ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ, ಸಿದ್ದರಾಮಯ್ಯ ಗರ್ವಭಂಗ!
ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಹುಟ್ಟು ಹೋರಾಟಗಾರ ಬಿ.ಎಸ್.ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದರೂ ವಿಫಲರಾದ ಸಿದ್ದರಾಮಯ್ಯನವರ ಗರ್ವಭಂಗ ಮಾಡಿದ್ದಾರೆ.
ಹೌದು, ಚುನಾವಣೆಗೂ ಮೊದಲು ಸಿದ್ದರಾಮಯ್ಯನವರ ಹುರುಪು, ಆಡಳಿತ ನಡೆಸುವಾಗ ಹಿಂದೂಗಳ ವಿರುದ್ಧ ತೋರಿದ ಧೋರಣೆ, ಸಾಲು ಸಾಲು ಹಿಂದೂಗಳ ಹತ್ಯೆಯಾದರೂ ಮಾಡಿದ ನಿರ್ಲಕ್ಷ್ಯ, ಮೌಢ್ಯ ನಿಷೇಧದ ಹೆಸರಿನಲ್ಲಿ ಹಿಂದೂಗಳ ಆಚರಣೆಗೆ ತಂದ ಭಂಗ, 3,500 ರೈತರು ಆತ್ಮಹತ್ಯೆ ಮಾಡಿಕೊಂಡರೂ ಕ್ರಮ ಕೈಗೊಳ್ಳದೇ ಇರುವುದು, ಸಚಿವರ ಹಗರಣ… ಹೀಗೆ ಸಾಲು ಸಾಲು ವೈಫಲ್ಯದಿಂದಾಗಿ ಸಿದ್ದರಾಮಯ್ಯನವರನ್ನು ಜನ ತಿರಸ್ಕರಿಸಿದ್ದಾರೆ. ಸಿದ್ದರಾಮಯ್ಯನವರನ್ನು ತವರೂರಿನಲ್ಲೇ ಸೋಲಿಸಿದ್ದು ಜನರ ಆಕ್ರೋಶಕ್ಕೆ ಹಿಡಿದ ಕನ್ನಡಿಯಾಗಿದೆ.
ಬಿದ್ದರೂ ಮಿಸೆ ಮಣ್ಣಾಗಲಿಲ್ಲ ಎಂಬಂತೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು, ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಅಬ್ಬರಿಸಿದ್ದ ಸಿದ್ದರಾಮಯ್ಯನವರು ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದರು.
ಆದರೆ ಕೊನೆಗೂ ಸಂವಿಧಾನದ ನಿಯಮದಂತೆ ಅತಿ ಹೆಚ್ಚು ಸ್ಥಾನ ಹೊಂದಿರುವ ಪಕ್ಷಕ್ಕೇ ರಾಜ್ಯಪಾಲರು ಮಣೆ ಹಾಕಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಸಿದ್ದರಾಮಯ್ಯನವರ ಗರ್ವಭಂಗವಾದಂತಾಗಿದೆ. ಬಿಜೆಪಿ ಆಡಳಿತವಿರುವ 23ನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.
ಹಾಗೆಯೇ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಯಡಿಯೂರಪ್ಪನವರು ಉತ್ತಮ ಆಡಳಿತ ನೀಡಲಿ, ಹಿಂದೂಗಳು ಸೇರಿ ಎಲ್ಲ ವರ್ಗದವರು, ರೈತರ ಹಿತ ಕಾಪಾಡಲಿ. ಹತ್ತು ದಿನದಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಅಲೆ ಎಬ್ಬಿಸಲಿ ಎಂಬುದೇ ನಮ್ಮ ಆಶಯವಾಗಿದೆ.
Leave A Reply