ಆ ಯೋಧನಿಗೆ ಬೆದರಿಕೆ ಹಾಕಿದ್ದ ಉಗ್ರ ಕೆಲವೇ ತಾಸುಗಳಲ್ಲಿ ಹೆಣವಾದ ಎಂದರೆ ಯೋಧನ ಕೆಚ್ಚೆದೆ ಎಂಥಾದ್ದಿರಬೇಕು!
ಶ್ರೀನಗರ: ಕಳೆದ ವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್‌ನನ್ನು ಭಾರತೀಯ ‘ಭದ್ರತಾ ಸಿಬ್ಬಂದಿ ಎನ್‌ಕೌಂಟರ್ ಮಾಡಿ ಬಿಸಾಕುವ ಮೂಲಕ ಶೌರ್ಯತನ ಮೆರೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಹೀಗೆ, ಹಿಜ್ಬುಲ್ ಕ್ರಿಮಿಯನ್ನು ಹತ್ಯೆ ಮಾಡುವ ಶೌರ್ಯದ ಹಿಂದೆ ಯೋಧರೊಬ್ಬರ ಶೌರ್ಯ ಹಾಗೂ ಚಾಣಾಕ್ಷತನದ ನಡೆ ಇದೆ ಎಂಬುದು ತುಂಬ ಜನರಿಗೆ ಗೊತ್ತಿಲ್ಲ.
ಹೌದು, ‘ಭದ್ರತಾ ಸಿಬ್ಬಂದಿ ತನ್ನನ್ನು ಹತ್ಯೆ ಮಾಡುವ ಮುನ್ನ ಉಗ್ರ ಸಮೀರ್ ಟೈಗರ್ 44ನೇ ರಾಷ್ಟ್ರೀಯ ರೈಫಲ್ಸ್ ನ ಮೇಜರ್ ರೋಹಿತ್ ಶುಕ್ಲಾ ಅವರಿಗೆ ಬೆದರಿಕೆ ಹಾಕಿದ್ದ. ಆದರೆ ಇದರಿಂದ ಕುಪಿತಗೊಂಡ ಮೇಜರ್ ರೋಹಿತ್ ಶುಕ್ಲಾ ಪುಲ್ವಾಮಾದಲ್ಲಿ ಉಗ್ರ ತಂಗಿದ್ದ ಸ್ಥಳಕ್ಕೆ ಸೇನೆ ನುಗ್ಗಿಸಿ ಆತ ಕೊನೆಯುಸಿರು ಎಳೆಯುವಂತೆ ಮಾಡಿದರು.
ಹೀಗೆ ರೋಹಿತ್ ಶುಕ್ಲಾ ಸೈನ್ಯವನ್ನು ಮುನ್ನಡೆಸಿ ಪುಲ್ವಾಮಾದಲ್ಲಿ ಉಗ್ರ ಅಡಗಿದ್ದ ತಾಣದ ಮೇಲೆ ಸಿಬ್ಬಂದಿ ಗುಂಡಿನ ಸುರಿಮಳೆಗೈಯುತ್ತಲ್ಲೇ ಬೆಚ್ಚಿಬಿದ್ದ ಸಮೀರ್ ಆಗಯಾ ಎಂದು ಕಿರುಚಿರುವ ಕುರಿತ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಭಾರತೀಯ ಸೈನಿಕರ ಮೇಲೆ ನಮಗಿರುವ ಹೆಮ್ಮೆಯೂ ಇಮ್ಮಡಿಯಾಗಿದೆ.
2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಸೈನಿಕರ ಗುಂಡಿಗೆ ಹತ್ಯೆಯಾದ ಬಳಿಕ ಚುರುಕಿನ ಸಂಘಟನೆಯಲ್ಲಿ ತೊಡಗಿದ್ದ ಸಮೀರ್, ಸುಮಾರು 11 ಉಗ್ರರ ನಾಯಕನಾಗಿ ಕೆಲಸ ಮಾಡುತ್ತಿದ್ದ. ಅಲ್ಲದೆ ಹಲವು ದಾಳಿಗಳ ರೂವಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಎನ್ನಲಾಗುತ್ತಿತ್ತು. ಆದರೇನಂತೆ ಯೋಧನಿಗೆ ಸವಾಲು ಹಾಕಿದ ಆತನ ಪ್ರಾಣ ಪಕ್ಷಿ ಕ್ಷಣಮಾತ್ರದಲ್ಲೇ ಹಾರಿಹೋಯಿತು.
Leave A Reply