ಪ್ರಕಾಶ್ ರೈ ಟ್ವೀಟ್ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ತೋರಿಸುತ್ತದೆ!!
ಪ್ರಕಾಶ್ ರೈ ಯಾನೆ ಪ್ರಕಾಶ್ ರಾಜ್ ಸಿನೆಮಾಗಳಲ್ಲಿ ಹೆಣ್ಣುಮಕ್ಕಳನ್ನು ಛೇಡಿಸುವ ವಿಲನ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವ ಅವರ ಪಾತ್ರಗಳು ಸಿನೆಮಾ ಪರದೆಗೆ ಮಾತ್ರ ಸೀಮಿತ ಎಂದು ಅನಿಸುತ್ತಿತ್ತು. ಯಾಕೆಂದರೆ ತುಂಬಾ ಜನ ವಿಲನ್ ಗಳು ಬಣ್ಣ ಕಳಚಿದ ಮೇಲೆ ಹೀರೋಗಳಿಗಿಂತ ಹೆಚ್ಚು ಸಭ್ಯರು, ಸಜ್ಜನರೂ ಆಗಿರುತ್ತಾರೆ. ಪ್ರಕಾಶ್ ರೈ ಕೂಡ ಮೇಕಪ್ ತೊಳೆದ ಮೇಲೆ ಸರಿಯಿರುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ಏಕೋ ಅವರು ಓವರ್ ಡ್ಯೂಟಿ ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಅವಕಾಶ ಕಡಿಮೆ ಇರುವ ಕಾರಣಕ್ಕೋ ಏನೋ ಕ್ಯಾಮೆರಾ ಇಲ್ಲದಿದ್ದರೂ ಅಬ್ಬರಿಸುತ್ತಿರುತ್ತಾರೆ. ಅದಕ್ಕೆ ಅವರ ಲೇಟೆಸ್ಟ್ ಟ್ವೀಟ್ ಕಾರಣ.
ತಾವು ಬರೆದಿರುವ ಅಥವಾ ಅಷ್ಟು ಇಂಗ್ಲೀಷ್ ಗೊತ್ತಿಲ್ಲದಿದ್ದಲ್ಲಿ ಯಾರಿಂದಲಾದರೂ ಬರೆಯಿಸಲಾಗಿರುವ ಟ್ವೀಟ್ ನಲ್ಲಿ ಪ್ರಕಾಶ್ ರಾಜ್ ಏನು ಬರೆದಿದ್ದಾರೆ ಎಂದರೆ ” ಅಲ್ಲಿ ನೋಡಿ, ಕರ್ನಾಟಕದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಪತ್ನಿ ಧರ್ಮದ ಆಧಾರದ ಮೇಲೆ ಮತಯಾಚಿಸುತ್ತಿದ್ದಾರೆ. ಇದು ಕೋಮು ರಾಜಕೀಯ.. ಇದಾ ಸಬ್ ಕಿ ಸಾಥ್…ಸಬ್ ಕಾ ವಿಕಾಸ್..” ಎಂದು ಟೀಕಿಸಿದ್ದಾರೆ. ಪ್ರಕಾಶ್ ರೈ ಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆಗೋ ಅಥವಾ ಲೋಕಸಭಾ ಕ್ಷೇತ್ರದಲ್ಲಿಯೊ ಚುನಾವಣೆಗೆ ನಿಲ್ಲುವ ಮನಸ್ಸಿರಬಹುದು. ಅದಕ್ಕಾಗಿ ಅವರು ಆಗಾಗ ಈ ಜಿಲ್ಲೆಯ ಕಡೆ ತಲೆ ಹಾಕುತ್ತಾರೆ. ಇನ್ನು ಅವರ ಸಮಾನಮನಸ್ಕ ಗೆಳೆಯರು ಇಲ್ಲಿ ಇರುವುದರಿಂದ ಅವರಿಂದ ಏನಾದರೂ ವಿಷಯ ಸಿಕ್ಕಿದ ಕೂಡಲೇ ತಮ್ಮದೂ ಕಡ್ಡಿಯಾಡಿಸುವ ಎಂದು ರೈಗೆ ಅನಿಸಬಹುದು. ಬಹುಶ: ರಮಾನಾಥ್ ರೈ ಅವರ ಉತ್ತರಾಧಿಕಾರಿಯಾಗಬೇಕೆನ್ನುವ ಆಸೆ ಮತ್ತು ಗುರಿ ಇದ್ದಿರಲೂಬಹುದು. ಆದರೆ ಹಿಂದೂ ಎನ್ನುವ ಶಬ್ದ ಕೇಳಿದ ಕೂಡಲೇ ಮೈಮೇಲೆ ಮಿಡಿನಾಗರ ಬಿಟ್ಟಂತೆ ರೈ ವರ್ತಿಸುವುದನ್ನು ಬಿಡದಿದ್ದರೆ ಅವರು ಆದಷ್ಟು ಬೇಗ ಔಟ್ ಡೇಟೆಡ್ ಆಗುವುದರಲ್ಲಿ ಸಂಶಯವಿಲ್ಲ. ಮೊದಲನೇಯದಾಗಿ ಹಿಂದೂ ಎನ್ನುವ ಶಬ್ದವನ್ನು ಅವರು ಧರ್ಮ, ಬಿಜೆಪಿ, ಮೋದಿ, ಅಮಿತ್ ಶಾ ಎನ್ನುವುದಕ್ಕೆ ಪರ್ಯಾಯ ಎಂದು ತಿಳಿದುಕೊಂಡಿರುವುದರಿಂದ ಅವರು ಈ ವಿಷಯಗಳು ಒಂದು ಕಿಮೀ ದೂರದಿಂದ ಅವರ ಕಿವಿಗೆ ಬಿದ್ದರೂ ಅವರು ಪ್ರತಿಕ್ರಿಯೆ ಕೊಡಲು ಇಂಟರ್ ನೆಟ್ ಆನ್ ಮಾಡುತ್ತಾರೆ.
ಹಿಂದೂ ಅಂದರೆ ರೈಗೆ ಮೈಯೆಲ್ಲ ಉರಿ…
ಈಗ ಅವರ ಲೇಟೆಸ್ಟ್ ಟ್ವೀಟ್ ಬಗ್ಗೆ ನೋಡೋಣ. ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಅವರ ಪತ್ನಿ ವೃಂದಾ ಕಾಮತ್ ತಮ್ಮ ಪತಿ ಪರವಾಗಿ ಕೆಲವು ವಾರ್ಡ್ ಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾದವರೊಂದಿಗೆ ಮತಯಾಚಿಸಲು ಹೋಗಿದ್ದಾರೆ. ಅಲ್ಲಿ ಅವರು ಮಾತನಾಡುವಾಗ ಹಿಂದೂ ಧರ್ಮದ ಪರವಾಗಿ ಮತ ಚಲಾಯಿಸಲು ವಿನಂತಿಸಿರಬಹುದು ಅಥವಾ ಅಂತಹ ಅರ್ಧದ ಶಬ್ದಗಳು ಅವರ ಬಾಯಿಂದ ಬಂದಿರಬಹುದು. ಅದರಲ್ಲಿ ಪ್ರಕಾಶ್ ರೈಗೆ ಭೂಮಿ-ಆಕಾಶ ಒಂದು ಮಾಡುವ ಅಗತ್ಯ ಏನಿತ್ತು ಎನ್ನುವುದೇ ಅರ್ಥವಾಗುವುದಿಲ್ಲ. ಮೊದಲಾಗಿ ಹಿಂದೂ ಎಂದರೆ ಧರ್ಮ ಅಲ್ಲ ಎಂದು ಸುಪ್ರಿಂಕೋರ್ಟ್ ಹೇಳಿರುವುದು ಪ್ರಕಾಶ್ ರೈ ಗಮನಕ್ಕೆ ಬಂದಿರಲಿಕ್ಕಿಲ್ಲ. ಯಾಕೆಂದರೆ ಸುಪ್ರಿಂಕೋರ್ಟ್ ನ ಆದೇಶ ಓದುವಷ್ಟು ಅವರಿಗೆ ವ್ಯವಧಾನ ಇರಲಿಕ್ಕಿಲ್ಲ. ಹಿಂದೂ ಎಂದರೆ ಅದು ಜೀವನ ಪದ್ಧತಿ. ಜೀವನ ಪದ್ಧತಿ ಎಂದರೆ ಏನು ಎಂದು ಪ್ರಕಾಶ್ ರೈ ಕೇಳಲಿಕ್ಕೂ ಸಾಕು. ಹಿಂದೂ ಜೀವನ ಪದ್ಧತಿ ಎಂದರೆ ಗೋವುಗಳನ್ನು ಪೂಜಿಸುವ, ಕೃಷಿ ಸಂಸ್ಕೃತಿಯನ್ನು ಆರಾಧಿಸುವ, ಹೆಣ್ಣುಮಕ್ಕಳನ್ನು ಗೌರವಿಸುವ ಕ್ರಮ. ಬಹುಶ: ಇದರಲ್ಲಿ ಯಾವುದೂ ಕೂಡ ಪ್ರಕಾಶ್ ರೈಗೆ ಸಂಬಂಧವಿರಲಿಕ್ಕಿಲ್ಲ.
ಪ್ರಕಾಶ್ ರೈ ಅವರು ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಶಬ್ದವನ್ನು ಆಗಾಗ ಹೀಯಾಳಿಸುತ್ತಾರೆ. ಇಲ್ಲಿ ಕೂಡ ಅದಕ್ಕೆ ಟಚ್ ಕೊಟ್ಟು ವೇದವ್ಯಾಸ್ ಕಾಮತ್ ಅವರ ಪತ್ನಿಯವರ ಚುನಾವಣಾ ಪ್ರಚಾರವನ್ನು ಜೋಡಿಸಿದ್ದಾರೆ. ಮೋದಿ ತಾವು ಹೇಳಿದಂತೆ ನಡೆದುಕೊಳ್ಳುತ್ತಿರುವುದರಿಂದ ಮುಸ್ಲಿಮರು, ಕ್ರೈಸ್ತರು ತಮ್ಮ ಪಕ್ಷಕ್ಕೆ ವೋಟ್ ಕೊಡುತ್ತಾರೋ ಇಲ್ವೋ ಅವರಿಗೂ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಆದರೆ ಅದೇ ಸಿದ್ಧರಾಮಯ್ಯ ತಮಗೆ ವೋಟ್ ಸಿಗುವ ಕಡೆ ಭರಪೂರ ಯೋಜನೆಗಳನ್ನು ಪ್ರಕಟಿಸುವುದು ಮತ್ತು ಹಿಂದೂ ಧರ್ಮವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಮೂಲಕ ರಾಜಕೀಯ ಆಡುತ್ತಿದ್ದಾರೆ. ಆದರೆ ಪ್ರಕಾಶ್ ರೈ ಕುದುರೆಗೆ ಕಣ್ಣಿಗೆ ಬಟ್ಟೆ ಕಟ್ಟಿ ಪಕ್ಕದ್ದು ಕಾಣಿಸದ ಹಾಗೆ ಮಾಡಿದಂತೆ ಎದುರಿಗೆ ನಿಂತಿರುವ ಮೋದಿಯವರನ್ನು ಮಾತ್ರ ಟೀಕಿಸುತ್ತಾ ಪಕ್ಕದ ಸಿದ್ಧರಾಮಯ್ಯನವರು ಆಡುತ್ತಿರುವ ಆಟ ಇವರಿಗೆ ಕಾಣಿಸುವುದಿಲ್ಲ. ಕರ್ನಾಟಕದಲ್ಲಿ ಜಾತಿಯ ಮೇಲಿನ ಲಾಭಕ್ಕಾಗಿ ಪ್ರಕಾಶ್ ರೈ ಎಂದು ಕರೆಸಿಕೊಳ್ಳುವ ಮತ್ತು ತಮಿಳುನಾಡು, ಆಂಧ್ರ ದಾಟಿದ ಕೂಡಲೇ ಪ್ರಕಾಶ್ ರಾಜ್ ಆಗುವ ವ್ಯಕ್ತಿಯಿಂದ ಮಂಗಳೂರಿನವರು ಕಲಿಯಬೇಕಾಗಿರುವುದು ಏನಿಲ್ಲ.
ಇತ್ತೀಚಿನ ಪತ್ನಿ ಕುಕ್ಕೆಗೆ ಬಂದಿದ್ದರು…
ಪ್ರಕಾಶ್ ರೈಯವರ ಇತ್ತೀಚಿನ ಪತ್ನಿ ಮಗುವಿಗಾಗಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿ ಹೋಗಿರುವುದು ಪ್ರಕಾಶ್ ರೈಗೆ ಗೊತ್ತಿಲ್ಲವೇನೋ. ಇಲ್ಲದಿದ್ದರೆ ತಮ್ಮ ಪತ್ನಿ ಕೂಡ ಮೋದಿಯಂತೆಯೆ ದೇವರನ್ನು ಆರಾಧಿಸುತ್ತಾಳೆ ಎಂದು ಅವಳಿಗೂ ವಿಚ್ಚೇದನ ಕೊಡುತ್ತಿದ್ದರೋ ಏನೋ. ಮಂಗಳೂರು ನಗರ ದಕ್ಷಿಣದಲ್ಲಿರುವ ಪ್ರಕಾಶ್ ರೈಯವರ ಸಿಪಿಐಎಂ ಗೆಳೆಯರಿಗೆ ಪ್ರಕಾಶ್ ರೈಯತ್ರ ಮಾತನಾಡಲು ಏನು ವಿಷಯ ಇರಲಿಲ್ಲವೋ ಎನೋ. ಅದಕ್ಕೆ ಬಿಜೆಪಿ ಅಭ್ಯರ್ಥಿಯ ಪತ್ನಿಯ ಮತಪ್ರಚಾರದ ವಿಷಯ ಕೊಟ್ಟಿದ್ದಾರೆ. ಅದನ್ನು ರೈ ವಿಡಂಬನಾತ್ಮಕವಾಗಿ ಬರೆದುಕೊಂಡು ಬೆನ್ನು ತಟ್ಟಿಸಿಕೊಂಡಿದ್ದಾರೆ. ಎಡಪಕ್ಷಗಳ ಮಿತ್ರರಿಗೆ ಇದೆಲ್ಲ ಮಾಹಿತಿ ಪ್ರಕಾಶ ರೈಗೆ ಕೊಟ್ಟಿದ್ದಕ್ಕೆ ಎನು ಸಿಗುತ್ತೋ!
Leave A Reply