ಡೋಕ್ಲಾಂ ಗಡಿಯಲ್ಲಿ ಭಾರತ ಯಾವ ಪರಿಸ್ಥಿತಿ ಬೇಕಾದರೂ ಎದುರಿಸಲು ಸಿದ್ಧ ಎಂದು ಚೀನಾಕ್ಕೆ ತಪರಾಕಿ ನೀಡಿದ ಭಾರತ!
ದೆಹಲಿ: ಕಳೆದ ವರ್ಷ ಅಸ್ಸಾಂನ ಡೋಕ್ಲಾಂ ಗಡಿಯಲ್ಲಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮಾಡಿದ್ದ ಚೀನಾ ಈಗ ಮತ್ತೆ ಬಾಲ ಬಿಚ್ಚಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಭಾರತ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.
ನಾವು ವೈರಿಗಳನ್ನು ಬಗ್ಗುಬಡಿಯುತ್ತೇವೆ ಎಂದು ಇತ್ತೀಚಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿಕೆಗೆ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟಾಂಗ್ ನೀಡಿದ್ದು, “ಡೋಕ್ಲಾಂ ಗಡಿಯಲ್ಲಿ ಭಾರತ ಎಂತಹ ವಿಷಮ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧ” ಎಂದು ಪ್ರತ್ಯುತ್ತರ ನೀಡಿದ್ದಾರೆ.
ಡೋಕ್ಲಾಂನಲ್ಲಿ ನಾವು ವಿಷಯ ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದೇವೆ. ಈ ದಿಸೆಯಲ್ಲಿ ನಮ್ಮ ಸೇನೆಯನ್ನು ಆಧುನೀಕರಣಗೊಳಿಸುತ್ತಿದ್ದು, ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಡೋಕ್ಲಾಂ ಗಡಿಯಲ್ಲಿ ಚೀನಾ ಉಪಟಳ ಮಾಡುವ ಲಕ್ಷಣವಿದ್ದು, ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಅದರ ಚಲನವಲನ ಚುರುಕಾಗಿದೆ. ಈ ಬಾರಿ ಚೀನಾ ಮತ್ತೆ ಗಡಿಯಲ್ಲಿ ಸೈನಿಕರನ್ನು ನಿಯೋಜಿಸಿದರೆ ಮತ್ತೆ ಕಳೆದ ವರ್ಷ ಉಂಟಾದ ಪರಿಸ್ಥಿತಿಯೇ ಎದುರಾಗಬಹುದು ಎಂದು ಭಾರತೀಯ ರಾಯಭಾರಿ ಗೌತಂ ಬಂಬಾವಾಲೆ ಎಚ್ಚರಿಸಿದ್ದರು. ಕಳೆದ ವರ್ಷ ಡೋಕ್ಲಾಂ ಗಡಿಯಲ್ಲಿ 73 ದಿನ ಸೈನಿಕರನ್ನು ನಿಯೋಜಿಸಿ ಚೀನಾ ಉದ್ಧಟತನ ಮಾಡಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್ ಸರಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ.
Leave A Reply