೋಡಿದರೆ ಪ್ರಕಾಶ್ ರೈ ತನ್ನ ಸ್ವಂತಿಕೆ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಒಬ್ಬ ಜೀವ ಪರ ವ್ಯಕ್ತಿ ಬಹಿರಂಗವಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಡಿ ಎಂದು ಹೇಳುವ ದರ್ದು ಏನಿದೆ.
ಪ್ರಕಾಶ್ ರೈ ಪ್ರಶ್ನೆಯ ಪ್ರತಿ ಅಂಶದಲ್ಲೂ ಮೋದಿ ವಿರುದ್ಧ ವಾಂತಿ ಮಾಡಿಕೊಳ್ಳುವುದೇ ನಡೆದಿದೆ. ಮೋದಿ ಪ್ರಧಾನಿಯಾಗಲು ಲಾಯಕ್ಕಿಲ್ಲ, ಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಮನಬಂದತೆ ಅರ್ಥೈಸಿಕೊಂಡು ಪ್ರತಿಕ್ರಿಯಿಸುವುದು ನೋಡಿದರೆ ಪ್ರಕಾಶ್ ರೈ ಮಾತಿನ ಹಿಂದೆ ಸ್ವಂತಿಕೆ ಮರೆಯಾಗಿದೆ. ಹಲವು ಸಂವಾದ, ಪತ್ರಿಕಾಗೋಷ್ಠಿಗಳಲ್ಲಿ ಪ್ರಕಾಶ್ ರೈ ತಮಗೆ ಎದುರಾದ ಸಣ್ಣ ಪ್ರಶ್ನೆ ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ಪ್ರಶ್ನಿಸುವ ನೀವು ಪ್ರತಿಭಾವಂತ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಏಕೆ ಪ್ರಶ್ನಿಸುವುದಿಲ್ಲ ಎಂದರೆ ವ್ಯಗ್ರರಾಗಿ, ಪ್ರಶ್ನೆ ತಿರುಚಬೇಡಿ ಎನ್ನುತ್ತಾರೆ. ಇದೊಂದು ಘಟನೆಯೇ ಸಾಕು ಪ್ರಕಾಶ್ ರೈ ತಾನು ಅದ್ಯಾರಿಗೋ ಬಕೆಟ್ ಹಿಡಿಯಲು ಹೊರಟಿದ್ದೇನೆ ಎಂಬುದು ಮತ್ತು ತನ್ನಲ್ಲಿ ಸ್ವಂತಿಕೆ ಇಲ್ಲ ಎಲ್ಲವೂ ಚುನಾವಣೆಗಾಗಿ ಯಾರೋ ಹೇಳಿದಂತೆ, ಯಾರದ್ದೋ ಹಿತಾಸಕ್ತಿ ಕಾಯಲು ಬೊಗಳುತ್ತಿದ್ದೇನೆ ಎಂಬುದು ಸ್ಪಷ್ಟಪಡಿಸಿದ್ದಾರೆ.
Leave A Reply