ದೇಶದ ಹಿಂದೂಗಳೆಲ್ಲ ಇಲ್ಲಿಯ ಮೂಲನಿವಾಸಿಗಳೇ ಎಂದು ಸಾಬೀತುಪಡಿಸಲು ಮೋದಿ ಸರ್ಕಾರ ಏನು ಮಾಡಿದೆ ಗೊತ್ತಾ?
ದೆಹಲಿ: ಬೌದ್ಧ ಧರ್ಮ ಸ್ಥಾಪನೆಯಾಗುವ ಮೊದಲು ಗೌತಮ ಬುದ್ಧ ಹಿಂದೂವಾಗಿದ್ದ, ಜೈನ ಧರ್ಮ ಸ್ಥಾಪನೆಗೂ ಮುನ್ನ ತೀರ್ಥಂಕರ ಹಿಂದೂ, ಸಿಂಧೂ ನಾಗರಿಕತೆ ಹಿಂದೂ ಧರ್ಮದ ಮೂಲ ಬೇರು, ಸಿಂಧೂ ನಾಗರಿಕೆಯಿಂದಲೇ ಭಾರತಕ್ಕೆ ಹಿಂದೂಸ್ಥಾನ ಎಂಬ ಹೆಸರು ಬಂತು ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆಯಾದರೂ, ಕೆಲವು ಕುತ್ಸಿತ ಮನಸ್ಸುಗಳು ಮಾತ್ರ ದೇಶದಲ್ಲಿರುವ ಹಿಂದೂಗಳು ಇಲ್ಲಿಯ ಮೂಲ ನಿವಾಸಿಗಳು ಅಲ್ಲ, ಬೇರೆ ಕಡೆಯಿಂದ ವಲಸೆ ಬಂದವರು ಎಂದು ಬೊಬ್ಬೆ ಹಾಕುತ್ತವೆ. ಹಿಂದೂಸ್ಥಾನದಲ್ಲೇ ಹಿಂದೂ ಎಂಬ ಪದ ಇದ್ದರೂ, ತಮ್ಮ ಬಾಯಿ ತೆವಲು ತೀರಿಸಿಕೊಳ್ಳಲು ಕಪಟತನ ತೋರುತ್ತವೆ.
ಹಾಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಹಿಂದೂಗಳೆಲ್ಲ ಇಲ್ಲಿಯ ಮೂಲ ನಿವಾಸಿಗಳೇ ಎಂಬುದನ್ನು ಸಾಬೀತುಪಡಿಸಲು ಮಾಸ್ಟರ್ ಪ್ಲಾನ್ ಮಾಡಿದ್ದು, ಭಾರತದ ಹಿಂದೂಗಳು ಹೆಮ್ಮೆಯಿಂದ ನಾವು ಹಿಂದೂಸ್ಥಾನಿಗಳೇ, ನಮ್ಮ ನೆಲ ಇದೇ ಎಂದು ಹೇಳಿಕೊಳ್ಳುವ ಕಾಲ ದೂರವಿಲ್ಲ ಎಂದೇ ಹೇಳಲಾಗುತ್ತಿದೆ.
ನಿಜ, ಭಾರತದ ಹಿಂದೂಗಳು ಇಲ್ಲಿಯ ಮೂಲ ನಿವಾಸಿಗಳೇ ಎಂದು ಸಾಕ್ಷ್ಯಾಧಾರದ ಸಮೇತ ಸಾಬೀತುಪಡಿಸಲು ಕೇಂದ್ರ ಸರ್ಕಾರ 2016ರಲ್ಲೇ ತಜ್ಞರ ಸಮಿತಿ ರಚಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸರ್ಕಾರ ರಚಿಸಿದ ತಜ್ಞರ ಸಮಿತಿ ಸದಸ್ಯರೊಂದಿಗೆ ರಾಯಿಟರ್ಸ್ ವರದಿಗಾರರು ಸಂದರ್ಶನ ನಡೆಸಿದ್ದು, ದೇಶದ ಹಿಂದೂಗಳೆಲ್ಲ ಮೂಲ ನಿವಾಸಿಗಳೇ ಎಂಬುದು ಎಲ್ಲರಿಗೂ ತಿಳಿಯಲಿ ಹಾಗೂ ಇತಿಹಾಸದಲ್ಲಿ ಈ ಅಂಶ ದಾಖಲಾಗಲಿ ಎಂಬ ದಿಸೆಯಲ್ಲಿ ಸರ್ಕಾರ ಮುಂದಡಿಯಿಟ್ಟಿರುವುದಾಗಿ ತಜ್ಞರ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಈ ಕುರಿತು ಸಮಿತಿ ಅಧ್ಯಕ್ಷ ಕೆ.ಎನ್.ದೀಕ್ಷಿತ್ ರಾಯಿಟರ್ಸ್ ಸಂಸ್ಥೆಯೊಂದಿಗೆ ಮಾತನಾಡಿದ್ದು, ದೇಶದ ಇತಿಹಾಸದ ಪುಟಗಳಲ್ಲಿ ಹಿಂದೂಗಳೆಲ್ಲ ಭಾರತದ ಮೂಲ ನಿವಾಸಿಗಳೇ ಎಂಬುದನ್ನು ಸಾಬೀತುಪಡಿಸುವ ದಿಸೆಯಲ್ಲಿ ಸಂಶೋಧನೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಈ ಕುರಿತು ವರದಿ ನೀಡುವಂತೆ ನಿರ್ದೇಶಿಸಿದೆ. ಈ ದಿಸೆಯಲ್ಲಿ ನಮ್ಮ ತಂಡ ಕಾರ್ಯೋನ್ಮುಖವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಮಹೋನ್ನತ ನಡೆಯಿಂದ ಭಾರತೀಯ ಹಿಂದೂಗಳಿಗೆಲ್ಲ ಸಿಹಿ ಸುದ್ದಿ ಕಾದಿದೆ ಎಂದೇ ಹೇಳಲಾಗುತ್ತಿದ್ದು, ಸತ್ಯಾಂಶ ಬಯಲಾದರೆ ಅದೆಷ್ಟು ಜನರ ಎದೆ ಧಸಕ್ ಎನ್ನುವುದೋ ಎಂಬ ಕುತೂಹಲ ಸಹ ಮೂಡಿದೆ.
Leave A Reply