ಎಲ್ಲಿ ಹೋದವು ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಗಂಜಿ ಸಾಧಿಸುವ ಬುದ್ಧೀ ಹೀನ ಜೀವಿಗಳು?
5 ಸೆಪ್ಟೆಂಬರ್ 2017 ರಂದು ಸಾಯಂಕಾಲ 8 ಗಂಟೆ ಸುಮಾರಿಗೆ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಬೆಂಗಳೂರಿನ ರಾಜರಾಜೇಶ್ವರ ಮನೆಯ ಎದುರು ಗುಂಡಿನ ದಾಳಿ ಮಾಡಿ ಕೊಲೆ ಮಾಡಲಾಯಿತು. ಕೊಲೆಯಾದ ಒಂದರೆಕ್ಷಣದಲ್ಲೇ ನಮ್ಮ ಸ್ವಯಂ ಘೋಷಿತ ಬುದ್ಧಿಜೀವಿಗಳ ದಂಡು ಗೌರಿಗೆ ಸಂತಾಪ ಸೂಚಿಸಲು ಸಾಲು ಸಾಲು ಸಂಖ್ಯೆಯಲ್ಲಿ ಬಂದರು. ಬಂದವರೇ ಗೊಳೋ ಎಂದು ಅಳುವುದನ್ನು ಬಿಟ್ಟು ಅವರು ನೇರವಾಗಿ ಗುರಿಯಿಟ್ಟಿದ್ದು ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಬಲಪಂಥಿಯರು ಗೌರಿಯನ್ನು ಕೊಲೆ ಮಾಡಿದ್ದಾರೆ ಎಂದು ಘೋಷಿಸಿ, ಬೀದಿಗಿಳಿದೇ ಬಿಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೊಟ್ಟು ಮಾಡಿ ತಮ್ಮ ಗಂಜೀ ಸಾಧಿಸಲು ಗೌರಿ ಹೆಣವನ್ನು ರಣಹದ್ದುಗಳಂತೆ ಬಳಸಿಕೊಂಡರು.
ಗೌರಿ ಸತ್ತು ಐದುವರೆ ತಿಂಗಳಾಯಿತು ತನಿಖೆ ರಾಜ್ಯ ಸರ್ಕಾರ ಇನ್ನು ಶೀಘ್ರದಲ್ಲಿ ಅಂತ್ಯ ಹಾಡಲಾಗುವುದು ಎಂದು ಬೊಗಳೆ ಬಿಡುತ್ತಿವೆ. ರಾಜ್ಯದಲ್ಲಿ ಗೂಂಡಾ ರಾಜ್ ಸೃಷ್ಟಿಯಾಗಿದೆ. ಕಾಂಗ್ರೆಸ್ ಶಾಸಕ, ಮಲಯಾಳಿ ಎನ್.ಎ.ಹ್ಯಾರಿಸ್ ಪುತ್ರ ವಿದ್ವತ್ ಎಂಬುವವರ ಮೇಲೆ ದಾಳಿ ಮಾಡಿ ದರ್ಪ ಮೆರೆದಿದ್ದಾನೆ. ಮಗನನ್ನು ಮನೆಯಲ್ಲಿಟ್ಟುಕೊಂಡರೂ ಇಲ್ಲವೆಂದು ಸುಳ್ಳು ಹೇಳಲಾಗುತ್ತಿದೆ, ವಿದ್ವತ್ ಜೀವ ಇಂದೋ, ನಾಳೇಯೋ ಎನ್ನುವ ಮಟ್ಟಿಗೆ ಹಲ್ಲೆ ನಡೆಸಲಾಗಿದೆ. ಆದರೆ ಅಂದು ಗೌರಿ ಹತ್ಯೆಯಲ್ಲಿ ಗಂಜಿ ಸಾಧಿಸಲು ಹಂಬಲಿಸಿದ ಹಸಿ ಜೀವಗಳು ಇಂದು ಒಂದೇ ಒಂದು ಸಣ್ಣ ಖಂಡನೆಯನ್ನು ಮಾಡುತ್ತಿಲ್ಲ, ಟೌನ್ ಹಾಲ್ ಮುಂದೆ ಅರಚುತ್ತಿಲ್ಲ. ಅರಚುವುದು ಬಿಡಿ ರಾಜ್ಯ ಸರ್ಕಾರದ ವಿರುದ್ಧ ಉಸಿರು ಬಿಟ್ಟರೂ ಗಂಜಿಗೆ ಕಲ್ಲುಬೀಳುವುದು ನಿಶ್ಚಿತ ಎಂಬ ಭೀತಿಯೇ ಅನ್ನೋ ಅನುಮಾನ ಸೃಷ್ಟಿಯಾಗಿದೆ.
ಬುದ್ದೀಜೀವಿಗಳೇ ನೀವು ನಿಜವಾಗಲು ಜೀವಪರರ ಎಂದಾದರೇ ವಿದ್ವತ್ ಗೆ ನ್ಯಾಯ ಕೊಡಿಸಲು ಹೋರಾಡಿ, ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ಧರ್ಪ ಮೆರೆದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ವಿರುದ್ಧ ಚೀರಾಡಿ. ಸರ್ಕಾರಿ ಅಧಿಕಾರಿ ಎದುರು ಧರ್ಪ ಮೆರೆದು, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚುತ್ತೇನೆ ಎಂದು ಪೆಟ್ರೋಲ್ ಸುರಿದು ಧರ್ಪ ಮೆರೆದ ಆತನ ವಿರುದ್ಧ ಕ್ರಮಕ್ಕೆ ಸಿದ್ದರಾಮಯ್ಯಗೆ ಆಗ್ರಹಿಸಿ. ಇಲ್ಲವೇ ನಾವು ಮಾಡುವುದು ಕೇವಲ ಗಂಜೀ ಸಾಧನೆಗೆ ಅವಕಾಶವಿರುವೆಡೆ ಮಾತ್ರ ಎಂದು ಷಂಡರಂತೆ ಮನೆಯಲ್ಲಿ ಹಾಸಿಗೆ ಹೊದ್ದುಕೊಂಡು ಮಲಗಿ ಬಿಡಿ.
ಬಿಡಿ ಇದೆಲ್ಲವನ್ನು ಖಂಡಿಸಿದ್ದರೆ ನಿಮ್ಮ ಗಂಜಿಗೆ ಕಲ್ಲು ಬೀಳುತ್ತದೆ ಎಂದು ಸುಮ್ಮನಿದ್ದರೀ. ಆದರೆ ನಿಮ್ಮೆಲ್ಲರಿಗೆ ಆಶ್ರಯದಾತೆಯಾಗಿದ್ದ ಗೌರಿ ಸಾವಿಗೆ, ಎಂ.ಎಂ. ಕಲಬುರ್ಗಿ ಅವರ ಸಾವಿಗೆ ನ್ಯಾಯ ಕೊಡಿಸಿ ಎಂದು ಸಿದ್ದರಾಮಯ್ಯರ ಕೊರಳು ಪಟ್ಟಿ ಹಿಡಿದು ಕೇಳಿ. ಅದೇ ವಿಷಯವಿಟ್ಟುಕೊಂಡು ಇನ್ನು ಎಷ್ಟು ದಿನ ಗಂಜಿ ಸಾಧಿಸುತ್ತೀರಿ. ಪರಿಸ್ಥಿತಿ ಬದಲಾಗುತ್ತಿದೆ. ರಾಜ್ಯದಲ್ಲಿ ಗುಂಡಾ ರಾಜ್ಯ ಮರುಕಳಿಸುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೇ ನಿಮ್ಮ ಮಾತಿನ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ಕಸಿದುಕೊಳ್ಳುತ್ತೆ. (ಈಗಾಗಲೇ ಪರೋಕ್ಷವಾಗಿ ಗಂಜಿ ನೀಡಿ ಕಿತ್ತುಕೊಂಡಿದೆ).
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ, ಗಲಭೆಗಳಿಗೆ ಸಮನಾಗಿ ಸ್ಪಂದಿಸಬೇಕಿದ್ದ ಜೀವಪರ ಹಾರಾಟಗಾರರು ಒಂದೇ ಒಂದು ಘಟನೆಯಲ್ಲೂ ರಾಜ್ಯ ಸರ್ಕಾರದ ವಿರುದ್ಧ ಉಸಿರೆತ್ತಲಿಲ್ಲ. ಇದೇ ಅಲ್ಲವೇ ಬುದ್ಧಿ ಜೀವಿಗಳ ಸ್ವಾತಂತ್ರ್ಯಕ್ಕಿರುವ ದೌರ್ಬಲ್ಯ… ಬದಲಾಗಿ ಇಲ್ಲದಿದ್ದರೇ ರಾಜ್ಯ ಕಾಂಗ್ರೆಸ್ ಸರ್ಕಾರ ನಿಮ್ಮನ್ನು ಸಂಪೂರ್ಣ ಬುದ್ದೀ ಹೀನರನ್ನಾಗಿ ಮಾಡುವುದರಲ್ಲಿ ಅಚ್ಛರಿಯಿಲ್ಲ.
ನಾನು ಗೌರಿ ಎಂದವರೂ ನಾನು ವಿದ್ವತ್ ಎನ್ನಬೇಕಲ್ಲವೇ?
Leave A Reply